ಭವಿಷ್ಯ

03 ಅಕ್ಟೋಬರ್: ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೩ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೩೩
ಸೂರ್ಯಾಸ್ತ : ೧೮:೨೧
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಭಾದ್ರಪದ

ಪಕ್ಷ : ಕೃಷ್ಣ ಪಕ್ಷ
ತಿಥಿ : ನವಮೀ – ೨೪:೧೦+ ವರೆಗೆ
ನಕ್ಷತ್ರ : ಪುನರ್ವಸು – ೨೨:೨೪ ವರೆಗೆ
ಯೋಗ : ಪರಿಘ – ೧೨:೨೬ ವರೆಗೆ
ಸೂರ್ಯ ರಾಶಿ : ಕನ್ಯಾ

ಅಭಿಜಿತ್ ಮುಹುರ್ತ:ಯಾವುದೂ ಇಲ್ಲ
ಅಮೃತಕಾಲ: ೨೦:೦೮ – ೨೧:೩೯
ರಾಹು ಕಾಲ:೧೨:೨೭ – ೧೩:೫೫
ಗುಳಿಕ ಕಾಲ:೧೦:೫೮ – ೧೨:೨೭
ಯಮಗಂಡ:೦೮:೦೧ – ೦೯:೩೦

ಹೊತ್ತು ಬಂದಂತೆ ಛತ್ರಿ ಹಿಡಿಯಬೇಕು ಎನ್ನುವಂತೆ ಸದ್ಯದ ಪರಿಸ್ಥಿತಿಯನ್ನು ನಿಮ್ಮ ಪರವಾಗಿ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ಮಾಡುವಿರಿ. ಮನೋವೇಗವನ್ನು ಹೊಂದಿರುವ ಆಂಜನೇಯ ಸ್ವಾಮಿ ಸ್ಮರಣೆಯಿಂದ ನಿಮ್ಮ ಕಾರ್ಯ ಕೈಗೂಡುವುದು.

ನಿಮ್ಮ ಎದುರು ನಿಂತು ಮಾತನಾಡುವ ಧೈರ್ಯವಿಲ್ಲದ ಶತ್ರುಗಳು ಬೇರೆ ರೀತಿಯ ವ್ಯೂಹವನ್ನು ರಚಿಸುವರು. ಈ ಬಗ್ಗೆ ಜಾಗ್ರತೆಯಾಗಿರಿ. ಕಲ್ಮಶ ರಹಿತ ನಿಮ್ಮ ಧೈರ್ಯ ಧೋರಣೆಗಳು ನಿರೀಕ್ಷಿತ ಯಶಸ್ಸು ತಂದುಕೊಡುವವು.

ಯುದ್ಧದ ಮೊದಲೇ ಸೋಲುವ ಕುರಿತು ಚಿಂತಿಸದಿರಿ. ಮಾಡು ಇಲ್ಲವೆ ಮಡಿ ಎನ್ನುವ ಧ್ಯೇಯೋದ್ದೇಶದಿಂದ ಹೋರಾಟ ಮಾಡಿರಿ. ಯಶಸ್ಸು ದೊರೆತರೆ ಜನರು ಹರ್ಷಿಸುವರು. ಸೋತರೆ ಅದು ಜೀವನಕ್ಕೊಂದು ಪಾಠ ಆಗುವುದು.

ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಸರಳವಾದ ಪರಿಶ್ರಮವಿರದ ಪ್ರಯತ್ನದಿಂದ ಲಕ್ಷ್ಮೀಯು ಪ್ರಸನ್ನಳಾಗಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಿ. ಸದ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚು ಶ್ರಮ ಪಡಬೇಕಾಗುವುದು.

 

ಸಮಯ ಸಾಧಕರನ್ನು ಎಷ್ಟೆಂದು ದೂರ ಇಡುತ್ತೀರಿ? ಆದರೂ ನಿಮ್ಮ ತಾರ್ಕಿಕ ಹೆಜ್ಜೆಗಳು ಅವರಿಗೆ ಪಾಠವನ್ನು ಕಲಿಸುವುದು ಮತ್ತು ಅವರು ನಿಮ್ಮಿಂದ ದೂರ ಸರಿಯಲು ಸಹಕಾರಿಯಾಗುವುದು

 

ಅನಗತ್ಯ ವಸ್ತುಗಳ ಖರೀದಿಗೆ ದುಂದುವೆಚ್ಚ ಮಾಡದಿರಿ. ನಿಮಗೆ ಬರಬೇಕಾಗಿದ್ದ ಹಣವು ಸಕಾಲದಲ್ಲಿ ಬರುವುದಿಲ್ಲ. ಹಾಗಾಗಿ ಈ ದಿನ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

 

ಕಷ್ಟಕಾಲದಲ್ಲಿಯೇ ನಿಜವಾದ ಗೆಳೆಯರ ಸ್ವಭಾವ ಗೊತ್ತಾಗುವುದು. ಹಾಗಾಗಿ ನಿಮ್ಮನ್ನು ಓಲೈಸಿ ನಿಮ್ಮಿಂದ ಸಹಾಯ ಪಡೆಯುವ ಗೆಳೆಯರು ಇಂದು ನಿಮ್ಮಿಂದ ದೂರವಾಗುವರು. ನಿಮ್ಮ ಕಾರ್ಯದಲ್ಲಿ ತಪ್ಪನ್ನು ತಿಳಿಸುವ ಸ್ನೇಹಿತರೆ ಇಂದು ಸಹಾಯ ಮಾಡುವರು.

 

ಫಲಿತಾಂಶದ ಕಡೆಗೆ ತಲೆ ಕೆಡಿಸಿಕೊಳ್ಳದಿರಿ. ನಿಮ್ಮದು ಪರಿಶ್ರಮದ ಕೆಲಸವಾಗಿದ್ದರೆ ನಿಶ್ಚಿತವಾದ ಯಶಸ್ಸು ದೊರೆಯುವುದು. ದೈವಕೃಪೆ ನಿಮ್ಮ ಮೇಲೆ ಇರುವುದರಿಂದ ಫಲಿತಾಂಶದ ಕಡೆಗೆ ಅನುಮಾನ ಬೇಡ.

 

ಮಾತೃ ವರ್ಗದವರಿಂದ ಅಲ್ಪ ಕಿರಿಕಿರಿ ಆಗುವುದು. ಮಾತಿನ ಜಾಣ್ಮೆ ಹಾಗೂ ಹಿರಿತನದಿಂದಾಗಿ ಕುಟುಂಬದಲ್ಲಿನ ಬಿಗುವಿನ ವಾತಾವರಣವನ್ನು ದೂರ ಮಾಡಬಲ್ಲಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು.

ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು.

 

 

ಅನಿರೀಕ್ಷಿತವಾದ ಬೆಳವಣಿಗೆಯೊಂದು ಮೇಲ್ನೋಟಕ್ಕೆ ದುಃಖ ತಂದರೂ ಹಲವು ಹೊಸ ದಾರಿಗಳು ತೆರೆಯುತ್ತವೆ. ದೃಢ ಮನಸ್ಸಿನಿಂದ ಕಾರ್ಯ ಪ್ರವೃತ್ತವಾದರೆ ಒಳಿತಾಗುವುದು.

ಮನಸ್ಸಿನಲ್ಲಿ ಮಂಡಿಗೆ ಇಟ್ಟುಕೊಂಡು ಗೋಧಿಲೆಕ್ಕವನ್ನು ಕೇಳಿದರೆ ಹೇಗೆ. ಅಂತೆಯೆ ನಿಮ್ಮ ಭಾವನೆಗಳನ್ನು ಪರರ ಮುಂದೆ ಹೇಳಿಕೊಳ್ಳದೆ ನಿಮ್ಮ ಕೆಲಸವನ್ನು ಹೇಗೆ ತಾನೇ ಮಾಡಲು ಸಾಧ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top