ಮನೋರಂಜನೆ

‘ದಿ ವಿಲನ್’ ಮೋದಿ ಡೈಲಾಗಿಗೆ ಬಿತ್ತು ಸೆನ್ಸಾರ್ ಕತ್ತರಿ ಹಾಕಿದ್ದು ಯಾಕೆ?

ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಅಕ್ಟೋಬರ್ 18 ಆಯುಧ ಪೂಜೆ ದಿನ ಬಿಡುಗಡೆಯಾಗಲಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಲನ್ ಚಿತ್ರದ ಪ್ರೀ ರಿಲೀಸ್ ಟೀಸರ್ ನೆನ್ನೆ ಲಾಂಚ್ ಆಗಿದ್ದು ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

 

 

‘ದಿ ವಿಲನ್‌’ ಚಿತ್ರತಂಡ ಕರೆದಿದ್ದ ಬಿಡುಗಡೆ ಪೂರ್ವ ಮೊದಲ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾಗೆ ಕುರಿತಾದ ಕೆಲವೊಂದು ವಿಚಾರಗಳನ್ನ ಸ್ವತಃ ಪ್ರೇಮ್ ಅವರೇ ಬಿಚ್ಚಿಟ್ಟಿದ್ದಾರೆ. ಸೆನ್ಸಾರ್ ಪ್ರಕ್ರಿಯೆಗೆ ಹೋಗಿದ್ದಾಗ ಮೊದಲು ಸೆನ್ಸಾರ್ ಮಂಡಳಿಯಿಂದ ‘A’ ಸರ್ಟಿಫಿಕೇಟ್ ನೀಡಲಾಗಿತ್ತು. ​ ‘ಎ’ ಸರ್ಟಿಫಿಕೆಟ್​ ಕೊಟ್ಟರೂ ಪರವಾಗಿಲ್ಲ. ದೃಶ್ಯಗಳಿಗೆ ಕತ್ತರಿ ಹಾಕುವುದಿಲ್ಲ ಅಂತಾ ಪ್ರೇಮ್ ತಿಳಿಸಿದ್ದರಂತೆ. ಆದರೆ ‘A’ ಸರ್ಟಿಫಿಕೇಟ್ ನೀಡುವುದರಿಂದ ಮಲ್ಟಿಪ್ಲೆಕ್ಸ್ ಶೋಗಳ ಮತ್ತು ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ ಎಂದು ಯೋಚಿಸಿ ಚಿತ್ರದ ಎರಡೂವರೆ ನಿಮಿಷದ ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಲು ಪ್ರೇಮ್ ಒಪ್ಪಿಕೊಂಡಿದ್ದಾರಂತೆ.”

ಹೆಚ್ಚು ರಕ್ತಸಿಕ್ತವಾಗಿ ಕಾಣುವ ಸೀನುಗಳನ್ನು ಪ್ರೇಮ್ ಡಿಲೀಟ್ ಮಾಡಿದ್ದಾರಂತೆ. ಅಷ್ಟೇ ಅಲ್ಲದೇ ಒಂದು ದೃಶ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರನ್ನೂ ಕೂಡ ಬಳಸಿ ಡೈಲಾಗ್ ಹೇಳಿಸಲಾಗಿತ್ತಂತೆ. ಆದರೆ, ಕತ್ತರಿ ಪ್ರಯೋಗದಿಂದಾಗಿ ಮೋದಿ ಸಂಭಾಷಣೆಯನ್ನು ತೆಗೆಯಲಾಗಿದೆ. ಆದರೆ ಕತ್ತರಿ ಪ್ರಯೋಗ ಮಾಡಿದ್ದ ಮೋದಿ ಡೈಲಾಗಿನಲ್ಲಿ ಏನಿತ್ತು? ಅದ್ಯಾವ ದೃಶ್ಯ ಅನ್ನೋದನ್ನು ಮಾತ್ರ ಪ್ರೇಮ್​ ಬಹಿರಂಗಪಡಿಸಿಲ್ಲ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top