fbpx
ಮನೋರಂಜನೆ

ಕೊನೆಗೂ ತಮ್ಮ ಹಾಗೂ ಕೀರ್ತಿ ಮಗುವಿನ ಬಗ್ಗೆಗಿನ ಸತ್ಯ ರಿವೀಲ್ ಮಾಡಿದ ಕರಿ ಚಿರತೆ ದುನಿಯಾ ವಿಜಿ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಜೈಲ್ಗೆ ಹೋದ ಸಂದರ್ಭದಲ್ಲಿ ದುನಿಯಾ ವಿಜಯ್ ರವರ ಮೊದಲ ಪತ್ನಿ ನಾಗರತ್ನ ಮಾಧ್ಯಮಗಳ ಜೊತೆ ಮಾತನಾಡಿ ಅವರ ಅಳಲು ತೋಡಿಕೊಂಡಿದರು “ದುನಿಯಾ ಸಿನಿಮಾ ಮಾಡಿದಾಗ ಎಷ್ಟು ಕಷ್ಟ ಇತ್ತು, ಹೆಸರು, ಹಣ ಬಂದ ಮೇಲೆ ಕೀರ್ತಿ ಬಂದಿದ್ದಾಳೆ. ಅವರಿಬ್ಬರು ನನ್ನನ್ನು ಬೀದಿಗೆ ತಳ್ಳಿ ಬಿಟ್ಟಿದ್ದಾರೆ ,ಅವರು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಒಂದು ಹೆಣ್ಣು ಎಷ್ಟು ಸಹಿಸಿಕೊಳ್ಳಲು ಸಾಧ್ಯ? ಮತ್ತೊಬ್ಬಳ ಜೊತೆ ಹೋದರೆ ಯಾರು ಸಹಿಸಿಕೊಳ್ಳುತ್ತಾರೆ?, ಆದರೆ ನಾನು ಸಹಿಸಿಕೊಂಡಿದ್ದೇನೆ. ಆದರೆ ಎಲ್ಲವನ್ನೂ ಕೀರ್ತಿಗೌಡ ಬೀದಿಗೆ ತಂದು ಬಿಟ್ಟಿದ್ದಾಳೆ. ಕೀರ್ತಿ ಗೌಡ ಯಾವಾಗ ವಿಜಿ ಜೀವನದಲ್ಲಿ ಬಂದಳೋ ಅವತ್ತಿಂದ್ಲೇ ನಮ್ಮ ಮನೆಯಲ್ಲಿ ದರಿದ್ರ ಆರಂಭವಾಗಿದೆ,ಆದ್ದರಿಂದ ಕೀರ್ತಿ ಮನೆ ಬಿಟ್ಟು ಹೋದರೆ ಸರಿ ಎಂದು ನಾಗರತ್ನ ಆಕ್ರೋಶ ವ್ಯಕ್ತಪಡಿಸಿದರು. ಕೀರ್ತಿ ಕೇವಲ ದುಡ್ಡಿಗಾಗಿ ವಿಜಿ ಮನೆಗೆ ಬಂದು ಸೇರಿದ್ದಾಳೆ.ಅವಳು ಅವರನ್ನು ಮದುವೆ ಯಾಗಿಲ್ಲ ,ಅವರಗೆ ಯಾವ ಮಗುವು ಇಲ್ಲ ,ಇದ್ರೆ ತೋರಿಸಲಿ ಆ ಮಗುವನ್ನು ಎಂದು ಮೀಡಿಯಾದವರ ಮುಂದೆ ನೇರ ಸವಾಲು ಎಸೆದರು ನಾಗರತ್ನ.

ದುನಿಯಾ ವಿಜಯ್​ ಜೈಲಿನಿಂದ ಹೊರಬಂದ ಮೇಲೆ ನೇರವಾಗಿ ನಿವಾಸಕ್ಕೆ ಆಗಮಿಸಿ ದುನಿಯಾ ವಿಜಯ್ ಅಂದು ರಾತ್ರಿ ಸುದ್ದಿಗೋಷ್ಠಿ ನಡೆಸಿ ಮೊದಲ ಪತ್ನಿ ನಾಗರತ್ನ ರವರ ಮೇಲೆ ಆರೋಪ ಮಾಡಿ ಅವರ ಹಾಗೂ ಕೀರ್ತಿ ಯವರ ಮದುವೆಯ ಬಗ್ಗೆ ಮಾತನಾಡಿದ್ದರು.

 

 

 

ನಾಗರತ್ನ ಸುಳ್ಳು ಬುರುಕಿ:
ಪತ್ನಿ ನಾಗರತ್ನ ಕುರಿತಾಗಿ ಮಾತನಾಡಿದ ದುನಿಯಾ ವಿಜಯ್ “ನಾಗರತ್ನ ಸುಳ್ಳುಬುರಿಕಿ, ಬಾಯಿ ಬಿಟ್ಟರೆ ಸುಳ್ಳು ಹೇಳ್ತಾಳೆ. ಆಕೆಗೆ ನಾನು ಬೇಕು ಆದರೆ ನನ್ನ ಅಪ್ಪ ಅಮ್ಮ ಬೇಡ. ತಂದೆ ತಾಯಿನಾ ಚೆನ್ನಾಗಿ ನೋಡ್ಕೊಬೇಕು ಅಂತ ಹೇಳಿದ್ದೆ ಆದರೆ ಅದ್ಯಾವುದೂ ನಡೀಲಿಲ್ಲ. ಮೀಡಿಯಾ ಮುಂದೆ ಬಂದು ನನ್ನನ್ನ ಬಾಯಿಗೆ ಬಂದ ಹಾಗೆ ಬೈದು ಅವಮಾನ ಮಾಡಿದ್ಲು, ಆಮೇಲೆ ಇಬ್ಬರೂ ರಾಜಿ ಆಗಿದ್ದೆವು ಆದಾದ ನಂತರ ಮತ್ತೆ ಜಗಳ ಬಂತು ಆಗ ನಾನು, ನಾಗರತ್ನ ಮತ್ತು ಲಾಯರ್​ ಕೂತ್ಕೊಂಡು ಮಾತಾಡಿದ್ದೆವು. ಆಗ “ನಾನು ಮಾತ್ರ ಬೇಕು ನನ್ನ ಅಪ್ಪ ಅಮ್ಮ ಬೇಡ ಅಂದ್ಲು” ಅದಕ್ಕೆ ಅವಳಿಂದ ದೂರ ಬಂದೆ.
“ಆಗ ನಾಗರತ್ನ ಮನೆ ಬೇಕು ಅಂದಳು ಆಗ ಆಕೆ ಹೆಸರಿಗೆ ‘ದುನಿಯಾರುಣ’ ಮನೆಯನ್ನು ಬರೆದುಕೊಟ್ಟೆ, ಜೊತೆಗೆ 3 ಎಕರೆ ತೋಟವನ್ನ ಸಾಮ್ರಾಟ್​ ಹೆಸರಿಗೆ ಮತ್ತು 6 ಎಕರೆ ಜಾಗವನ್ನ ಹೆಣ್ಣು ಮಕ್ಕಳ ಹೆಸರಿಗೆ ಬರೆದುಕೊಟ್ಟೆ, ಊರಲ್ಲಿರುವ 4 ಸೈಟುಗಳನ್ನ​ ಕೂಡ ಆಕೆಗೆ ಬಿಟ್ಟಿದ್ದೀನಿ.. ಅಷ್ಟೇ ಅಲ್ಲದೇ ನನ್ನ ಅಪ್ಪ ಅಮ್ಮಾ ಇಬ್ಬರೂ ನಾವು ಸತ್ತರೇ ನಮ್ಮ ಸಮಾಧಿಗೆ ನಾಗರತ್ನ ಬರಬಾರದು ಅಂತಾ ವಿಲ್​ ಮಾಡಿದ್ದಾರೆ.” ಎಂದು ದುನಿಯಾ ವಿಜಿ ಹೇಳಿದರು.

ಕೀರ್ತಿ ನಾನು ಮಾನಸಿಕವಾಗಿ ಮದುವೆಯಾಗಿದ್ದೇವೆ:
ದುನಿಯಾ ವಿಜಯ್​ಗೇ ಕೀರ್ತಿಗೌಡ ಹಾಗೂ ಅವರ ನಡುವಿನ ಮದುವೆ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು. “ನಾನು ಕೀರ್ತಿಯನ್ನು ಮಾನಸಿಕವಾಗಿ ಮದುವೆಯಾಗಿದ್ದೇವೆ. ಪ್ರೀತಿ ಎಂಬುವುದು ಹೃದಯದಲ್ಲಿ ಹುಟ್ಟುತ್ತೆ. ಅದು ಪ್ರಾಮಾಣಿಕವಾದ ಪ್ರೀತಿ. ನಾವಿಬ್ಬರು ಗಂಡ ಹೆಂಡತಿನೇ. ಪ್ರಪಂಚ ಸಾವಿರ ಹೇಳಬಹುದು. ನಾನು ಮತ್ತು ಕೀರ್ತಿ ಚೆನ್ನಾಗಿಯೇ ಇದ್ದೇವೆ” ಎಂದು ಹೇಳಿದು ನಮಗಿಲ್ಲ ಗೊತ್ತೇ ಇದೆ

ವಿಜಿ ಹಾಗೂ ಕೀರ್ತಿಯ ಮಗುವಿನ ಬಗ್ಗೆ ವಿಜಿ ಕೊಟ್ಟ ಸ್ಪಷ್ಟನೆ:

 

 

 

ವರ್ಷಗಳ ಹಿಂದೆ ತುಂಬ ಲೀಕ್ ಆಗಿದ್ದ ಫೋಟೋಗಳಲ್ಲಿ ದುನಿಯಾ ವಿಜಯ್ ಹಾಗೂ ಕೀರ್ತಿ ಗೌಡ ಜೊತೆಯಲ್ಲಿ ಒಂದು ಮಗು ಇತ್ತು ಹಾಗೂ ಆಗ ಸ್ವಂತ ವಿಜಯ್ ರವರೆ ಆ ಮಗುವನ್ನು ನನ್ನ ಹಾಗೂ ಕೀರ್ತಿಯ ಮಗು ಎಂದು ಹೇಳಿಕೆ ಕೊಟ್ಟಿದ್ದರು ,ಮೊನ್ನೆ ವಿಜಿ ಜೈಲ್ನಿಂದ ಹೊರಬಂದ ಸಂದರ್ಭದಲ್ಲಿ ಮಾಧ್ಯಮಗಳು ದುನಿಯಾ ವಿಜಿ ರವರಿಗೆ ಕೇಳಿದ ಮುಖ್ಯವಾದ ಪ್ರಶ್ನೆ ಯಾರದು ಆ ಮಗು ?ನಿಮ್ಮದು ಅಂತ ಹೇಳಿದ ಆ ಮಗು ಹೇಳಿ ಅಂತ ?ಈ ಪ್ರಶ್ನೆಗೆ ಉತ್ತರಿಸಿದ ವಿಜಯ್ ”ಮಗು ನಮ್ಮದಲ್ಲ. ನಮಗೆ ಅಲ್ಲಿ ಮಗು ಸಿಕ್ಕಿತ್ತು. ಆಟ ಆಡಿಸುತ್ತಿದ್ವಿ. ಆ ಫೋಟೋ ನಮಗೆ ಗೊತ್ತಿಲ್ಲದ ಹಾಗೆ ಅಕ್ಕ-ಪಕ್ಕ ಇದ್ದವರು ಕಳುಹಿಸಿಬಿಟ್ಟರು. ಫೋಟೋ ಲೀಕ್ ಆಗ್ಹೋತ್ತಲ್ಲಾ ಅಂತ ‘ಹೌದು’ ಅಂತ ನಾವು ಒಪ್ಪಿಕೊಂಡ್ವಿ ಅಷ್ಟೇ. ಯಾಕಂದ್ರೆ, ಅವತ್ತಿನ ಪರಿಸ್ಥಿತಿ ಹಾಗಿತ್ತು. ಎಂದು ಹೇಳಿದ್ದಾರೆ.

ಕೀರ್ತಿ ವಿಚಾರವಾಗಿ ಮಕ್ಕಳ ಒಪ್ಪಿಗೆ?
ನಂತರ ಮಾಧ್ಯಮದವರಿಂದ ವಿಜಿಗೆ ಬಂದ ಪ್ರಶ್ನೆ ಮಕ್ಕಳು ಕೀರ್ತಿಯನ್ನ ಒಪ್ಪಿಕೊಂಡಿದ್ದಾರಾ ಎಂದು ?ಇದಕ್ಕೆ ಟಾಕ್ ಅಂತ ಉತ್ತರ ಕೊಟ್ಟ ವಿಜಯ್ ”ಯಾರಿಗೆ ಯಾರೂ ಒಪ್ಪಿಕೊಳ್ಳುವ ಅವಶ್ಯಕತೆ ಇಲ್ಲ. ಆ ಮಕ್ಕಳು ಕೀರ್ತಿದ್ದಲ್ಲ. ಅವರು ನನಗೆ ಮಕ್ಕಳು. ನನಗೆ ಕೀರ್ತಿ ಹೆಂಡತಿ. ಮಕ್ಕಳು ನಮ್ಮ ಜೊತೆಗೆ ಬದುಕುವ ಹಾಗಿದ್ದರೆ ಬದುಕಲಿ, ಇಲ್ಲಾಂದ್ರೆ ಹೋಗಲಿ. ಎಲ್ಲರೂ ಸ್ವತಂತ್ರವಾಗಿ ಬದುಕುವ ಹಾಗಾಗಿದೆ” ಎಂದು ಹೇಳಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top