ಸಮಾಚಾರ

ಹ್ಯಾರಿಸ್ ಪುತ್ರ ನಲಪಾಡ್‍ನನ್ನು ಮತ್ತೊಮ್ಮೆ ವಶಕ್ಕೆ ಪಡೆದ ಪೊಲೀಸರು- ಕಾರಣವೇನು ಗೊತ್ತಾ?

ಬಹುಕೋಟಿ ಉದ್ಯಮಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ 116 ದಿನಗಳ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಆಚೆ ಬಂದಿರುವ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಅವರ ಪುತ್ರ ಮೊಹಮದ್ ನಲಪಾಡ್ ಅವರನ್ನು ಮತ್ತೊಮ್ಮೆ ಪೋಲೀಸರ ವಶಕ್ಕೆ ಪಡೆದಿದ್ದಾರೆ.

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರನ್ನು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ ಮೂಲಕ ಟಾರ್ಗೆಟ್ ಮಾಡುತ್ತಿದೆ. ಎಂದು ನೂರಕ್ಕೂ ಹೆಚ್ಚು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಆದಾಯ ತೆರಿಗೆ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ನಲಪಾಡ್ ಭಾಗಿಯಾಗಿದ್ದರು. ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಇದು ತೆರಿಗೆದಾರರ ಹಣ, ಈ ಹಣವನ್ನ ಲೂಟಿ ಮಾಡಿದ್ದಾರೆ ಅಂತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

 

 

ಕಾಂಗ್ರೆಸ್ ಕಾರ್ಯಕರ್ತರ ಜೊತೆ ಮೊಹಮದ್ ನಲಪಾಡ್‌ ಕೂಡ ಐಟಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ. ಈ ವೇಳೆ ಪೊಲೀಸರು ನಲಪಾಡ್ ಹಾಗೂ ಕೆಲ ಕಾರ್ಯಕರ್ತರನ್ನ ಬಂಧಿಸಿದರು.

ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಬಳಿಕ ನಲಪಾಡ್ ಅವರನ್ನು ಕಾಂಗ್ರೇಸ್ ನಿಂದ ಆರು ವರ್ಷ ನಿಷೇಧ ಮಾಡಿ ಅವರ ಪ್ರಾಥಮಿಕ‌ ಸದಸ್ಯತ್ವವನ್ನ ರದ್ದು ಮಾಡಲಾಗಿತ್ತು. ಹೀಗಿರುವಾಗ ನಲಪ್ಪಾಡ್ ಮತ್ತೆ ಯುವ ಕಾಂಗ್ರೇಸ್ ಜೊತೆ ಸಕ್ರಿಯವಾಗಿ ಕಾಣಿಸಿಕೊಳ್ಳುವ ಮೂಲಕ ಪಕ್ಷದ ಶಿಷ್ಠಾಚಾರವನ್ನ ಉಲ್ಲಂಘಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top