fbpx
ಮನೋರಂಜನೆ

ಶೂಟಿಂಗ್ ವೇಳೆ ಬೆನ್ನಿಗೆ ಪೆಟ್ಟು ಮಾಡಿಕೊಂಡ ಕಿಚ್ಚ ಸುದೀಪ್.

ತೆಲುಗಿನ ‘ಸೈರಾ’ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಕುದುರೆ ಏರಿ ಸವಾರಿ ಮಾಡುವ ವೇಳೆ ಆಯತಪ್ಪಿ ಸುದೀಪ್ ಕೆಳಗೆ ಬಿದ್ದಿದ್ದಾರೆ ಎನ್ನುವ ಸುದ್ದಿ ಕಳೆದವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.. ಕುದುರೆಯಿಂದ ಹೀಗೆ ಕೆಳಗೆ ಬಿದ್ದ ಕಿಚ್ಚನನ್ನ ಒಂದು ಸ್ವಲ್ಪ ದೂರ ಕುದುರೆ ಮುಂದೆ ಎಳೆದುಕೊಂಡೇ ಹೋಗಿದೆ.. ನಂತರ ಸೆಟ್ಟಿನಲ್ಲಿದ್ದವರು ಕುದುರೆಯನ್ನು ನಿಲ್ಲಿಸಿ ಅಪಾಯವನ್ನು ತಡೆದಿದ್ದಾರೆ.. ಈ ವೇಳೆ ಅದೃಷ್ಟವಶಾತ್ ಕಿಚ್ಚಾ ಸುದೀಪ್‌ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಸುದ್ದಿಯಾಗಿತ್ತು ಅದರ ಬೆನ್ನಲ್ಲೇ ಮತ್ತೊಮ್ಮೆ ಸುದೀಪ್ ಏಟು ಮಾಡಿಕೊಂಡಿದ್ದಾರೆ.

 

 

ನೆನ್ನೆ ‘ದಿ ವಿಲನ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಈ ಕಾರ್ಯಕ್ರಮಕ್ಕೆ ಸುದೀಪ್ ಅವರು ಬಂದಿರಲಿಲ್ಲ. ಶೂಟಿಂಗ್ ವೇಳೆ ಬಿದ್ದು ಪೆಟ್ಟಾಗಿರುವ ಕಾರಣದಿಂದ ‘ದಿ ವಿಲನ್’ ಮಾಧ್ಯಮಗೋಷ್ಠಿಗೆ ಬರಲು ಸಾಧ್ಯವಾಗಿಲ್ಲ ಎಂದು ಪ್ರೇಮ್ ಹೇಳಿದರು. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಸುದೀಪ್ ಅವರೇ ಬಹಿರಂಗಪಡಿಸಿದ್ದಾರೆ.

ದಿ ವಿಲನ್ ಚಿತ್ರತಂಡಕ್ಕೆ ನನ್ನ ಶುಭಾಶಯ. ದಿ ವಿಲನ್​​ ಪತ್ರಿಕಾಗೋಷ್ಠಿ​​ ಕಾರ್ಯಕ್ರಮಕ್ಕೆ ನಾನು ಬರಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ನಾನು ಮಾಧ್ಯಮಗಳಿಗೆ ಹಾಗೂ ದಿ ವಿಲನ್​​ ಸಿನಿಮಾ ತಂಡಕ್ಕೂ ತಿಳಿಸಿದ್ದೇನೆ. ಇವತ್ತು ​​ ಶೂಟಿಂಗ್​​ ವೇಳೆ ನನ್ನ ಬೆನ್ನಿಗೆ ಪೆಟ್ಟಾಗಿದ್ದು ಹಾಗಾಗಿ ನನಗೆ ಪ್ರಯಾಣ ಮಾಡಲು ಮಾಡಲು ಸಾಧ್ಯವಾಗಿಲ್ಲ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top