ಮನೋರಂಜನೆ

ಹುಟ್ಟುಹಬ್ಬದ ಸಂಭ್ರಮದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್.

ಸ್ಯಾಂಡಲ್’ವುಡ್ ಮುಂಚೂಣಿ ನಾಯಕಿಯರ ರೇಸ್’ನಲ್ಲಿರೋ ಹುಡ್ಗಿ ರಚಿತರಾಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 27ನೇ ವಸಂತಕ್ಕೆ ಕಾಲಿಡುತ್ತಿರುವ ಡಿಂಪಲ್ ಕ್ವೀನ್’ಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐದು ವರ್ಷದ ಅವಧಿಯಲ್ಲೇ ಹತ್ತಾರು ಹಿಟ್​ ಸಿನಿಮಾ ಕೊಟ್ಟಿರುವ ಈ ಗುಳಿಕೆನ್ನೆ ಚೆಲುವೆ ಕನ್ನಡದ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ.

 

 

ಎಲ್ಲ ವರ್ಗದ ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿರುವ ನಟಿ ರಚಿತಾ ರಾಮ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಮೊದಲ್ಗೊಂಡು ಕಿಚ್ಚ ಸುದೀಪ್, ಗಣೇಶ್ ಪುನೀತ್, ಉಪೇಂದ್ರ ಜೊತೆಗೂ ನಾಯಕಿಯಾಗಿ ನಟಿಸಿದ್ದಾರೆ., ಸದ್ಯ ‘ಅಯೋಗ್ಯ’ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿರುವ ರಚಿತಾ ನಟಸಾರ್ವಭೌಮ, ಏಪ್ರಿಲ್​, ಐ ಲವ್​ ಯೂ, ಸೀತಾರಾಮ ಕಲ್ಯಾಣಗಳಲ್ಲೂ ಅಷ್ಟೇ ಯಶಸ್ಸು ದಾಖಲಿಸುವ ನಿರೀಕ್ಷೆಯಲ್ಲಿದ್ದಾರೆ.

ಅಂದಹಾಗೆ ರಚಿತಾ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದೇ ಸ್ಟಾರ್ ಹೀರೋಗೆ ನಾಯಕಿಯಾಗಿ.. ಚಾಲೆಂಜಿಂಗ್ ಸ್ಟಾರ್ ಜೊತೆ ‘ಬುಲ್ ಬುಲ್’ ಸಿನಿಮಾ ಸಿನಿಪಯಣ ಆರಂಭಿಸಿದ ರಚಿತಾ ನಂತರ ಗೊಲ್ಡನ್ ಸ್ಟಾರ್ ಜೊತೆ ದಿಲ್ ರಂಗೀಲಾ ಚಿತ್ರದಲ್ಲಿ ಬಳಿಕ ಸುದೀಪ್ ಜೊತೆ ‘ರನ್ನ’ ನಟಿಸೋ ಮೂಲಕ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದ್ದರು. ಟಾಪ್ ಸ್ಟಾರ್ಸ್’ಗಳು ಕೂಡ ತಮ್ಮ ಸಿನಿಮಾಗಳಿಗೆ ಈಕೇನೆ ಬೇಕು ಅನ್ನೋವಂತೆ ಡಿಮಾಂಡ್ ಕ್ರಿಯೇಟ್ ಆಯ್ತು. ಆನಂತರ ರಥಾವರನ ಪ್ರೇಯಿಸಿಯಾಗಿ ಎಲ್ಲರಿಂದ ಮೆಚ್ಚುಗೆಯನ್ನ ಪಡೆದ ರಚಿತಾರಾಮ್ ಭರ್ಜರಿಯಾಗಿ ಪುನೀತ್ ಜೊತೆ ಚಕ್ರವ್ಯೂಹವನ್ನ ಕೂಡ ಭೇದಿಸಿದ್ದರು.. ಈ ವರ್ಷ ತೆರೆಕಂಡ ಅಯೋಗ್ಯದಲ್ಲೂ ಹಳ್ಳಿ ಹುಡುಗಿಯಾಗಿ ರಚಿತಾ ಮತ್ತೆ ಕನ್ನಡ ಪ್ರೇಕ್ಷಕರ ಹಾರ್ಟ್ ಗೆದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top