ಸಮಾಚಾರ

ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಯಿಂದ ರಮ್ಯಾಗೆ ಗೇಟ್ ಪಾಸ್? ಕಿಕ್ ಔಟ್ ಆಗಲು ಕಾರಣವೇನು?

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ಪದೇ ಪದೆ ಮೋದಿ ಅಭಿಮಾನಿಗಳನ್ನು ಕೆಣಕುತ್ತಾ ಸುದ್ದಿಯಾಗುತ್ತಿದ್ದ ರಮ್ಯಾರವರ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

 

 

ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್​ ಆಳ್ವಾ ಅವರ ಪುತ್ರ ನಿಖಿಲ್​ ಜೆ. ಆಳ್ವಾ ಅವರಿಗೆ ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಜವಾಬ್ದಾರಿ ವಹಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ. ಅಲ್ಲದೇ ರಾಹುಲ್ ಗಾಂಧಿಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಗಳಿಂದಲೂ ರಮ್ಯಾಗೆ ಕೋಕ್ ನೀಡಲಾಗಿದೆ ಎಂದೂ ಕೂಡ ವರದಿಯಾಗಿದೆ.

 

 

ರಮ್ಯಾಗೆ ಕೊಕ್ ಕೊಡಲು ಕಾರಣವೇನು?
ಬೇರೆ ವಿಚಾರಗಳನ್ನು ಅನಗತ್ಯವಾಗಿ ಟ್ವೀಟ್​ ಮಾಡದಂತೆ ಮತ್ತು ರಾಹುಲ್​ ಗಾಂಧಿಗೆ ಸಂಭಂದಿಸಿದ ಸುದ್ದಿಗಳನ್ನು ಟ್ವೀಟ್​ ಮಾಡದಂತೆ ಸೂಚನೆ ನೀಡಿತ್ತಂತೆ ಆದರೆ ರಮ್ಯಾ ಅದನ್ನು ಪಾಲನೆ ಮಾಡುತ್ತಿರಲಿಲ್ಲವಂತೆ. ರಮ್ಯಾಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅನಗತ್ಯವಾಗಿ ಟ್ವೀಟ್​ ಮಾಡಿ ಬಹಳಷ್ಟು ಬಾರಿ ಎಡವಟ್ಟು ಮಾಡಿಕೊಂಡಿದ್ದರು. ಇದು ಪಕ್ಷಕ್ಕೆ ಭಾರೀ ಮುಜುಗರಕ್ಕೀಡು ಮಾಡುವಂತೆ ಮಾಡಿತ್ತು.. ಜತೆಗೆ ಅವರು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರಲ್ಲಿಯೇ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಗಾಗಿ ರಮ್ಯಾ ಸ್ಥಾನಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top