ಸಮಾಚಾರ

ಶೂಟಿಂಗ್ ಸೆಟ್’ನಲ್ಲಿ ಹಾಸ್ಯನಟನಿಗೆ ಕಪಾಳಕ್ಕೆ ಹೊಡೆದ ಆರೋಪ- ಪ್ರಕಾಶ್​ ರೈ ಹೇಳಿದ್ದೇನು?

ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಪ್ರಕಾಶ್ ರೈ ಇತ್ತೀಚಿನ ದಿನಗಳಲ್ಲಿ ಒಂದು ಪಂಥದವರನ್ನು ಗುರಿಯಾಗಿಟ್ಟುಕೊಂಡು ನೇರಾನೇರಾ ವಾದ ಮಂಡಿಸುತ್ತಾ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿದ್ದರು. ಹಿಂದೆಲ್ಲಾ ಕೇವಲ ತಮ್ಮ ಸಿನಿಮಾ ಮತ್ತು ಅಮೋಘ ಅಭಿನಯದ ಮೂಲಕ ಮಾತ್ರವೇ ಸುದ್ದಿಯಾಗುತ್ತಿದ್ದ ಪ್ರಕಾಶ್ ರೈ ಈಗೆಲ್ಲಾ ಕೇವಲ ಅನಗತ್ಯ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳೋ ಮೂಲಕವೇ ಸುದ್ದಿಯಾಗುತ್ತಿದ್ದಾರೆ.. ಇಂಥಾ ರೈ ಈಗ ಮತ್ತೊಂದು ವಿವಾದಕ್ಕೀಡಾಗಿದ್ದಾರೆ.

 

 

ಪ್ರಕಾಶ್ ರೈ ಶೂಟಿಂಗ್ ಸ್ಪಾಟ್ ನಲ್ಲಿ ಸಹನಟನ ಕಪಾಳಕ್ಕೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಹಲೋ ಗುರು ಪ್ರೇಮಕೋಸಮೆ ಎಂಬ ತೆಲುಗು ಚಿತ್ರದಲ್ಲಿ ಪ್ರಕಾಶ್ ರೈ ಜೊತೆ ಖ್ಯಾತ ಹಾಸ್ಯನಟ ಸಪ್ತಗಿರಿ ನಟಿಸುತ್ತಿದ್ದು ಚಿತ್ರ ಬಿಡುಗಡೆಗೂ ಸಿದ್ಧವಾಗಿದೆ. ಅಂದು ಚಿತ್ರೀಕರಣಕ್ಕಾಗಿ ರೈಲ್ವೆ ಸ್ಟೇಷನ್ ಸೆಟ್ ಹಾಕಲಾಗಿತ್ತು. ನೂರಾರು ಜೂನಿಯರ್ ಕಲಾವಿದರುಗಳು ಇದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕೋಪಗೊಂಡ ಪ್ರಕಾಶ್ ರೈ ಸಪ್ತಗಿರಿ ಕೆನ್ನೆಗೆ ಬಾರಿಸಿದ್ದಾರೆ” ಎಂಬ ಗಾಸಿಪ್ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಪಸರಿಸಿಕೊಂಡಿದೆ. ಆದರೆ ಈ ಸುದ್ದಿ ನಿಜವೋ? ಅಥವಾ ಸುಳ್ಳೋ? ಎಂಬುದರ ಬಗ್ಗೆ ಯಾವುದೇ ಕ್ಲಾರಿಟಿ ಸಿಕ್ಕಿಲ್ಲ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಪ್ರಕಾಶ್ ರೈ, “ಇದು ಸುಳ್ಳು ಸುದ್ದಿ., ನಾನ್ಯಾಕೆ ಅವರ ಕೆನ್ನೆಗೆ ಹೊಡೆಯಲಿ? ಅವರು ಉದಯೋನ್ಮುಖ ಪ್ರತಿಭಾನ್ವಿತ ನಟ. ಅವರ ಚೊಚ್ಚಲ ಚಿತ್ರಕ್ಕೆ ನಾನೇ ಖುದ್ದು ಶುಭಾಶಯ ಕೋರಿದ್ದೀನಿ. ಅವರ ಜೊತೆ ಇನ್ನಷ್ಟು ಭಾರಿ ನಟಿಸಲು ಇಷ್ಟ ಪಡುತ್ತೇನೆ” ಎಂದಿದ್ದಾರೆ. ಇನ್ನು ಈ ಬಗ್ಗೆ ಹಾಸ್ಯನಟ ಸಪ್ತಗಿರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top