fbpx
ಮನೋರಂಜನೆ

ಗಡಿಬಿಡಿ ಕೃಷ್ಣನನ್ನು ಟಕ್ಕಾಯಿಸಿದ್ದ ಗುಂಡು ಚೆಲುವೆ ನಟಿ ರವಳಿ ಈಗ ಹೇಗಿದ್ದಾರೆ ಗೊತ್ತಾ

ಕನ್ನಡದಲ್ಲಿ ತೊಂಬತ್ತರ ದಶಕದಲ್ಲಿ ಅನೇಕ ಹೀರೋಯಿನ್ ಗಳು ದಕ್ಷಿಣ ಭಾರತದ ವಿವಿಧ ಚಿತ್ರರಂಗಕ್ಕೆ ಚಿತ್ರರಂಗದಿಂದ ಕನ್ನಡಕ್ಕೆ ಬಂದರು ಅದರಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಯಶಸ್ವಿಯಾಗಲು ಸಾಧ್ಯವಾಯ್ತು ಹೀಗಿರುವಾಗ ಮುದ್ದು ಮುಖದ ಗುಂಡು ಚೆಲುವೆ ರವಳಿ ಕೂಡ ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಿದ್ದರು.

1998 ರಲ್ಲಿ ಓಂ ಸಾಯಿಪ್ರಕಾಶ್ ಅವರ ನಿರ್ದೇಶನದಲ್ಲಿ ಭಾರತಿ ದೇವಿ ಅವರು ಹಣಕಾಸು ಹೂಡಿ ನಿರ್ಮಾಣ ಮಾಡಿದ್ದ ‘ಗಡಿಬಿಡಿ ಕೃಷ್ಣ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು, ರವಳಿ ಜೊತೆ ಮತ್ತೊಂದು ತೆಲುಗಿನ ಚೆಲುವೆ ಇಂದ್ರಾಜ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದರು ಹಂಸಲೇಖ ಅವರ ‘ಟಕ್ಕಾಟಕ್ಕ ಟಕ್ಕಯಿಸು’ ಹಾಡು ಫೇಮಸ್ಸಾಗಿತ್ತು ಆಗಿನ ಕಾಲದಲ್ಲಿ ಈ ಒಂದೇ ಹಾಡಿಂದ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು ತೆಲುಗು ಚೆಲುವೆಯರು .ಇದಾದ ನಂತರ ಹಾಟ್ ಬೆಡಗಿ ಕನ್ನಡ ಚಿತ್ರದಲ್ಲಿ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಯಿತು ‘ಗಡಿಬಿಡಿ ಕೃಷ್ಣ’ ಚಿತ್ರದ ನಂತರ ‘ಕುಬೇರ’, ‘ಖಳನಾಯಕ’, ‘ವೀರಣ್ಣ’ ಚಿತ್ರಗಳಲ್ಲೂ ಸಹ ರವಳಿ ಅಭಿನಯ ಮಾಡಿದರು .

ಯಾರು ಈ ರವಳಿ ?

 

 

 

ಆಂಧ್ರಪ್ರದೇಶದ ಗುಡಿವಾಡದಲ್ಲಿ ಜನಿಸಿದರೂ ನಟಿ ರವಳಿ ಈಕೆಯ ಮೂಲ ಹೆಸರು ಶೈಲಜಾ ಮೂಲ ಹೆಸರನ್ನು ಬದಲಾಯಿಸಿ ಆ ನಂತರ ಅಪ್ಸರಾ ಎಂದು ಇಟ್ಟುಕೊಂಡಿದ್ದರು ಆದರೆ ಈ ಹೆಸರು ಆಕೆಗೆ ಕೂಡಿಬರಲಿಲ್ಲ ಆ ನಂತರ ರವಳಿಎಂದು ತಮ್ಮ ಹೆಸರನ್ನು ಮತ್ತೊಮ್ಮೆ ಬದಲಾಯಿಸಿಕೊಂಡಿದ್ದರು ಈ ನಟಿ,’ಅಲಿಬಾಬಾ ಅರಡಝನ್ ದೊಂಗಲು’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರವಳಿ ಅನೇಕ ತೆಲುಗು ಚಿತ್ರಗಳನ್ನುತಮ್ಮದೇ ಶೈಲಿಯಲ್ಲಿ ಜೀವ ತುಂಬಿಸುವ ಮೂಲಕ ಯಶಸ್ವಿಗೊಳಿಸಿದರು ಆ ನಂತರ ತಮಿಳು ,ಮಲಯಾಳಂ, ಕನ್ನಡ ,ಹಿಂದಿ ಈಗ ಹೀಗೆ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದರು .ಮಿಥುನ್ ಚಕ್ರವರ್ತಿ ಅವರ ಸಹಾಯದಿಂದ ಹಿಂದಿಯ ಮರ್ಧ ಚಿತ್ರದಲ್ಲೂ ಅವಕಾಶ ಪಡೆದುಕೊಂಡರು .
‘ಶುಭ ಕಾಂಶಲು’ , ‘ಪೆಳ್ಳಿ ಸಂಗಡಿ’ ದಂತಹ ಚಿತ್ರಗಳು ಆಕೆಗೆ ಪಕ್ಕದ ಮನೆಯ ಹುಡುಗಿ ಎಂಬ ಇಮೇಜ್ ಅನ್ನು ತಂದುಕೊಟ್ಟವು .

ಸುಮಾರು ಹನ್ನೆರಡು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ನಟಿ ರವಳಿ ಎಲ್ಲಿಯೂ ಕೂಡ ವಿವಾದಗಳನ್ನು ಮಾಡಿಕೊಂಡಿರಲಿಲ್ಲ ಆದರೆ ನಾಗಲಿಂಗಂ ಎಂಬ ಚಿತ್ರದ ನಿರ್ಮಾಪಕರು ಆಕೆಗೆ ಹಣವನ್ನು ನೀಡದೇ ಇದ್ದಾಗ ಆಕೆ ಕಲಾವಿದರ ಸಂಘಕ್ಕೆ ನಿರ್ಮಾಪಕರ ಮೇಲೆ ದೂರು ದಾಖಲಿಸಿದ್ದರು .

2005 ರಲ್ಲಿ ಜಗ್ಗೇಶ್ ಅವರ ಜೊತೆ ವೀರಣ್ಣ ಚಿತ್ರದಲ್ಲಿ ಅಭಿನಯ ಮಾಡಿದ್ದರು ಆ ನಂತರ ಆಕೆಗೆ ಯಾವುದೇ ಚಿತ್ರರಂಗದಿಂದ ಅಷ್ಟೊಂದು ಒಳ್ಳೆಯ ಅವಕಾಶಗಳು ದೊರೆಯಲಿಲ್ಲ, ಕೆಲವು ಸೀರಿಯಲ್ ಗಳಲ್ಲಿ ನಟನೆ ಮಾಡಿದರು ಸಹ ಆಕೆಗೆ ಸಮಾಧಾನ ದೊರೆಯಲಿಲ್ಲ , ಇದಾದ ಬಳಿಕ 2007 ರಲ್ಲಿ ನೀಲಿ ಕೃಷ್ಣ ಎಂಬ ಸಾಫ್ಟ್ವೇರ್ ಉದ್ಯಮಿಯನ್ನು ಮದುವೆಯಾದರು .ಮದುವೆ ಆದ ನಂತರ ಆಕೆ ಚಿತ್ರರಂಗಕ್ಕೆ ಸಂಪೂರ್ಣ ವಿದಾಯವನ್ನು ಹೇಳಿದ್ದರು.2008 ರಲ್ಲಿ ಆಕೆಗೆ ಹೆಣ್ಣುಮಗುವೊಂದು ಜನಿಸಿತು , 2009 ರಲ್ಲಿ ತೆಲುಗು ದೇಶಂ ರಾಜಕೀಯ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಿ ಪಕ್ಷದ ಕಾರ್ಯಕರ್ತೆಯಾಗಿದ್ದರು ರವಳಿ,ಮಗುವನ್ನು ನೋಡಿಕೊಂಡು ಸಂಸಾರವನ್ನು ನಿಭಾಯಿಸುತ್ತಾ ಲೈಫ್ ಅಲ್ಲಿ ಸೆಟಲ್ ಆಗಿ ಆರಾಮಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top