fbpx
ಸಮಾಚಾರ

ಐತಿಹಾಸಿಕ ಮೈಸೂರು ಅರಮನೆಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರೋ ಬೆಚ್ಚಿ ಬಿಳಿಸೋ ರಹಸ್ಯಗಳ ಬಗ್ಗೆ ತಪ್ಪದೆ ತಿಳ್ಕೊಳ್ಳಿ

ಮೈಸೂರು ಅರಮನೆಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ರಹಸ್ಯಗಳು .
ಮೈಸೂರು ಅರಮನೆ ಇದು ವಿಶ್ವವಿಖ್ಯಾತ ಅರಮನೆಯಾಗಿದೆ. ಈ ಅರಮನೆಗೆ ಇನ್ನೊಂದು ಹೆಸರು ಕೂಡ ಇದೆ ಅದೇ “ಅಂಬಾ ವಿಲಾಸ ಅರಮನೆ” ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ ಇದಾಗಿದೆ.
ಮೈಸೂರನ್ನು ಅರಮನೆಗಳ ನಗರ ಎಂದೇ ಕರೆಯಲಾಗುತ್ತದೆ. ಈ ಮೈಸೂರು ಅರಮನೆ ಇಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರ್ ಶಾಲೆಯಾಗಿರುತ್ತದೆ. ಮೈಸೂರು ಸಂಸ್ಥಾನ 1399 ರಿಂದ 1947 ಭಾರತದ ಸ್ವಾತಂತ್ರ ಬರುವವರೆಗೆ ಒಡೆಯರ್ ವಂಶದ ಅರಸರಿಂದ ಅಸ್ವಲ್ಪಟ್ಟಿತ್ತು. ಆದರೆ ನಂಜರಾಜ ಒಡೆಯರ್ ಕಾಲಕ್ಕೆ ಹೈದರಾಳಿಯು ಪ್ರಭಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾರೆ.
ನಂತರ ಈ 1782 ರಲ್ಲಿ ಅವರು ಸಾವನ್ನಪ್ಪುತ್ತಾರೆ. ನಂತರ ಅವರ ಮಗನಾದ ಟಿಪ್ಪು ಸುಲ್ತಾನನು ಅವರ ಸಂಸ್ಥಾನದ ಸರ್ವಾಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ನಂಜರಾಜರು, ಬೆಟ್ಟದ ಚಾಮರಾಜರು ಮತ್ತು ಕಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿ ಶ್ರೀರಂಗಪಟ್ಟಣದಲ್ಲಿ ಇರುತ್ತಾರೆ.

ಸಾವಿರದ 1799ರಲ್ಲಿ ಟಿಪ್ಪು ಸುಲ್ತಾನ್ ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರುತ್ತಾರೆ. ಒಡೆಯರ ಅರಸರು ಹದಿನಾಲ್ಕನೇ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ 1638 ರಲ್ಲಿ ಸಿಡಿಲು ಹೊಡೆದು ಸ್ವಲ್ಪ ಭಾಗ ಹಾಳಾಗುತ್ತದೆ. ಆಗ ಇದನ್ನು ರಿಪೇರಿ ಮಾಡಿ ಸರಿ ಮಾಡುತ್ತಾರೆ. ಆದರೆ ಹದಿನೆಂಟನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ 1793ರಲ್ಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಿ 1803 ರಲ್ಲಿ ಇನ್ನೊಂದು ಅರಮನೆಯನ್ನು ಆ ಸ್ಥಳದಲ್ಲಿ ಕಟ್ಟಿಸಲಾಗುತ್ತದೆ.

 

 

 

ಈ ಅರಮನೆಯೂ ಸಹ 1897 ರಲ್ಲಿ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಗಿಬಿಡುತ್ತದೆ. ನಂತರ ಅರಮನೆಯ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತರವಾಗುತ್ತಾರೆ. ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣಿ, ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಕ ಮಾಡುತ್ತಾರೆ. ವಿವಿಧ ರೀತಿಯ ವಾಸ್ತು ಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸುತ್ತಾರೆ. ನಂತರ 1912ರಲ್ಲಿ ಅರಮನೆಯ ಕೆಲಸ ಪೂರ್ತಿಯಾಗುತ್ತದೆ.
1799 ರಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದ ನಂತರ ಈ ಸಂಸ್ಥಾನದ ಆಡಳಿತವನ್ನು ಮುಂದುವರಿಸುವುದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಇರುತ್ತಾರೆ. ಆದರೆ ಇವರ ವಯಸ್ಸು ಕೇವಲ ಐದು ವರ್ಷವಾಗಿರುತ್ತದೆ. ಇವರು ಸಂಪೂರ್ಣ ಆಡಳಿತವನ್ನು ತಮ್ಮ ಕೈಗೆ ಅಧಿಕಾರವನ್ನು ತೆಗೆದುಕೊಳ್ಳುವುದಕ್ಕೆ ಇನ್ನೂ ಹತ್ತು ವರ್ಷ ಸಮಯ ಬೇಕಾಗುತ್ತದೆ. ಆದರೆ 1810 ರಲ್ಲಿ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ.

1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೂ ನಂತರವೂ ಜಯ ಚಾಮರಾಜೇಂದ್ರ ಒಡೆಯರ್ ರಾಜ್ಯದ ಪ್ರಮುಖರಾಗಿ ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸುತ್ತಾರೆ. ಮೈಸೂರು ಸಂಸ್ಥಾನವನ್ನು 27 ಒಡೆಯರ್ ವಂಶದ ರಾಜರು ರಾಜ್ಯಾಡಳಿತವನ್ನು ಮಾಡುತ್ತಾರೆ. ಮಧ್ಯದಲ್ಲಿ ಹೈದರಾಲಿ ಮತ್ತು ಮಗನಾದ ಟಿಪ್ಪುಸುಲ್ತಾನ್ ಕೂಡ ರಾಜ್ಯಾಡಳಿತವನ್ನು ಮಾಡುತ್ತಾರೆ.
ಇನ್ನು ಅರಮನೆಯ ವಿಷಯಕ್ಕೆ ಬಂದರೆ ಅರಮನೆಯ ವಾಸ್ತುಕಲೆಯ ಶೈಲಿಯನ್ನು ಇಂದು ಇಂದೋಸೆರಾನೆನಿಕ ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಇಂದೂ ಮುಸ್ಲಿಂ ಮತ್ತು ಗೋಥಿಕ್ ಶೈಲಿಯ ವಾಸ್ತು ಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಈ ಅರಮನೆಯಲ್ಲಿ ಮೂರು ಮಹಡಿಗಳು ಇವೆ. ಕೆಂಪು ಅಮೃತ ಶಿಲೆಯ ಕಂಬಗಳು, 145 ಅಡಿ ಎತ್ತರದ 5 ಮಹಡಿಗಳಿರುವ ಗೋಪುರವನ್ನು, ಈ ಅರಮನೆಯು ಹೊಂದಿದೆ.

 

 

 

ಈ ಅರಮನೆಯ ಸುತ್ತಲೂ ಅದ್ಭುತವಾದ ದೊಡ್ಡ ಉದ್ಯಾನವನವಿದೆ. ರಾತ್ರಿಯ ಸಮಯದಲ್ಲಿ ಈ ಅರಮನೆಗೆ ಮಾದಿರುವ ದೀಪಾಲಂಕಾರದ ಕಾರಣದಿಂದಾಗಿ ನೋಡುವುದಕ್ಕೆ ಬಂಗಾರದ ಗುಡಿಯಂತೆ ಕಾಣುತ್ತದೆ. ಅರಮನೆಯ ಆವರಣದಲ್ಲಿ 12 ದೇವಸ್ಥಾನಗಳು ಇವೆ. ಅವುಗಳಲ್ಲಿ ಪ್ರಸಿದ್ಧವಾದ ದೇವಸ್ಥಾನಗಳೆಂದರೆ ಸೋಮೇಶ್ವರ ದೇವಸ್ಥಾನ, ಲಕ್ಷ್ಮೀರಮಣ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಶ್ವೇತಾ ವರಹ ಸ್ವಾಮಿ ದೇವಸ್ಥಾನ, ಹದಿನಾಲ್ಕನೆಯ ಶತಮಾನದಲ್ಲಿ ಕಟ್ಟಲಾಗಿರುವ ಕೋಡಿ ಭೈರವನ ದೇವಸ್ಥಾನ ಕೂಡ ಇದೆ. ಮೊಗಲ್ ಸಾಮ್ರಾಜ್ಯದ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ ಎಂದರೆ ದಿವಾನ್ ಏಕಾಸ್. ಇದನ್ನು ಮೈಸೂರಿನ ಅರಮನೆಯಲ್ಲೂ ಕೂಡ ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಭೇಟಿಯಾಗಲು ಈ ಕೋಣೆಯನ್ನು ಬಳಸುತ್ತಿದ್ದರು.ಸಭೆ ನಡೆಸುತ್ತಿದ್ದ ಹಾಲನ್ನು ದರ್ಬಾರ್ ಹಾಲ್ ಎಂದು ಕರೆಯುತ್ತಾರೆ. ಇಲ್ಲಿಯೇ ಜನರು ರಾಜರನ್ನು ನೋಡುತ್ತಿದ್ದರು.

ರಾಜ ಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು.ಹದಿನಾಲ್ಕನೆಯ ಶತಮಾನದಲ್ಲಿ ಉಪಯೋಗಿಸುತ್ತಿದ್ದ ಖಡ್ಗ,ಸುರಘಿ,ವ್ಯಾಘ್ರನಖ ಮೊದಲಾದ ಮುಂತಾದ ಆಯುಧಗಳಿಂದ ಹಿಡಿದು 20ನೇ-ಶತಮಾನದ ಪಿಸ್ತೂಲುಗಳನ್ನು,ಬಂದೂಕುಗಳನ್ನು ಇಲ್ಲಿ ಕಾಣಬಹುದು. ಮುಖ್ಯವಾಗಿ ಒಡೆಯರ್ ವಂಶದ ಪ್ರಸಿದ್ಧ ಅರಸ, ರಣಧೀರ ಕಂಠೀರವ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಒಂದಾದ ವಜ್ರಮುಷ್ಟಿ ಹಾಗೂ ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top