ಮನೋರಂಜನೆ

ರಾತ್ರೋ ರಾತ್ರಿ ಸಂಚಲನ ಸೃಷ್ಟಿಸಿದ ‘ದಿ ವಿಲನ್’- ನಂ.1 ಸ್ಥಾನದಲ್ಲಿ ಟ್ರೆಂಡಿಂಗ್.

ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಅಕ್ಟೋಬರ್ 18 ಆಯುಧ ಪೂಜೆ ದಿನ ಬಿಡುಗಡೆಯಾಗಲಿದೆ.. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಇಡೀ ಗಾಂಧಿನಗರವೇ ಬೆಚ್ಚಿಬಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಲನ್ ಚಿತ್ರದ ಪ್ರೀ ರಿಲೀಸ್ ಟೀಸರ್ ನೆನ್ನೆ ಲಾಂಚ್ ಆಗಿದೆ.

 

 

ನಿನ್ನೆ 7ಸಂಜೆ ಗಂಟೆಗೆ ಬಿಡುಗಡೆಯಾಗಿರುವ ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾವಿರಾರು ವೀಕ್ಷಣೆಗಳನ್ನ ಪಡೆಯುವ ಮೂಲಕ ಸಂಚಲನ ಸೃಷ್ಟಿಸಿದೆ. ಇಲ್ಲಿಯವರೆಗೂ ಅಂದ್ರೆ ಕೇವಲ 16 ಗಂಟೆಗಳಲ್ಲಿಯೇ ಟೀಸರ್ ಬರೋಬ್ಬರಿ ಹತ್ತು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ ಅಲ್ಲದೆ ಯೂ ಟ್ಯೂಬ್ ಟ್ರೆಂಡಿಂಗ್ ವಿಡಿಯೋಗಳ ಸಾಲಿನಲ್ಲಿ ನಂಬರ್ 1 ಸ್ಥಾನದಲ್ಲಿದೆ.

ಟೀಸರ್ ನಲ್ಲಿರೋ ಮಚ್ಚ್ ಎಳೆಯೋದು, ಜಗತ್ತಿಗೆ ಒಬ್ಬನೆ ಅಧಿಪತಿ ಇರಬೇಕು, ಭ್ರಮೆ, ಬುಟ್ಬುಡ್ತಿವಾ ಡೈಲಾಗ್’ಗಳು ಅಭಿಮಾನಿಗಳ ಫೇವರೇಟ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಟ್ರೊಲ್ ಆಗುತ್ತಿವೆ. ಶಿವಣ್ಣನ ಎನರ್ಜಿ ಮತ್ತು ಕಿಚ್ಚನ ಸ್ಟೈಲಿಶ್ ಅವತಾರ ಎಲ್ಲರ ಗಮನ ಸೆಳೆಯುತ್ತಿದೆ. ರಾಮ ಯಾರು? ರಾವಣ ಯಾರು? ಎನ್ನುವುದರ ಬಗ್ಗೆ ಇಲ್ಲಿಯೂ ಒಂದೇ ಒಂದು ಸುಳಿವು ಸಿಗಲ್ಲ.

 

 

ಮೂರು ಮೇನ್ ಥಿಯೇಟರ್:
ಒಂದು ಚಿತ್ರಕ್ಕೆ ಒಂದು ಮೇನ್ ಥಿಯೇಟರ್ ಸಿಗುವುದೇ ಕಷ್ಟ. ಆದರೆ, ‘ದಿ ವಿಲನ್’ ಚಿತ್ರಕ್ಕೆ ಈಗಾಗಲೇ ಬೆಂಗಳೂರಿನ ಕೆ ಜಿ ರಸ್ತೆಯಲ್ಲೇ ಮೂರು ಚಿತ್ರಮಂದಿರಗಳು ಬುಕ್ ಆಗಿವೆ. ‘ನರ್ತಕಿ’ ‘ಸಂತೋಷ್’ ಮತ್ತು ಸ್ವಪ್ನ ಚಿತ್ರಮಂದಿರಗಳಲ್ಲಿ ‘ದಿ ವಿಲನ್’ ಸಿನಿಮಾ ತೆರೆಕಾಣಲಿದೆ.

ಚಿತ್ರ ಬಿಡುಗಡೆಯಾಗಲು ಎರಡು ವಾರಗಳು ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ‘ದಿ ವಿಲನ್’ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಭಾರೀಗಾತ್ರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top