ಸಮಾಚಾರ

ಪ್ರಪಂಚದ ಅತಿ ಉದ್ದದ ರೈಲು ಇದು ,ಈ ರೈಲಿನ ಉದ್ದ ಹಾಗೂ ಬೋಗಿಗಳ ಸಂಖ್ಯೆ ಎಷ್ಟು ಅಂತ ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಪಟ್ಟು ಅಬ್ಬಾ ಅಂತೀರಾ

ಪ್ರಪಂಚದ ಅತಿ ಉದ್ದದ ರೈಲು. ಈ ರೈಲಿನ ಉದ್ದ ಎಷ್ಟು ಎಂದು ನಿಮಗೆ ಗೊತ್ತಾ ? ಅದರ ಬೋಗಿಗಳ ಸಂಖ್ಯೆ ಎಷ್ಟು ಎಂದು ನಿಮಗೆ ಗೊತ್ತೇ ?
ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಸಾಮಾನ್ಯವಾಗಿ ಪ್ರಯಾಣಿಕರು ಓಡಾಡುವ ರೈಲುಗಳಿಗೆ 24 ಬೋಗಿಗಳು ಇರುತ್ತವೆ. ಇನ್ನು ಕೆಲವು ರೈಲುಗಳಿಗೆ 26 ಬೋಗಿಗಳು ಇರುತ್ತವೆ. ಗೂಡ್ಸ್ ರೈಲು ಅಂದರೆ ಸರಕುಗಳನ್ನು ಸರಬರಾಜು ಮಾಡುವ ರೈಲುಗಳಿಗೆ 58 ಬೋಗಿಗಳು ಇರುತ್ತವೆ. ರೈಲ್ವೇ ನಿಲ್ದಾಣಗಳಲ್ಲಿ ಈ ಸರಕು ರೈಲುಗಳು ಹೋಗುವಾಗ ಅದನ್ನೇ ನೋಡುತ್ತಾ ಇರುತ್ತೇವೆ. ಈ ರೈಲು ಎಷ್ಟು ಉದ್ದ ಇದೆ ಎಂದು. ಅಂದರೆ 54 ರಿಂದ 58 ಬೋಗಿಗಳನ್ನು ಹೊಂದಿರುವ ಆ ರೈಲನ್ನೇ ನಾವು ಆಶ್ಚರ್ಯದಿಂದ ನೋಡುತ್ತೇವೆ. ಆದರೆ ಆಸ್ಟ್ರೇಲಿಯಾದಲ್ಲಿ ಒಂದು ರೈಲು ಇದೆ. ಅದು ಎಷ್ಟು ಉದ್ದ ಇದೆ ಎಂದು ನಿಮಗೆ ಗೊತ್ತಾದರೆ ನಿಜಕ್ಕೂ ನೀವು ಆಶ್ಚರ್ಯ ಪಡುತ್ತೀರ ?

ಪ್ರಪಂಚದ ಅತಿ ಉದ್ದನೆಯ ರೈಲು ಅದೇ ಆಗಿದೆ ? ಅದರಲ್ಲಿ ಎಷ್ಟು ಬೋಗಿಗಳಿವೆ ? ಅದು ಎಷ್ಟು ಉದ್ದ ಇದೆ ? ಮತ್ತು ಅದರ ತೂಕ ಎಷ್ಟು ? ಯಾಕೆ ಇದನ್ನು ತಯಾರಿಸಿದ್ದಾರೆ ? ಎಂದು ಈಗ ತಿಳಿದುಕೊಳ್ಳೋಣ ಬನ್ನಿ.
ಈ ರೈಲು ಆಸ್ಟ್ರೇಲಿಯಾದಲ್ಲಿದೆ. ಇದನ್ನು ಉಕ್ಕಿನ ಕಾರ್ಖಾನೆಗೋಸ್ಕರ ಉಕ್ಕನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸರಬರಾಜು ಮಾಡುವುದಕ್ಕೆ ಈ ಉದ್ದವಾದ ರೈಲನ್ನು ತಯಾರು ಮಾಡಿರುತ್ತಾರೆ.ಸಾಮಾನ್ಯವಾಗಿ ಒಂದು ರೈಲಿಗೆ ಒಂದು ಅಥವಾ ಎರಡು ಇಂಜಿನ್ ಗಳು ಇರುತ್ತವೆ. ಆದರೆ ಈ ರೈಲಿಗೆ ಬರೋಬ್ಬರಿ ಎಂಟು ಇಂಜಿನ್ಗಳು ಇವೆ. ಈ ರೈಲಿಗೆ ಇರುವ ಬೋಗಿಗಳ ಸಂಖ್ಯೆ ಎಷ್ಟು ಗೊತ್ತೆ ? ನಿಜಕ್ಕೂ ಆಶ್ಚರ್ಯವಾಗುತ್ತದೆ. ಬರೋಬ್ಬರಿ 600 ಭೋಗಿಗಳಿಗಿಂತ ಹೆಚ್ಚು ಭೋಗಿಗಳು ಈ ಒಂದು ರೈಲಿನಲ್ಲಿ ಇವೆ. ಇಷ್ಟು ಉದ್ದದ ರೈಲನ್ನು ನಾವು ನೋಡಬೇಕೆಂದರೆ ದಿನನಿತ್ಯ ನಾವು ಓಡಾಡುವ ಪ್ಯಾಸೆಂಜರ್ ರೈಲುಗಳಂತಹ ಸುಮಾರು 25 ರೈಲುಗಳನ್ನು ಹಾಕಬೇಕಾಗುತ್ತದೆ. ಅಷ್ಟು ಉದ್ದ ಇದೆ ಈ ರೈಲು.

 

 

 

ಅದನ್ನು ನೋಡುವುದಾದರೆ ಇದರ ಉದ್ದ ಸುಮಾರು ನಾಲ್ಕು ಕಿಲೋಮೀಟರ್ ಇದೆ ಮತ್ತು ಈ ರೈಲಿನ ತೂಕ ಎಷ್ಟಿದೆ ? ಎಂದು ನೋಡುವುದಾದರೆ ಸುಮಾರು 90 ಕೋಟಿ, 96 ಲಕ್ಷದ, 32 ಸಾವಿರ ಕೆಜಿ ಇದೆ. ಅದಕ್ಕಾಗಿ ಈ ರೈಲಿನ ತೂಕದಲ್ಲಾಗಲಿ, ಬೋಗಿಗಳ ಸಂಖ್ಯೆಯಲ್ಲಿ ಅಥವಾ ಉದ್ದ ದಲ್ಲಾಗಲಿ ರೈಲನ್ನು ಯಾವ ರೈಲು ಕೂಡ ಮೀರಿಸಲು ಸಾಧ್ಯವಾಗಿಲ್ಲ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಉಕ್ಕನ್ನು ಸರಬರಾಜು ಮಾಡುವುದಕ್ಕೋಸ್ಕರ 2001 ನೇ ಇಸವಿಯಲ್ಲಿ ಒಂದು ಉಕ್ಕಿನ ಕಾರ್ಖಾನೆ ಸಂಸ್ಥೆಯವರು ಈ ರೈಲನ್ನು ತಯಾರಿಸುತ್ತಾರೆ. ಒಂದು ರೈಲು ಸುಮಾರು ಒಂದು ದಿನಕ್ಕೆ ನಾಲ್ಕರಿಂದ ನಾಲ್ಕೂವರೆ ಸಾವಿರ ಕಿಲೋಮೀಟರ್ ಹೋಗುತ್ತದೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಉಕ್ಕನ್ನು ಸರಬರಾಜು ಮಾಡುತ್ತದೆ. ಆದರೆ ಈಗ ಪ್ರಸ್ತುತ ಅದರ ಕಾರ್ಯವನ್ನು ನಿಲ್ಲಿಸಿದೆ ಎಂದು ಹೇಳಲಾಗುತ್ತದೆ .ಆದರೂ ಕೂಡ ಈ ರೈಲಿನ ಉದ್ದದಲ್ಲಾಗಲಿ, ತೂಕದಲ್ಲಾಗಲಿ, ಅಥವಾ ಬೋಗಿಗಳ ಸಂಖ್ಯೆಯಲ್ಲಾಗಲಿ ಇದುವರೆಗೂ ಯಾವುದೇ ಒಂದು ರೈಲು ಈ ರೈಲನ್ನು ಮೀರಿಸಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top