fbpx
ದೇವರು

ಅಕ್ಟೋಬರ್ 5 ನೇ ತಾರೀಖು ಇಂದಿರಾ ಏಕಾದಶಿ,ಈ ಏಕಾದಶಿಯ ಆಚರಣೆ ಹಾಗೂ ಮಹತ್ವವೇನು,ಇದರಿಂದ ಸಿಗುವ ಫಲವಾದರೂ ಏನು ಗೊತ್ತಾ

ಅಕ್ಟೋಬರ್ 5 ನೇ ತಾರೀಖಿನಂದು ಇಂದಿರಾ ಏಕಾದಶಿಯನ್ನು ಆಚರಿಸಲಾಗುತ್ತದೆ. ಇಂದಿರಾ ಏಕಾದಶಿಯು ಅಕ್ಟೋಬರ್ ಐದನೇ ತಾರೀಖು, ಶುಕ್ರವಾರದ ದಿನ ಆಚರಿಸಲಾಗುತ್ತದೆ. ಇಂದೂ ಧರ್ಮದಲ್ಲಿ ಪ್ರತ್ಯೇಕವಾಗಿ ಎರಡು ಏಕಾದಶಿಗಳು ಪಿತೃಪಕ್ಷದ ಮಾಸದಲ್ಲಿ ಬರುತ್ತದೆ. ಒಂದು ವರ್ಷಕ್ಕೆ 22 ಏಕಾದಶಿಗಳು ಬರುತ್ತವೆ ಮಲ ಮಾಸವು ಬಂದರೆ ಮಲ ಮಾಸದ ಎರಡು ಏಕಾದಶಿ ಗಳನ್ನು ಸೇರಿಸಿದರೆ ಒಟ್ಟಾಗಿ 24 ಏಕಾದಶಿಗಳು ಆಗುತ್ತವೆ.
ಪ್ರತ್ಯೇಕ ಏಕಾದಶಿಗೂ ಕೂಡ ಅದರದ್ದೇ ಆದ ವಿಭಿನ್ನವಾದ ಮಹತ್ವವಿರುತ್ತದೆ. ಪ್ರತಿ ಏಕಾದಶಿಯ ಕಥೆಯೂ ಕೂಡ ವಿಭಿನ್ನವಾಗಿರುತ್ತದೆ ಇಂದೂ ಧರ್ಮದಲ್ಲಿ ಏಕಾದಶಿಯನ್ನು ಮೋಕ್ಷಪ್ರಾಪ್ತಿಗೋಸ್ಕರವೇ ಇದೆ ಎಂದು ಹೇಳಲಾಗುತ್ತದೆ . ಆದರೆ ಕೆಲವು ಏಕಾದಶಿಗಳು ತುಂಬಾ ಮುಖ್ಯವಾಗಿರುತ್ತದೆ. ಈ ಏಕಾದಶಿಯ ವ್ರತವನ್ನು ಆಚರಣೆ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಏಕೆಂದರೆ ಈ ಏಕಾದಶಿಯು ಪಿತೃಪಕ್ಷದಲ್ಲಿ ಬಂದಿರುವುದರಿಂದ ಇದರಿಂದ ಇದರ ಮಹತ್ವವು ಕೂಡ ಹೆಚ್ಚಾಗುತ್ತದೆ.ಈ ಏಕಾದಶಿಯನ್ನು ಆಚರಣೆ ಮಾಡುವುದರಿಂದ ನಮ್ಮ ಪೂರ್ವಜರಲ್ಲಿ ಯಾರಾದರೂ ತಿಳಿದೋ ಅಥವಾ ತಿಳಿಯದೆಯೋ ಮಾಡಿದ ತಪ್ಪುಗಳಿಂದ ಯಮನಿಂದ ಯಾತನೆಯನ್ನು ಅನುಭವಿಸುತ್ತಿದ್ದರು, ಅಂತವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.

ನೀವು ಈ ಏಕಾದಶಿಯ ವ್ರತವನ್ನು ಭಕ್ತಿ ,ಶ್ರದ್ಧೆಯಿಂದ ಮಾಡಿ ನಿಮ್ಮ ಪೂರ್ವಜರಿಗೆ ಮುಕ್ತಿ ಮತ್ತು ಪುಣ್ಯ ಸಂಪಾದನೆಯನ್ನು ಮಾಡಲು ಸಹಾಯ ಮಾಡಿ. ಇದರಿಂದ ನಿಮ್ಮ ಪಿತೃಗಳಿಗೆ ಮೋಕ್ಷವು ಪ್ರಾಪ್ತಿಯಾಗಲಿದೆ. ಆಗ ಅವರು ವೈಕುಂಠದಲ್ಲಿ ಹೋಗಿ ನೆಲೆಸುತ್ತಾರೆ.ಭಗವಂತನಾದ ಶ್ರೀಕೃಷ್ಣನು ಧರ್ಮರಾಜನಾದ ಯುಧಿಷ್ಠಿರನಿಗೆ ಇಂದಿರಾ ಏಕಾದಶಿಯ ಮಹತ್ವದ ಬಗ್ಗೆ ಹೇಳುತ್ತಾನೆ. ಏಕಾದಶಿಯು ಸಹಸ್ರ ಪಾಪ ಕರ್ಮಗಳನ್ನು ನಾಶ ಮಾಡುತ್ತದೆ ಮತ್ತು ಇಂದಿರಾ ಏಕಾದಶಿಯ ವ್ರತವನ್ನು ಆಚರಣೆ ಮಾಡುವವರು ಪುಣ್ಯ ಮತ್ತು ಮೋಕ್ಷ ಸಂಪಾದನೆಯನ್ನು ಮಾಡುವುದಷ್ಟೇ ಅಲ್ಲದೆ ಅವರ ಪಿತೃಗಳು ಕೂಡ ಪುಣ್ಯ ಸಂಪಾದನೆಯನ್ನು ಮಾಡುತ್ತಾರೆ.

 

 

 

ಇಂದಿರಾ ಏಕಾದಶಿಯ ವ್ರತ ಕಥೆ.
ಕೃಷ್ಣನು ಯುಧಿಷ್ಠಿರನಿಗೆ ಹೇಳುತ್ತಾನೆ “ಹೇ ರಾಜ, ನಾನು ನಿನಗೆ ಇಂದಿರಾ ಏಕಾದಶಿಯ ಕಥೆಯನ್ನು ಹೇಳುತ್ತಿದ್ದೇನೆ. ಈ ಕಥೆಯನ್ನು ಕೇಳುವುದರಿಂದ ಮಾತ್ರವೇ ಇಂದಿರಾ ಏಕಾದಶಿ ವ್ರತವನ್ನು ಮಾಡಿದಷ್ಟೇ ಫಲವು ಪ್ರಾಪ್ತಿಯಾಗಲಿದೆ.
ಸತ್ಯಯುಗದಲ್ಲಿ ಮಹಿಷ್ಮತಿ ಹೆಸರಿನ ನಗರದಲ್ಲಿ, ಇಂದ್ರಸೇನ ಎಂಬ ಹೆಸರಿನ ಒಬ್ಬ ರಾಜನಿದ್ದನು. ರಾಜ ತುಂಬಾ ದೊಡ್ಡ ಧರ್ಮಾತ್ಮನಾಗಿದ್ದ , ಅವನ ಪ್ರಜೆಗಳು ಕೂಡ ಸುಖದಿಂದ ಜೀವಿಸುತ್ತಿದ್ದರು. ಅವನ ರಾಜ್ಯದಲ್ಲಿ ಧರ್ಮ ಕರ್ಮಗಳ ಎಲ್ಲಾ ಕಾರ್ಯವೂ ತುಂಬಾ ಶ್ರದ್ಧೆ, ಭಕ್ತಿಯಿಂದ ಮತ್ತು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಒಂದು ದಿನ ನಾರದರು ಇಂದ್ರಸೇನನ ದರ್ಬಾರಿನಲ್ಲಿ ಹೋದನು. ರಾಜ ಇಂದ್ರಸೇನನು ಅವನಿಗೆ ಎದ್ದು ನಿಂತು ನಮಸ್ಕಾರ ಮಾಡಿದನು.ನಂತರ ಅವರನ್ನು ಇಲ್ಲಿಗೆ ಬಂದ ಉದ್ದೇಶವೇನು ? ಎಂದು ಕೇಳುತ್ತಾನೆ.

ಆಗ ನಾರದರು ಹೇಳುತ್ತಾರೆ. ನಾನು ನಿಮ್ಮ ತಂದೆಯ ಸಂದೇಶವನ್ನು ತೆಗೆದುಕೊಂಡು ಬಂದಿದ್ದೇನೆ. ಈ ಸಮಯದಲ್ಲಿ ಪೂರ್ವಜನ್ಮದಲ್ಲಿ ಏಕಾದಶಿಯ ವ್ರತವು ಭಂಗವಾಗಿರುವುದರಿಂದ, ನಿಮ್ಮ ತಂದೆಯು ಯಮರಾಜನ ಬಳಿ ಇದ್ದು ಕೊಂಡು ಅದರ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ ಇಂದು ನಾರದರು ಹೇಳುತ್ತಾರೆ. ಈ ಮಾತನ್ನು ಕೇಳಿದ ಇಂದ್ರಸೇನನಿಗೆ ಅವರ ತಂದೆಯನ್ನು ಜ್ಞಾಪಿಸಿಕೊಂಡು ತುಂಬಾ ದುಃಖಿತನಾಗಿ ಚಿಂತಾಕ್ರಾಂತನಾಗುತ್ತಾನೆ.ನಂತರ ನಾರದ ಮಹರ್ಷಿಗಳ ಬಳಿ ಇಂದ್ರಸೇನನು ಕೇಳುತ್ತಾನೆ. ಇದನ್ನು ಪರಿಹಾರ ಮಾಡಲು ಯಾವ ಉಪಾಯ ಇದೆ ದಯವಿಟ್ಟು ಹೇಳಿ.ಯಾವ ಪೂಜೆ ವ್ರತ ಮಾಡಿದರೆ ನಮ್ಮ ತಂದೆಗೆ ಮೋಕ್ಷ ಪ್ರಾಪ್ತಿಯಾಗಲಿದೆ ಹೇಳಿ ಎಂದು ಕೇಳುತ್ತಾನೆ. ಆಗ ದೇವರ್ಷಿ ನಾರದರು ಹೇಳುತ್ತಾರೆ ರಾಜ ನೀನು ಅಶ್ವಿನಿ ಮಾಸದ, ಕೃಷ್ಣ ಪಕ್ಷದ ಏಕಾದಶಿ ವ್ರತವನ್ನು ವಿಧಿಪೂರ್ವಕವಾಗಿ ಆಚರಿಸಿ, ಆ ವ್ರತದ ಪುಣ್ಯ ಫಲವನ್ನು ನಿಮ್ಮ ತಂದೆಯ ಹೆಸರಿನಲ್ಲಿ ದಾನ ಮಾಡು, ಇದರಿಂದ ನಿಮ್ಮ ತಂದೆಗೆ ಮುಕ್ತಿಯು ಪ್ರಾಪ್ತಿಯಾಗಲಿದೆ. ನಾರದ ಮಹರ್ಷಿಗಳಿಂದ ಈ ಮಾತನ್ನು ಕೇಳಿದ ಇಂದ್ರಸೇನೆನು ಅಶ್ವಿನಿ ಮಾಸದ, ಕೃಷ್ಣ ಪಕ್ಷದ ಏಕಾದಶಿಯನ್ನು ವಿಧಿ ವಿಧಾನದಿಂದ ಏಕಾದಶಿ ವ್ರತವನ್ನು ಮಾದುತ್ತಾನೆ. ಅದರಿಂದ ಅವರ ತಂದೆಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಯಮನಿಂದ ಮುಕ್ತಿ ದೊರೆತು, ವೈಕುಂಠದಲ್ಲಿ ನೆಲೆಸುತ್ತಾರೆ ಮತ್ತು ರಾಜ ಇಂದ್ರಸೇನನು ಕೂಡ ವೈಕುಂಠವನ್ನು ಮರಣದ ನಂತರ ಸೇರುತ್ತಾನೆ.ಇಂದ್ರಸೇನನು ಸತ್ಯ ಯುಗದಲ್ಲಿ ಮೊದಲು ಈ ವ್ರತವನ್ನು ಮಾಡಿದ್ದರಿಂದಲೇ ಈ ಏಕಾದಶಿ ವ್ರತಕ್ಕೆ ಇಂದಿರಾ ಏಕಾದಶಿ ಎಂಬ ಹೆಸರು ಬಂದಿದೆ.

 

ಇಂದಿರಾ ಏಕಾದಶಿ ವ್ರತ ,ಪೂಜಾ ವಿಧಾನಗಳು ಹೇಗೆ ?
ದೇವರ್ಷಿ ನಾರದರು ಇಂದಿರಾ ಏಕಾದಶಿಯ ಪೂಜಾ ವಿಧಾನಗಳನ್ನು ಹೇಳುವಾಗ ಹೀಗೆ ಹೇಳುತ್ತಾರೆ “ವ್ರತದ ಪಾಲನೆಯನ್ನು ದಶಮಿಯ ದಿನದ ಸಾಯಂಕಾಲದಿಂದ ಪ್ರಾರಂಭಿಸಬೇಕು . ದಶಮಿ ತಿಥಿ ಸಂಜೆಯಿಂದ ವ್ರತ ಮಾಡುವವರು ಆಹಾರವನ್ನು ಸ್ವೀಕರಿಸಬಾರದು. ಮತ್ತು ಮಾರನೇ ದಿನ ಬೆಳಗ್ಗೆ ಬೇಗನೇ ಎದ್ದು ನಿತ್ಯಕರ್ಮಗಳನ್ನು ಮುಗಿಸಿಕೊಂಡು, ಸ್ನಾನ ಮಾಡಿ ಶುಚಿರ್ಭೂತರಾಗಿ, ಶ್ರದ್ಧಾಪೂರ್ವಕವಾಗಿ ವ್ರತದ ಸಂಕಲ್ಪವನ್ನು ತೆಗೆದುಕೊಂಡು ನಾನು ನನ್ನ ಎಲ್ಲಾ ಭೋಜನವನ್ನು ತ್ಯಾಗ ಮಾಡಿ , ಏಕಾದಶಿಯ ವ್ರತವನ್ನು ಮಾಡುತ್ತಾರೆ. ನಾನು ನಿಮಗೆ ಶರಣಾಗುತ್ತೇನೆ.ನನ್ನನ್ನು ರಕ್ಷಿಸಿ ಏಕಾದಶಿಯ ಈ ಪುಣ್ಯವನ್ನು ನನ್ನ ಪಿತೃಗಳಿಗೆ ನೀಡು, ಎಂದು ಪ್ರಾರ್ಥಿಸಿ ಸಂಕಲ್ಪ ಮಾಡಿ . ಈ ರೀತಿ ಸಂಕಲ್ಪ ಮಾಡಿದ ನಂತರ ಭಗವಂತನಾದ ವಿಷ್ಣು ದೇವರ ಮೂರ್ತಿಯ ಮುಂದೆ ಈ ವ್ರತದ ಕಥೆಯನ್ನು ಓದಿ ಮತ್ತು ವಿಷ್ಣು ಸಾಲಿಗ್ರಾಮವನ್ನು ಪೂಜೆ ಮಾಡಿ, ಕಥೆಯನ್ನು ಹೇಳಿದ ನಂತರ ಬ್ರಾಹ್ಮಣರಿಗೆ ಊಟ, ಉಪಚಾರ ,ಫಲಹಾರವನ್ನು ಮಾಡಿಸಿ ಮತ್ತು ದಾನ ದಕ್ಷಿಣೆಗಳನ್ನು ಮಾಡಿ.ನಂತರ ಮುಂಜಾನೆ ಅಂದರೆ ದ್ವಾದಶಿಯ ದಿನ, ಶನಿವಾರ ಬೆಳಗ್ಗೆ ವ್ರಥವನ್ನು ಸಂಪೂರ್ಣ ಮಾಡಿ, ಬ್ರಾಹ್ಮಣರಿಗೆ ಭೋಜನ ಮಾಡಿಸಿ ಅಥವಾ ಭೋಜನದ ಸಾಮಗ್ರಿಗಳನ್ನು ಬ್ರಾಹ್ಮಣರಿಗೆ ದಾನ ನೀಡಿ ನಂತರ ನಿಮ್ಮ ವ್ರತವನ್ನು ಮುಗಿಸಿ. ನೀವು ಕೂಡ ಭೋಜನ ಮಾಡಬಹುದು.

 

 

 

ಇಂದಿರಾ ಏಕಾದಶಿಯ ವೃತದ ಮಹತ್ವವೇನು ?
ಇಂದಿರಾ ಏಕಾದಶಿ ಮುಖ್ಯವಾಗಿ ಪಿತೃಗಳಿಗೆ ಮೋಕ್ಷವನ್ನು ಕರುಣಿಸಲು ಎಂದೇ ಇದೆ . ಯಾವ ವ್ಯಕ್ತಿ ಏಕಾದಶಿಯ ವ್ರತವನ್ನು ಮಾಡಿ ಇದರ ಪುಣ್ಯ ಫಲವನ್ನು ಅವರ ಪಿತೃಗಳಿಗೆ ಪ್ರಧಾನ ಮಾಡುತ್ತಾರೆ. ಆವಾಗ ಪಿತೃಗಳಿಗೆ ಯಾವುದೇ ಪ್ರಕಾರದ ಶಿಕ್ಷೆಯಾದರೂ ಕೂಡ ಅದರಿಂದ ಮುಕ್ತಿಯನ್ನು ಪಡೆಯುತ್ತದೆ, ಮೋಕ್ಷ ಪ್ರಾಪ್ತಿಯಾಗುತ್ತದೆ, ಪುಣ್ಯ ಸಂಪಾದನೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ವ್ರತ ಮಾಡುವವರಿಗೂ ಕೂಡ ಮೋಕ್ಷ ಪ್ರಾಪ್ತಿಯಾಗಲಿದೆ. ಈ ಏಕಾದಶಿಯ ಮಹತ್ವ ಎಷ್ಟಿದೆಯೆಂದರೆ ಪಿತೃಗಳಿಗೆ ಮೋಕ್ಷ ಪ್ರಾಪ್ತಿ ಮತ್ತು ಪುಣ್ಯಪ್ರಾಪ್ತಿ ಗಳಿಸಿಕೊಂಡ ಮೇಲೆ ವ್ರತ ಮಾಡುವವರಿಗೂ ಕೂಡ ಅವರ ಜೀವನದಲ್ಲಿ ಸುಖ, ಸಮೃದ್ಧಿ, ಧನ-ಧಾನ್ಯಗಳು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top