fbpx
ಸಿನಿಮಾ

ದಿವಂಗತ ನಟಿ ಸೌಂದರ್ಯ ತಾಯಿ ವಿಧಿವಶ.

ಬಹುಭಾಷಾ ನಟಿ,ದಿವಂಗತ ಸೌಂದರ್ಯ ಅವರ ಅಮ್ಮ ಕೆ. ಎಸ್​ ಮಂಜುಳಾ ಅವರು ನಿಧನರಾಗಿದ್ದಾರೆ.. ವಯೋಸಹಜ ಕಾಯಿಲೆಗೆ ತುತ್ತಾಗಿ ಬಳಲುತ್ತಿದ್ದ ಮಂಜುಳಾ ಅವರು ನಿನ್ನೆ ಸಂಜೆ ಬೆಂಗಳೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ನೆನ್ನೆ ಸಂಜೆ 6.30ಕ್ಕೆ ಕೊನೆಯುಸಿರೆಳೆದ ಮಂಜುಳಾ ಅವರ ಪಾರ್ಥಿವ ಶರೀರರದ ಅಂತ್ಯಕ್ರಿಯೆ ಇಂದು ನೆರವೇರಲಿದೆ.. ಇನ್ನು ಮಂಜುಳಾ ಅವರ ನಿಧನಕ್ಕೆ ಸೌಂದರ್ಯ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

 

 

ವಿಮಾನಾಪಘಾತದಲ್ಲಿ ಸೌಂದರ್ಯ ಮರಣಹೊಂದಿದ್ದರು.
ಸೌಂದರ್ಯ ವಿಮಾನ ಅಪಘಾತದಲ್ಲಿ ಶನಿವಾರ ಬೆಳಗ್ಗೆ( ಏಪ್ರಿಲ್ 17, 2004ರ ದಿನದಂದು) ನಿಧನರಾಗಿದ್ದರು. ಅಗ್ನಿ ಎವಿಯೇಷನ್‌ಗೆ ಸೇರಿದ ನಾಲ್ಕು ಆಸನಗಳ ಮಿನಿ ವಿಮಾನ(Cessna-180 single engine aircraft)ದಲ್ಲಿ ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಜಕ್ಕೂರಿನಲ್ಲಿ ಈ ಅಪಘಾತ ಸಂಭವಿಸಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top