fbpx
ಸಮಾಚಾರ

ಕರುನಾಡಿನ ಹೆಮ್ಮೆಯ ಐಎಎಸ್ ಅಧಿಕಾರಿಯ ಕನ್ನಡ ಪ್ರೇಮ ನೋಡಿ.

ಸಾಮಾನ್ಯವಾಗಿ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಕನ್ನಡ ಅಂದ್ರೆ ಒಂದು ರೀತಿಯ ತಾತ್ಸಾರದ ಮನೋಭಾವ ಎಂಬುದು ಜನ ಸಾಮಾನ್ಯರಲ್ಲಿ ಇರುವ ಅಭಿಪ್ರಾಯ. ಆದರೆ ಇಲ್ಲೊಬ್ಬ ಐಎಎಸ್ ಅಧಿಕಾರಿ ಪಕ್ಕಾ ಕನ್ನಡಾಭಿಮಾನಿ. ಕನ್ನಡದಲ್ಲೇ ಮಾತನಾಡುವ ಮೂಲಕ ಪರ ಭಾಷಿಕರಲ್ಲೂ ಕನ್ನಡ ಪ್ರೇಮ ಬೆಳೆಸಬೇಕು,ನಮ್ಮ ನಾಡು ನುಡಿ ಉಳಿಸಬೇಕು ಎನ್ನುವ ಮನಸ್ಸು ಹೊಂದಿರುವವರು.. ಕನ್ನಡ ಭಾಷೆ ಮತ್ತಷ್ಟು ಸಮೃದ್ಧವಾಗಬೇಕು ಎಂಬ ಆಸೆ ಹೊಂದಿರುವವರು. ಹಾಗಾದ್ರೆ ಯಾರು ಆ ಕನ್ನಡ ಪ್ರೇಮಿ ಐಎಎಸ್ ಅಧಿಕಾರಿ ಅಂತೀರಾ? ಮುಂದೆ ಓದಿ

ಈ ಐಎಎಸ್ ಅಧಿಕಾರಿ ಹೆಸರು ವರುಣ್ ರಂಗಸ್ವಾಮಿ ಅಂತ GST ವಿಭಾಗದ ಡೆಪ್ಯುಟಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ದೇಶದ ನಾನಾ ರಾಜ್ಯಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಇವರ ಕನ್ನಡ ಪ್ರೇಮ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಮನಗೆದ್ದಿದೆ.. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ಪ್ರೌಢ ಶಿಕ್ಷಣದವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದಾರಂತೆ..

ಐಎಎಸ್ ಅಧಿಕಾರಿ ವರುಣ್ ರಂಗಸ್ವಾಮಿ ಅವರ ಕನ್ನಡ ಪ್ರೇಮದ ಮಾತುಗಳನ್ನ ಕೇಳಿ.

 

 

“ಕನ್ನಡಿಗರೇ ಕನ್ನಡ ಭಾಷೆಯನ್ನು ಬಳಸಲು ಮುಜುಗರ ಪಡುತ್ತಿದ್ದಾರೆ, ಹೀಗೆ ಮಾಡುವುದು ತಪ್ಪು. ನಮ್ಮ ಭಾಷೆಯನ್ನ ನಾವು ಬಳಕೆ ಮಾಡದಿದ್ದರೆ ಅದು ಉಳಿಯುವುದು ಹೇಗೆ? ಹೋಟೆಲ್, ಶಾಪಿಂಗ್ ಕಾಂಪ್ಲೆಕ್ಸ್ ಎಲ್ಲಾ ಕಡೆಗಳಲ್ಲೂ ನಾನು ಕನ್ನಡವನ್ನೇ ಬಳಸುತ್ತೇನೆ, ಹಾಗಂತ ನಾನೇನು ಉಗ್ರ ಕನ್ನಡ ಹೋರಾಟಗಾರನಲ್ಲ. ಕನ್ನಡ ನಮ್ಮ ಮಾತ್ರ ಭಾಷೆಯಾಗಿರುವುದರಿಂದ ಅದನ್ನು ನಾವೆಲ್ಲರೂ ಬಳಸಬೇಕು.. ನಗರ ಪ್ರದೇಶಗಳಲ್ಲಿ ಕೆಲವು ಕನ್ನಡಿಗರೇ ಕನ್ನಡ ಮಾತನಾಡಿದರೆ ಬೆಲೆ ಕಡಿಮೆ ಎಂದು ಭಾವಿಸಿಕೊಂಡಿದ್ದಾರೆ ಆದ್ರೆ ಅದು ತಪ್ಪು.”

 

“ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿ ಸಲ್ಲದು. ಕನ್ನಡ ನಾಡುನುಡಿ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸುವ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಯುವಸಮೂಹ ಆಂಗ್ಲ ಭಾಷಾ ವ್ಯಾಮೋಹಕ್ಕೆ ತುತ್ತಾಗದೆ ಮಾತೃಭಾಷೆಯ ಪ್ರಗತಿಯತ್ತ ಗಮನ ಹರಿಸಬೇಕು ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಯಲಿ! ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುವುದೇ ನಿಜವಾದ ಕನ್ನಡಿಗನ ಗುರಿಯಾಗಿರಬೇಕು. ” ಎನ್ನುತ್ತಾರೆ ವರುಣ್ ರಂಗಸ್ವಾಮಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top