fbpx
ಆರೋಗ್ಯ

ಸೀಮೆ ಬದನೇಕಾಯಿ ತಿಂದ್ರೆ ಈ 6 ಅದ್ಭುತ ಲಾಭಗಳನ್ನು ಪಡ್ಕೊಬಹುದು , ತೂಕ ಕಡಿಮೆ ಮಾಡ್ಕೋಬೇಕಾ ಅದಕ್ಕೂ ಇದೆ ಬೇಕು.

ಸೀಮೆ ಬದನೇಕಾಯಿ ತಿಂದ್ರೆ ಈ  ಅದ್ಭುತ ಲಾಭಗಳನ್ನು ಪಡ್ಕೊಬಹುದು.

 

 

 

ಪ್ರಪಂಚದಾದ್ಯಂತ ವಿಭಿನ್ನ ಹೆಸರುಗಳನ್ನು ಹೊಂದಿದ್ದರೂ, ಈ ಸಸ್ಯವು ಪೋಷಕಾಂಶಗಳಲ್ಲಿ ಹೆಚ್ಚು ಶ್ರೀಮಂತವಾಗಿರುವ ಆಹಾರಗಳಲ್ಲಿ ಒಂದಾಗಿದೆ.

ಮೆದುಳಿನ ಕಾರ್ಯ ಹೆಚ್ಚಿಸಲು:ನಿಮ್ಮ ಮೆದುಳಿನ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಸೀಮೆ ಬದನೇಕಾಯಿ ರಸವನ್ನು ಪ್ರತಿದಿನವೂ ನೀವು ಆಹಾರದಲ್ಲಿ ಸೇರಿಸಿಕೊಳ್ಳಬಹುದು.ಮೆದುಳಿನ ಕಾರ್ಯ ಮತ್ತು ಸ್ಮರಣೆಯನ್ನು ಹೆಚ್ಚಿಸಲು ಸಹಾಯ ಮಾಡುವ ಎಲ್ಲಾ ಪೋಷಕಾಂಶಗಳನ್ನು ಹೊಂದಿದೆ.

ಕ್ಯಾನ್ಸರ್ ವಿರೋಧಿ:ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಕ್ಯಾನ್ಸರ್ ಉಂಟುಮಾಡುವ ಫ್ರೀ ರಾಡಿಕಲ್ನಿಂದ ಜೀವಕೋಶಗಳ ರಕ್ಷಣೆ ಮಾಡಲು ವಿಟಮಿನ್ ಸಿ ಪರಿಣಾಮಕಾರಿ ಕ್ಯಾನ್ಸರ್ ನಿರೋಧಕವಾಗಿದೆ.ಸಂಶೋಧನೆಯ ಪ್ರಕಾರ ಸುಮಾರು 17 ಪ್ರತಿಶತದಷ್ಟು ಆರ್.ಡಿ.ಐ ಒದಗಿಸುತ್ತದೆ.

ಮೂಳೆ ಆರೋಗ್ಯಕ್ಕೆ:ನಿಮ್ಮ ಹಲ್ಲುಗಳು ಮತ್ತು ಮೂಳೆಗಳಿಗೆ ಒಳ್ಳೆಯದು, ಹಲ್ಲುಗಳು ಮತ್ತು ಎಲುಬುಗಳನ್ನು ಬಲಪಡಿಸಲು ವಿಟಮಿನ್ ಕೆ ಮತ್ತು ಪೋಷಕಾಂಶಗಳು ಸಹಾಯ ಮಾಡುತ್ತದೆ.

ರಕ್ತದೊತ್ತಡ:ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ದಿನನಿತ್ಯ ಸೀಮೆ ಬದನೇಕಾಯಿ ರಸವನ್ನು ಸೇವಿಸಬಹುದು.

ಮಲಬದ್ಧತೆ:ಕರುಳಿನ ಚಲನೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ನಾರಿನಂಶ ಸಮೃದ್ಧವಾಗಿರುವ ಕಾರಣದಿಂದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.ಒಂದು ಸೀಮೆ ಬದನೇಕಾಯಿ 3.5 ಗ್ರಾಂ ನಾರಿನಂಶ ಒಳಗೊಂಡಿದೆ, ಅದು ನಿಮ್ಮ ದೈನಂದಿನ ನಾರಿನಂಶ 14% ರಷ್ಟು ಕೊಡುಗೆ ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ , ಆರೋಗ್ಯಕರ ಹೃದಯನಾಳದ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ:ಒಂದು ಸೀಮೆ ಬದನೇಕಾಯಿ 38.6 ಕ್ಯಾಲರಿಗಳನ್ನು ಮತ್ತು 0.1 ಗ್ರಾಂ ಕೊಬ್ಬನ್ನು ಮಾತ್ರ ಹೊಂದಿದೆ. ಹೆಚ್ಚಿನ ಪ್ರಮಾಣದ ನೀರು ಮತ್ತು ನಾರಿನಂಶ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top