ಧರ್ಮ

100 ದೋಷಗಳಿಗೆ ಒಂದೇ ಪರಿಹಾರ ,ಏನ್ ಆ ಪರಿಹಾರ,ಹೇಗೆ ಮಾಡಬೇಕು ತಪ್ಪದೆ ತಿಳ್ಕೊಂಡು ದೋಷ ಮುಕ್ತರಾಗಿ

ನೂರು ದೋಷ ಒಂದೇ ಉಪಾಯ ಏನಿದು ?ಯಾವುದು ಆ ಪರಿಹಾರ.ಹೇಗೆ ಮಾಡಬೇಕು ? ಏನು ಮಾಡಬೇಕು ?
ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು, ಸಂತಾನ, ಸಾಂಸಾರಿಕ ಸುಖ, ಅನಾರೋಗ್ಯ, ಗುರು ಚಂಡಾಳ ದೋಷ, ಚಂದ್ರ ಗ್ರಹಣ ದೋಷ, ಸೂರ್ಯ ಗ್ರಹಣ ದೋಷ ಹೀಗೆ ನಿಮಗೆ ನೂರು ಸಮಸ್ಯೆಗಳಿದ್ದರೂ ಅದು ಒಂದೇ ಒಂದು ಪರಿಹಾರದಿಂದ ಸರಿ ಹೋಗುತ್ತದೆ. ಆ ಪರಿಹಾರ ಯಾವುದು ? ನೂರು ಸಮಸ್ಯೆಗೆ ಇರುವ ಒಂದೇ ಒಂದು ಉಪಾಯ ಯಾವುದು ?
ನಿಮಗೆ ಕಂಕಣಭಾಗ್ಯ ಕೂಡಿ ಬರುತ್ತಿಲ್ಲವೇ ? ಸಂತಾನ ಸುಖದಿಂದ ವಂಚಿತರಾಗಿದ್ದೀರೆ ? ನೂರು ದೋಷಗಳಿಗೆ ಒಂದೇ ಉಪಾಯ. ನಿಮಗೆ ಆಶ್ಚರ್ಯವೆನಿಸಿದರೂ ಇದು ಸತ್ಯ. ಪಿತೃಗಳ ಕೃಪೆ ಮತ್ತು ಆಶೀರ್ವಾದ ಇದ್ದರೆ ನಿಮ್ಮ ಕುಂಡಲಿಯಲ್ಲಿರುವ ಅನೇಕ ದೋಷಗಳು ಪರಿಹಾರವಾಗುತ್ತವೆ. ವಿಶೇಷವಾಗಿ ಮಹಾಲಯ ಅಮಾವಾಸ್ಯೆಯಂದು ಪಿತೃಗಳಿಗೆ ತರ್ಪಣ ನೀಡಿದರೆ, ಶ್ರಾದ್ಧ ಕಾರ್ಯ ಮಾಡಿದರೆ, ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಪಿತೃ ಪಕ್ಷದಲ್ಲಿ ಪಿತೃಗಳು ನೀವು ಮಾಡುವ ಶ್ರಾದ್ಧಕ್ಕಾಗಿ ಮತ್ತು ತರ್ಪಣಕ್ಕಾಗಿ ಕಾಯುತ್ತಿರುತ್ತಾರೆ. ಶ್ರಾದ್ಧ ಮಾಡುವುದರಿಂದ ತರ್ಪಣ ಕೊಡುವುದರಿಂದ ಪಿತೃಗಳಿಗೆ ತೃಪ್ತಿ ಸಿಗುತ್ತದೆ. ಪಿತೃಗಳ ಆಶೀರ್ವಾದ ನಿಮ್ಮ ಮೇಲಿದ್ದರೆ ಜೀವನದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.
ಪಿತೃಕಾರ್ಯ ಮಾಡುವುದರಿಂದ ಸಿಗುವ ಫಲಗಳು : ರೋಗಗಳಿಂದ ಮುಕ್ತಿ ಪಡೆಯಬಹುದು. ಕೌಟುಂಬಿಕ ಸಂಬಂಧದಲ್ಲಿ ಸುಖ ಇರುತ್ತದೆ. ನೌಕರಿಯಲ್ಲಿ ತೊಂದರೆ ಇದ್ದರೆ ಅದು ಪರಿಹಾರವಾಗುತ್ತದೆ. ಗ್ರಹ ದೋಷಗಳಿಂದ ಮುಕ್ತರಾಗಬಹುದು. ಇದಿಷ್ಟೇ ಅಲ್ಲದೆ ಜಾತಕ ಕುಂಡಲಿಯಲ್ಲಿರುವ ಅನೇಕ ಸಮಸ್ಯೆಗಳನ್ನು ಪಿತೃಪಕ್ಷದಲ್ಲಿ ದೂರ ಮಾಡಿಕೊಳ್ಳಬಹುದು.ಮೊದಲು ಗುರು ಚಂಡಾಳ ದೋಷದಿಂದ ಮುಕ್ತಿ ಪಡೆಯಲು ಪಿತೃಪಕ್ಷದಲ್ಲಿ ಏನು ಮಾಡಬೇಕು ? ಎಂದು ನೋಡೋಣ.

 

 

 

ಪಿತೃಗಳ ಆಶೀರ್ವಾದದಿಂದ ದೂರವಾಗುತ್ತದೆ ಗುರು ಚಂಡಾಳ ದೋಷ. ರಾಹು ಬೃಹಸ್ಪತಿ ಜೊತೆಯಲ್ಲಿದ್ದಾಗ ಈ ಗುರು ಚಂಡಾಳ ಯೋಗ ಬರುತ್ತದೆ. ಈ ಯೋಗದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ವಿವಾಹ ,ಅನಾರೋಗ್ಯ, ಸಂತಾನ, ನೌಕರಿಯಲ್ಲಿ ಸಮಸ್ಯೆ, ಅನೇಕ ತೊಂದರೆಗಳು ಎದುರಾಗುತ್ತವೆ. ಈ ಸಮಸ್ಯೆಗಳ ನಿವಾರಣೆಗಾಗಿ ಪಿತೃಪಕ್ಷದಲ್ಲಿ ಉಪಾಯವಿದೆ. ಪಿತೃಪಕ್ಷದಲ್ಲಿ ಬಾಳೆ ಹಣ್ಣನ್ನು ದಾನ ಮಾಡಿದರೆ ಶ್ರೇಷ್ಠ. ಬೆಳಗ್ಗೆ ಮತ್ತು ಸಂಜೆ ಭಗವದ್ಗೀತೆಯ 11ನೇ ಅಧ್ಯಾಯವನ್ನು ಪಠಿಸಿ . ಬೆಳಗ್ಗೆ ಮತ್ತು ಸಂಜೆ ಉದ್ದಿನಬೇಳೆ ಮತ್ತು ಉದ್ದಿನಬೆಳೆಯ ನೀರನ್ನು ಅರಳಿ ಮರದ ಕೆಳಗೆ ಇಡಿ. ಸಾಧ್ಯವಾದರೆ ಅರಳಿ ಮರದ ಸಸಿಯನ್ನು ನೆಡಬೇಕು. ಇದರಿಂದ ಗುರು ಚಂಡಾಳ ದೋಷ ನಿವಾರಣೆಯಾಗುತ್ತದೆ.ಪಿತೃಪಕ್ಷದಲ್ಲಿ ಮಾಡುವ ಸಣ್ಣ ಸಣ್ಣ ಉಪಾಯಗಳು ಅತ್ಯಂತ ಲಾಭಕಾರಕ. ಇದರಿಂದ ಭಾಗ್ಯವೇ ಬದಲಾಗುತ್ತದೆ. ನಿಮ್ಮ ಕುಂಡಲಿಯಲ್ಲಿ ಚಂದ್ರ ಗ್ರಹ ದೋಷವಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ಮಹಾಲಯ ಅಮಾವಾಸ್ಯೆ ಅತ್ಯಂತ ಶ್ರೇಷ್ಠ.

ಚಂದ್ರಗ್ರಹಣದ ದೋಷದ ಸಮಸ್ಯೆಗಳು:ಮಹಾಲಯ ಅಮಾವಾಸ್ಯೆಯ ದಿನ ಪಿತೃ ಪಕ್ಷ ವನ್ನು ಆಚರಣೆ ಮಾಡುವುದರಿಂದಸಾಮಾನ್ಯವಾಗಿ ಚಂದ್ರಗ್ರಹದ ದೋಷವಿದ್ದರೆ, ಮಾನಸಿಕ ಸಮಸ್ಯೆ ಉಂಟಾಗುತ್ತದೆ. ಆರೋಗ್ಯದಲ್ಲಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ದೋಷ ನಿವಾರಣೆಗೆ ಸರಳ ಪರಿಹಾರಗಳು ಇವೆ.ಮಹಾಲಯ ಅಮಾವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡಿ, ಬಿಳಿಯ ಬಣ್ಣದ ಹೂವಿನಿಂದ ಪಿತೃಗಳಿಗೆ ಅರ್ಘ್ಯ ನೀಡಿ, ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ವಸ್ತ್ರ ದಾನ ಮಾಡಿ, ಪಿತೃಪಕ್ಷದಲ್ಲಿ ರುದ್ರಾಷ್ಟಕವನ್ನು ಪಠಿಸಿ, ಮಹಾಲಯ ಅಮಾವಾಸ್ಯೆಯಂದು ಬಡವರಿಗೆ ಅನ್ನದಾನ ಮಾಡಿದರೆ ಚಂದ್ರಗ್ರಹಣ ದೋಷ ನಿವಾರಣೆಯಾಗುತ್ತದೆ. ಗುರು ಚಂಡಾಳ ದೋಷ ಮತ್ತು ಚಂದ್ರಗ್ರಹಣ ದೋಷದ ಜೊತೆಗೆ ಸೂರ್ಯಗ್ರಹಣ ದೋಷವು ಅನೇಕರನ್ನು ಕಾಡುತ್ತದೆ ಇದರಿಂದ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ. ಪಕ್ಷದಲ್ಲಿ ಸೂರ್ಯಗ್ರಹಣ ದೋಷಕ್ಕೆ ಪರಿಹಾರ ಮಾಡಿಕೊಳ್ಳಬಹುದು.

 

 

 

ಸೂರ್ಯ ಗ್ರಹಣ ದೋಷ ನಿವಾರಣೆಗೆ ಹೇಗೆ ?
ಸೂರ್ಯ ಮತ್ತು ರಾಹು ಸಂಯೋಗದಿಂದ ಸೂರ್ಯ ಗ್ರಹಣ ಯೋಗ ಜಾತಕದಲ್ಲಿ ಉಂಟಾಗುತ್ತದೆ.ಈ ಯೋಗದಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತದೆ. ಉದ್ಯೋಗ ಮತ್ತು ಕೌಟುಂಬಿಕ ಸಮಸ್ಯೆಗಳಲ್ಲಿ, ಸಂಬಂಧಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪಿತೃ ಪಕ್ಷದಲ್ಲಿ ಸೂರ್ಯನಿಗೆ ಕಪ್ಪು ಎಳ್ಳಿನಿಂದ ಆರ್ಘ್ಯವನ್ನು ಕೊಡಬೇಕು. ಬ್ರಹ್ಮ ಪುರಾಣದಲ್ಲಿರುವ ಸೂರ್ಯ ಸ್ತೋತ್ರವನ್ನು ಪಠಿಸಿ. ಪುರುಷರಿಗೆ ಕಟ್ಟಿಗೆಯ ವಸ್ತುಗಳನ್ನು ದಾನ ಮಾಡಬೇಕು. ಮಹಾಲಯ ಅಮಾವಾಸ್ಯೆಯ ದಿನ ಬಡವರಿಗೆ ಬೆಲ್ಲವನ್ನು ದಾನ ಮಾಡಿದರೆ ಸೂರ್ಯ ಗ್ರಹ ದೋಷ ಪರಿಹಾರವಾಗುತ್ತದೆ. ಪಿತೃ ಪಕ್ಷದ 15 ದಿನಗಳು ಶ್ರಾದ್ಧ ಕಾರ್ಯ ಮತ್ತು ತರ್ಪಣ ಕಾರ್ಯಕ್ಕೆ ಅತ್ಯಂತ ಶ್ರೇಷ್ಠವಾದ ದಿನ ಎಂದರೆ ಅದು ಮಹಾಲಯ ಅಮಾವಾಸ್ಯೆ ದಿನ. ನೀವು ಮಾಡುವ ದಾನ ಪಿತೃಗಳಲ್ಲಿ ಸ್ಮರಣೆಯಾಗಿ ಜೀವನದಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಪಿತೃ ಕಾರ್ಯಕ್ಕೆ ಶ್ರೇಷ್ಠ ದಿನ ಮಹಾಲಯ ಅಮಾವಾಸ್ಯೆ. ಅಂದು ನೀವು ಪಿತೃಕಾರ್ಯ ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.
ಬೆಳಗ್ಗೆ ಮತ್ತು ಸಂಜೆ ಸ್ನಾನದ ನಂತರ ಪಿತೃಗಳನ್ನು ನೆನೆಸಿಕೊಳ್ಳಿ. ಬೆಳಗ್ಗೆ 11.30 ರಿಂದ 12.30 ರವರೆಗೆ ಪಿತೃಗಳಿಗೆ ತರ್ಪಣ ಕೊಡಿ. ಮಹಾಲಯ ಅಮಾವಾಸ್ಯೆಯ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ ಪಿತೃಗಳಿಗೆ ಕಡಿಮೆ ಸುಗಂಧ ಇರುವ ಪುಷ್ಪಗಳನ್ನು ಅರ್ಪಿಸಬೇಕು. ದಕ್ಷಿಣ ದಿಕ್ಕಿಗೆ ನಿಂತು ತರ್ಪಣವನ್ನು ಕೊಡಬೇಕು. ಸಾಲ ಮಾಡಿ ಶ್ರಾದ್ಧ ಕಾರ್ಯ ಮಾಡಬಾರದು. ಮಹಾಲಯ ಅಮಾವಾಸ್ಯೆಯ ದಿನ ಕಡ್ಡಾಯವಾಗಿ ಭಗವದ್ಗೀತೆಯನ್ನು ಓದಿ, ಮಹಾಲಯ ಅಮಾವಾಸ್ಯೆಯ ದಿನ ಮದ್ಯ, ಮಾಂಸ ,ಧೂಮಪಾನ ಸೇವನೆ ನಿಷಿದ್ಧ. ಶಾಸ್ತ್ರಗಳಲ್ಲಿ ಪಿತೃ ಪಕ್ಷದ ಬಗ್ಗೆ ಸುಂದರವಾಗಿ ಉಲ್ಲೇಖಿಸಿದ್ದಾರೆ. ಪುರಾಣಗಳಲ್ಲಿ ಪಿತೃ ಪೂಜೆಯ ಬಗ್ಗೆ ಅನೇಕ ಕಥೆಗಳಿವೆ. ಶ್ರಾದ್ಧ ಮಾಡುವುದು ಮನುಷ್ಯನ ಅತ್ಯವಶ್ಯಕ ಕರ್ಮ. ಆರ್ಥಿಕ ಸಮಸ್ಯೆ ಇದ್ದರೆ ಜಲದಿಂದ ತರ್ಪಣ ಕೊಟ್ಟರು ಪಿತೃಗಳು ಆಶೀರ್ವಾದ ಮಾಡುತ್ತಾರೆ. ಸುಖ ಸಮೃದ್ಧಿಯ ವರದಾನ ನೀಡುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top