ಮನೋರಂಜನೆ

ವೇದಿಕೆಯಲ್ಲೇ ಗಳಗಳನೆ ಕಣ್ಣೀರು ಹಾಕಿದ ತೆಲುಗು ನಟ ಜೂ.NTR

ಜೂನಿಯರ್ ಎನ್ ಟಿಆರ್ ಬಹಿರಂಗ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ. “ಇದುವರೆಗೂ ನಾನು 27 ಸಿನಿಮಾಗಳನ್ನ ಮಾಡಿದ್ದೇನೆ. ಆದರೆ, ಯಾವ ಸಿನಿಮಾದಲ್ಲು ತಂದೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ದೃಶ್ಯ ಇಲ್ಲ. ಆದರೆ, ಈ ಸಿನಿಮಾದಲ್ಲಿ ಅಂತಹ ದೃಶ್ಯ ಇದೇ” ಎಂದು ಹೇಳಿ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ. ತಾವು ಅಭಿನಯಿಸಿರುವ ಹೊಸ ಚಿತ್ರ ‘ಅರವಿಂದ ಸಮೇತ’ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದ ವೇದಿಕೆಯಲ್ಲಿ ತಂದೆ ನಂದಮೂರಿ ಹರಿಕೃಷ್ಣರನ್ನು ನೆನೆದು ಗಳಗಳನೆ ಅತ್ತರು.

 

 

‘ಇದ್ದಾಗ ಅವರ ಬೆಲೆ ತಿಳಿಯಲಿಲ್ಲ, ತಿಳಿದಾಗ ಅವರೇ ಇಲ್ಲ ಎಂದು ಅವರ ತಂದೆಯನ್ನು ನೆನೆದು ಕಣ್ಣೀರಿಟ್ಟರು. “ಇದುವರೆಗೂ ನಾನು 27 ಸಿನಿಮಾಗಳನ್ನ ಮಾಡಿದ್ದೇನೆ. ಆದರೆ, ಯಾವ ಸಿನಿಮಾದಲ್ಲು ತಂದೆಗೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ದೃಶ್ಯ ಇಲ್ಲ. ಆದರೆ, ಈ ಸಿನಿಮಾದಲ್ಲಿ ಅಂತಹ ದೃಶ್ಯ ಇದೇ ವಿಪರ್ಯಾಸವೆಂದರೆ ಆ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ನಮ್ಮ ತಂದೆ ಅಪಘಾತದಲ್ಲಿ ಸಾವನ್ನಪ್ಪಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಬೇಕಾಯಿತು” ಎಂದು ಎನ್​ಟಿಆರ್ ಅವರು ಕಣ್ಣೀರಿಟ್ಟು ತಮ್ಮ ತಂದೆಯನ್ನು ನೆನೆದು ಕಣ್ಣೀರಿಟ್ಟರು.

“ಯಾರಾದರು ನಮ್ಮಿಂದ ದೂರ ಹೋದ ಮೇಲೆನೇ ಅವರ ಬೆಲೆ ನಮಗೆ ಗೊತ್ತಾಗುವುದು. ನಾನು ಇದ್ದಾಗ ಅವರನ್ನು ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಹೋದ ಮೇಲೆ ಅವರ ಜೊತೆ ಕಾಲ ಕಳೆಯಬೇಕು ಎಂದು ಅನಿಸುತ್ತಿದೆ.. ನನ್ನ ತಂದೆಗೆ ನಾನು ಹೇಳುವುದಕ್ಕೆ ಆಗಲಿಲ್ಲ. ನಿಮಗೆ ಈ ಮಾತನ್ನ ಹೇಳುತ್ತಿದ್ದೇನೆ. ಹುಷಾರಾಗಿ ಮನೆಗೆ ಹೋಗಿ. ನಮ್ಮ‌ ಕುಟುಂಬದಲ್ಲಿ ಆಗಿರುವ ನೋವು ಮತ್ತಿನ್ಯಾವ ಕುಟುಂಬಕ್ಕೂ ಆಗಬಾರದು. ನಿಮ್ಮ ಮನೆಯವರು ನಿಮಗಾಗಿ ಕಾಯುತ್ತಿರುತ್ತಾರೆ. ನೀವು ನಡು ರಸ್ತೆಯಲ್ಲಿ ನಿಂತಾಗ ಮೊದಲು ಬರುವುದು ನಿಮ್ಮ ಮನೆಯವರೇ, ಆನಂತರ ನಾವು” ಎಂದು‌ ಹೇಳಿ‌ ಕಣ್ಣೀರಾಕುತ್ತಾ ವೇದಿಕೆಯಿಂದ ಹೊರಟರು.

ಅಂದಹಾಗೆ ಜೂ ಎನ್.ಟಿ.ಆರ್ ಅವರ ತಂದೆ ನಟ ಹರಿಕೃಷ್ಣ ಇತ್ತೀಚೆಗಷ್ಟೇ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top