ಮನೋರಂಜನೆ

ಸಂಗೀತ ಮಾಂತ್ರಿಕ ಅರ್ಜುನ್​ ಜನ್ಯರನ್ನು ಗಿಡ್ಡ ಎಂದು ಕರೆದ ರಿಯಾಲಿಟಿ ಶೋ ಸ್ಪರ್ಧಿ,ಆಮೇಲೆ ಆಗಿದಾದ್ರೂ ಏನು

ಎಲ್ಲರಿಗೂ ಗೊತ್ತಿರುವ ಕನ್ನಡ ಕಿರುತೆರೆಯ ಹಾಗೇ ಫೇವರಿಟ್​ ರಿಯಾಲಿಟಿ ಶೋ ಕಳೆದ ವಾರದಿಂದ ಎಲ್ಲರ ಮೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ ಸೀಸನ್​ 17 ಶುರುವಾಗಿದೆ ,ಎಂದಿನಂತೆ ಈ ಸಲ ಕೂಡ ಒಳ್ಳೆಯ ಪ್ರತಿಭೆ ಇರುವ ಸ್ಪರ್ಧಿಗಳು ಸೆಲೆಕ್ಟ್ ಆಗಿದ್ದಾರೆ,ಆ ಸೆಲೆಕ್ಟ್ ಆಗಿರೋ ಸ್ಪರ್ಧಿಗಳಲ್ಲಿ ಶುರುವಲ್ಲೇ ಒಂದು ರೇಂಜ್ ಗೆ ಫೇಮಸ್ ಹಾಗೂ ಪಾಪ್ಯುಲರ್ ಆಗಿರೋ ಸ್ಪರ್ಧಿಹನುಮಂತ ,ಈ ಹುಡುಗ ಯಾವುದೇ ಸಂಗೀತ ಶಾಲೆಗಳಲ್ಲಿ ಓದಿ ಸಂಗೀತವನ್ನು ಕಲಿತಿಲ್ಲ ಆದರೆ ಮುಗ್ಧ ಮನಸ್ಸಿನಿಂದ ಹಾಡಲು ಆರಂಭ ಮಾಡಿದ್ರೆ ಯಾವ ಸಿಂಗರ್​ಗೂ ಕಡಿಮೆ ಇಲ್ಲದಂತೇ ಹಾಡಿ ತೀರ್ಪುಗಾರರ ಮನಸನ್ನು ಗೆದ್ದಿದ್ದಾರೆ.ಈ ಹುಡುಗನ ಕೆಲಸ ಕುರಿ ಮೇಯಿಸೋದು ,ಬಾಲ್ಯದಿಂದಲೂ ಹನುಮಂತ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ.

ಓದಿದ್ದು ಕೇವಲ ಐದನೇ ತರಗತಿ. ಸಂಗೀತ ಕಲಿಯಲು ಯಾವುದೇ ಸಂಗೀತ ಶಾಲೆಗೂ ಹೋಗಿಲ್ಲ. ಕುರಿಗಳನ್ನ ಮೇಯಿಸುತ್ತಾ ಮೊಬೈಲಿನಲ್ಲಿ ಹಾಡು ಕೇಳುತ್ತಾ ಇಂಪಾಗಿ ಹಾಡುಗಳನ್ನ ಹಾಡುವುದನ್ನು ಕಲಿಯುತ್ತಿದ್ದನಂತೆ . ಕುರಿ ಮೇಯಿಸುತ್ತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಕಾರ್ಯಕ್ರಮಕ್ಕೆ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ನಿವಾಸಿ ಹನುಮಂತ ಆಯ್ಕೆಯಾಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.ಇವನ ಹಾಡು ಕೇಳಿದ ತಕ್ಷಣ ಮಹಾಗುರು ಗಳಾದ ಹಂಸಲೇಖ ಅವರು ಮೆಚ್ಚುಗೆ ಪಡಿಸಿ ತಮ್ಮ ಹೆಗಲ ಮೇಲೆ ಹಾಕಿದ್ದ ಜಾನಪದ ಶಲ್ಯವನ್ನು ಆತನ ಕೊರಳಿಗೆ ಹಾಕಿ, ಅವನು ಹಾಕಿದ್ದ ಟವೆಲ್​ ಅನ್ನು ತಾವು ಹೊದ್ದುಕೊಂಡು ಅಭಿಮಾನ ವ್ಯಕ್ತಪಡಿಸಿದ್ದಾರೆ.

 

 

 

ವಿಜಯ್​ ಪ್ರಕಾಶ್​ ರವರು ನಿನ್ನ ಹಳ್ಳಿ ಹೈದನ ಮುಗ್ಧತೆಗೆ ನಮ್ಮದೊಂದು ಸಲಾಂ ಎಂದು ಹೇಳಿ ತಮ್ಮ ಪೂರ್ಣ ಜವಬ್ದಾರಿ ನಾವುಗಳು- ತೀರ್ಪುಗಾರರ ಮೇಲಿದೆ. ನೀನು ಸಂಗೀತವನ್ನು ಅಬ್ಯಾಸ ಮಾಡು ಶೋ ಗೆಲ್ಲು ಎಂದು ಆರ್ಶಿವರ್ದಿಸಿದರು,ಇನ್ನು ಈ ಶೋನಲ್ಲಿ ಮತ್ತೊಬ್ಬ ತೀರ್ಪುಗಾರರಾದ ಸಂಗೀತ ಮಾಂತ್ರಿಕ ಅರ್ಜುನ್​ ಜನ್ಯ ಅವರನ್ನು ಕಂಡ್ರೆ ಹನುಮಂತನಿಗೆ ಬಹಳ ಇಷ್ಟವಂತೆ. ಆಡಿಷನ್​ನಲ್ಲಿ ನಿನಗಿಷ್ಟವಾದ ತೀರ್ಪುಗಾರರ ಹೆಸರನ್ನು ಹೇಳಿ ಅಂದ್ರೆ ಅವರು, ಗಿಡ್ಡಕ್ಕೆ, ಗುಂಗುರು ಕೂದಲು ಇದ್ದಾರಲ್ಲಾ ಅವರು ಅಂದ್ರೆ ನನಗಿಷ್ಟ ಎಂದು ಹೇಳಿ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿಸಿದ್ದಾರೆ. ಇನ್ನು ವೇದಿಕೆ ಮೇಲೆ ಮತ್ತೆ ಯಾರು ಇಷ್ಟ ಅಂತಾ ಕೇಳಿದ ಮೇಲೆ ಅರ್ಜುನ್​ ಅವರ ಹೆಸರು ಹೇಳೋದಿಕ್ಕೆ ಬಾರದೇ, ಮತ್ತೆ ಗಿಡ್ಡ ಎಂದಾಗ ಸ್ವತಃ ಅರ್ಜುನ್​ ರವರೆ ಮುಗ್ದ ಪ್ರತಿಭೆ ಹನುಮಂತನನ್ನು ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ರಾಜೇಶ್​ ಕೃಷ್ಣನ್​ ಅವರು ಇವನೊಬ್ಬ ಬುದ್ಧಿವಂತ ಬಾಲಕ,ನಿನಗೆ ವಯಸ್ಸೆಷ್ಟು ಅಂದ್ರೆ 20 ಅಥವಾ 21 ಇರಬಹುದ್ರೀ ಅಂತಾ ಹೇಳುವ ಇವನಿಗೆ ಶಹಬ್ಬಾಸ್​ ಎಂದರು.ಒಟ್ಟಾರೆ ಸರಿಗಮಪ ಸೀಸನ್​ 15 ರಲ್ಲಿ ನಿರೂಪಕಿ ಅನುಶ್ರೀ ಮತ್ತು ಹನುಮಂತ ಸಂಭಾಷಣೆ ನೋಡುಗರಿಗೆ ಒಳ್ಳೆ ಹಾಸ್ಯದ ಹೊನಲನ್ನು ನೀಡಿತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top