ಸಮಾಚಾರ

“ಅಭಿಮಾನಿಗಳು ಗಲಾಟೆ ಮಾಡ್ಕೋಂಡ್ರೆ ನಮ್ ತಾಯಾಣೆಗೂ ಥಿಯೇಟರ್‌ಗೆ ಬರಲ್ಲ” ಶಿವಣ್ಣ ವಾರ್ನಿಂಗ್.

‘ದಿ ವಿಲನ್’ ಸದ್ಯ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಹವಾ ಎಬ್ಬಿಸಿರೋ ಸಿನಿಮಾ., ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರುವ ಪ್ರೇಮ್ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದ್ದಾರೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಹಾಡುಗಳ ಅಬ್ಬರ ಕಂಡು ಅನೇಕರು ಬೆಚ್ಚಿಬಿದ್ದಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದ್ದು ಮುಂದಿನ ತಿಂಗಳ ಹದಿನೆಂಟನೇ ತಾರೀಕಿನಂದು ತೆರೆಗೆ ಅಪ್ಪಳಿಸಲಿದೆ..

 

 

‘ದಿ ವಿಲನ್‌’ ಚಿತ್ರತಂಡ ಕರೆದಿದ್ದ ಬಿಡುಗಡೆ ಪೂರ್ವ ಮೊದಲ ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್‌ ಕುಮಾರ್‌ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುತ್ತಲೇ ಅಭಿಮಾನಿಗಳು ಸೃಷ್ಟಿಸಿರುವ ವಿವಾದಕ್ಕೆ ಪ್ರತಿಕ್ರಿಯಿಸಿದರು. “ಸಿನಿಮಾನ ಸಿನಿಮಾ ಥರ ಎಲ್ಲರು ನೋಡಿ, ಏನಾದ್ರೂ ಗಲಾಟೆ ಮಾಡಿದರೆ, ನಮ್ ತಾಯಾಣೆ ಇನ್ಮುಂದೆ ಥಿಯೇಟರ್ ಗೆ ಬರುವುದಿಲ್ಲ. ಜಗಳ ಮಾಡೋಕೆ ಹೋಗಬೇಡಿ. ” ಎಂದು ಶಿವಣ್ಣ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟರು.

“ಇದು ಕೇವಲ ಸಿನಿಮಾ ಅಷ್ಟೇ, ಇಲ್ಲಿ ಯಾರನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ.. ಚಿತ್ರದ ಟೀಸರ್‌ ರಿಲೀಸ್ ಆದ ನಂತರ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಇಬ್ಬರು ನಟರ ಅಭಿಮಾನಿಗಳು ಎಂದು ಹೇಳಿಕೊಳ್ಳುತ್ತಿರುವವರು ಸೋಷಿಯಲ್‌ ಮೀಡಿಯಾದಲ್ಲಿ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಅಲ್ಲಿಂದ ಅದು ಮಾಧ್ಯಮಗಳಿಗೂ ಚಾಚಿಕೊಂಡಿದೆ. ಇದು ನನಗೆ ಬೇಸರ ತಂದಿದೆ. ಅಭಿಮಾನಿಗಳು ಹೀಗೆಲ್ಲ ಮಾಡುವುದು ಸರಿಯಲ್ಲ. ಹಾಗೆ ಮಾಡುವುದಾದರೆ ಅಭಿಮಾನಿಗಳ ಜತೆಗೆ ನಾನು ಸಿನಿಮಾ ನೋಡುವುದನ್ನೇ ನಿಲ್ಲಿಸಬೇಕಾಗುತ್ತದೆ” ಎಂದು ಶಿವಣ್ಣ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top