fbpx
ಸಮಾಚಾರ

ಕೇವಲ 26 ವಯಸ್ಸಲ್ಲೇ ನ್ಯಾಯಾಧೀಶೆಯಾದ ವಿಜಯಪುರದ ಯುವತಿ.

ಕೇವಲ 26 ವಯಸ್ಸಿಗೆ ಬಾಗಲಕೋಟೆ ನಿವಾಸಿ ಚೈತ್ರಾ ಕುಲಕರ್ಣಿ ಎಂಬುವವರು ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ನ್ಯಾಯಾಂಗ ಇಲಾಖೆ ಇತ್ತೀಚಿಗೆ 101 ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.. ಅದಕ್ಕೆ ಅರ್ಜಿ ಸಲ್ಲಿಸಿದವರಲ್ಲಿ 4 ಸಾವಿರ ಅಭ್ಯರ್ಥಿಗಳನ್ನು ಮಾತ್ರ ಪ್ರಿಲಿಮ್ಸ್​ಗೆ ಆಯ್ಕೆ ಮಾಡಲಾಗಿತ್ತು., ನಂತರ 946 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದರು.. ನಂತರ ಸಂದರ್ಶನಕ್ಕೆ 86 ಮಂದಿಯನ್ನು ಆಯ್ಕೆಮಾಡಲಾಗಿತ್ತು ಅದರಲ್ಲಿ ಕೊನೆಗೆ 33 ಮಂದಿ ನೇಮಕಗೊಂಡಿದ್ದಾರೆ.

ನ್ಯಾಯಾಧೀಶರಾಗಿ ನೇಮಕಗೊಂಡ 33 ಜನ ಮಂದಿಯಲ್ಲಿ ಚೈತ್ರ ಕುಲಕರ್ಣಿ ಕೂಡ ಒಬ್ಬರು. ಚೈತ್ರ ಅವರದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಂದರಗಿ ಗ್ರಾಮ. ಅವರ ತಂದೆ ಡಾ.ವಸಂತ ಕುಲಕರ್ಣಿ ಬಾಗಲಕೋಟೆಯ SRN ಕಲಾ ಮತ್ತು MBS ವಾಣಿಜ್ಯ ಕಾಲೇಜಿ​ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. LLB, LLM ವ್ಯಾಸಂಗ ಕಂಪ್ಲೀಟ್ ಮಾಡಿ, ಹಿರಿಯ ವಕೀಲ ಆರ್.ಎಸ್. ಬರಗುಂಡಿ ಅವರ ಹತ್ತಿರ ಕಳೆದ 3 ವರ್ಷಗಳಿಂದ ಪ್ರಾಕ್ಟಿಸ್ ಮಾಡಿಕೊಂಡು ಬಂದಿರುವ ಚೈತ್ರಾ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಖುಷಿಯಲ್ಲಿದ್ದಾರೆ,. ಚೈತ್ರ ಅವರು ಸದ್ಯ ಆದೇಶ ಪತ್ರಕ್ಕಾಗಿ ಕಾಯುತ್ತಿದ್ದು ಹೈಕೋರ್ಟ್​ನಲ್ಲಿ 6 ತಿಂಗಳ ತರಬೇತಿ ನಂತರ ಹುದ್ದೆ ಅಲಂಕರಿಸಲಿದ್ದಾರೆ.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ SSLC ಅಥವಾ PUC ಮುಗಿಯುತ್ತಿದ್ದಂತೆ ಶಿಕ್ಷಣ ಮೊಟಕುಗೊಳಿಸುವುದು ಹೆಚ್ಚಾಗುತ್ತಿದೆ.. ಇದರಿಂದಾಗಿ ಹೆಣ್ಣುಮಕ್ಕಳ ಶಿಕ್ಷಣ ಕಡಿಮೆಯಾಗುತ್ತಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಬೇಕು ಅದರಿಂದ ಅವರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬಹುದು. ಎನ್ನುತ್ತಾರೆ ಚೈತ್ರಾ.

ಅಂದಹಾಗೆ ಚೈತ್ರಾ ಅವರು ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಮುಗಿಸಿರುವುದು ವಿಶೇಷವಾಗಿದೆ.. ಕನ್ನಡ ಮಾಧ್ಯಮ ಎಂದರೆ ಮೂಗು ಮುರಿಯುವ ಮಂದಿಗೆ ಚೈತ್ರ ತಕ್ಕ ಉತ್ತರ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top