ಮನೋರಂಜನೆ

ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ.

ಡಾ. ರಾಜ್‌ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ. ಡಾ. ರಾಜಕುಮಾರ್ ಸಹೋದರ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್ಪಿ ವರದಪ್ಪನವರ ಮೊಮ್ಮಗ ಪೃಥ್ವಿ ವಿಜಯ್ ಕುಮಾರ್ ನಟನಾಗಲು ಸಾಕಷ್ಟು ವರ್ಷಗಳಿಂದ ಎಲ್ಲಾ ತಯಾರಿಗಳನ್ನು ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

 

 

ಪೃಥ್ವಿ ವಿಜಯ್ ಕುಮಾರ್ ಇದೀಗ ಮಿಂಚುಹುಳ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ‘ಮಿಂಚುಹುಳು’ ಚಿತ್ರ ಮಕ್ಕಳ ಕಥೆಯಾಧಾರಿತ ಚಿತ್ರವಾಗಿದ್ದು ಈ ಚಿತ್ರವನ್ನು ಕುಮಾರ್ ಮಹೇಶ್ ಎಂಬುವರು ನಿರ್ದೇಶಿಸುತ್ತಿದ್ದಾರೆ. ಇನ್ನು ಪೃಥ್ವಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಕುಮಾರ್ ಮಹೇಶ್ ಹೇಳಿದ್ದಾರೆ.

ಮಿಂಚುಹುಳು ಚಿತ್ರಕ್ಕೆ ಇತ್ತೀಚಿಗಷ್ಟೇ ಚಾಲನೆ ಸಿಕ್ಕಿದು ರಾಜ್ ಪುತ್ರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಅವರೇ ಚಾಲನೆ ನೀಡಿದ್ದಾರೆ.. ಇನ್ನು ಈ ಚಿತ್ರದಲ್ಲಿ ಬಾಲ ಪ್ರತಿಭೆ ಪ್ರೀತಂ ಕೂಡ ಅಭಿನಯಿಸುತ್ತಿದ್ದಾರೆ. ಅಂದಹಾಗೆ ಪ್ರೀತಂ ಇತ್ತೀಚೆಗಷ್ಟೇ ಕಿರುತೆರೆಯ ಡಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ ವಿಜೇತರಾಗಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top