ಮನೋರಂಜನೆ

ಮಗಳು ಕೊಟ್ಟ ಸರ್ಪ್ರೈಸ್ ಉಡುಗೊರೆಯನ್ನ ನೋಡಿ ಬೆರಗಾದ ಅರ್ಜುನ್ ಸರ್ಜಾ.

ಸಿನಿಮಾ ಕಲಾವಿದರು ಸಾಮಾನ್ಯವಾಗಿ ತಮ್ಮ ಪೋಷಕರ, ಮಕ್ಕಳ ಅಥವಾ ಒಡಹುಟ್ಟಿದವರ ಹುಟ್ಟುಹಬ್ಬಕ್ಕಾಗಿ ಡಿಫರೆಂಟ್ ಉಡುಗೊರೆ ಕೊಡುತ್ತಾರೆ. ಅದರಲ್ಲೂ ಉಡುಗೊರೆಯಾಗಿ ಬೈಕ್, ಕಾರ್, ಚಿನ್ನ ಈ ರೀತಿ ದುಬಾರಿಯ ಉಡುಗೊರೆಯನ್ನು ಕೊಡುತ್ತಾರೆ. ಆದರೆ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಅವರ ಹೆಣ್ಣು ಮಕ್ಕಳು ನೀಡಿದ ಗಿಫ್ಟ್ ನೋಡಿ ಸ್ವತಃ ಅರ್ಜುನ್ ಅವರೇ ಆಶ್ಚರ್ಯ ಪಟ್ಟಿದ್ದಾರೆ.

 

 

ಬಹುಭಾಷಾ ನಟ ಅರ್ಜುನ್​ ಸರ್ಜಾ ಕಳೆದ ತಿಂಗಳಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ನಟ ಎಂದಮೇಲೆ ಅಭಿಮಾನಿಗಳ ಶುಭಾಶಯ, ಕೇಕ್​ ಕಟಿಂಗ್​ ಎಲ್ಲವೂ ಮಾಮೂಲಿ. ಆದರೆ, ಈ ಬಾರಿ ತನ್ನ ಮುದ್ದಿನ ಅಪ್ಪನಿಗೆ ಮಗಳು ಐಶ್ವರ್ಯ ಹಸುವನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಹೌದು, ನಟ ಅರ್ಜುನ್‌ ಸರ್ಜಾ ಅವರ ಮನೆಗೆ ಗುಜರಾತ್‌ ಮೂಲದ ಗಿರ್‌ ಹಸು ಬಂದಿದ್ದು, ಅದನ್ನು ಐಶ್ವರ್ಯಾ ಸರ್ಜಾ ಮತ್ತು ಅಂಜನಾ ಸರ್ಜಾ ಇಬ್ಬರೂ ಉಡುಗೊರೆಯಾಗಿ ನೀಡಿದ್ದಾರೆ.

 

 

ಇದು ನನ್ನ ಹುಟ್ಟುಹಬ್ಬದ ಬೆಸ್ಟ್​ ಗಿಫ್ಟ್ ಎಂದು ಖುಷಿಪಟ್ಟಿದ್ದಾರೆ. ಗರ್ಭ ಧರಿಸಿರುವ ಮುದ್ದಾದ ಕಂದು ಬಣ್ಣದ ಹಸುವಿನ ಜೊತೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಕರು ಕೂಡ ಅರ್ಜುನ್​ ಸರ್ಜಾ ಫ್ಯಾಮಿಲಿಯನ್ನು ಸೇರಿಕೊಳ್ಳಲಿದೆ. ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಏನಾದರು ಉಡುಗೊರೆ ಕೊಡಬೇಕು ಎಂದು ಯೋಚಿಸಿ ಒಂದು ಅಪರೂಪದ ಗಿಫ್ಟ್ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top