ಸಮಾಚಾರ

ಯೂಟ್ಯೂಬ್​ನಲ್ಲಿ ‘ಅಂಬಿ ನಿಂಗ್​ ವಯಸ್ಸಾಯ್ತೊ’ ಅಪ್ಲೋಡ್ ಮಾಡಿದ ಕಿಡಿಗೇಡಿ- ಸುದೀಪ್​ ಗರಂ

ಬಹುಶಃ ಹೊಟ್ಟೆಗೆ ಅನ್ನವನ್ನು ಮಾತ್ರವೇ ತಿನ್ನುವವರು ಮಾಡುವ ಕೆಲಸ ಇದಲ್ಲ. ವರ್ಷಾನುಗಟ್ಟಲೆ ಪಡಬಾರದ ಪರಿಪಾಟಲು ಬಿದ್ದು, ಕೋಟಿಗಟ್ಟಲೆ ಹಣ ಸುರಿದು, ನೂರಾರು ಜನ ಶ್ರಮಪಟ್ಟು ಮಾಡಿದ ಸಿನಿಮಾವೊಂದನ್ನು, ಅದು ರಿಲೀಸಾದ ವಾರವೇ ಪೈರಸಿ ಮಾಡಿ, ಅದನ್ನು ಇಂಟರ್’ನೆಟ್ಟಿಗೆ ಅಪ್‌ಲೋಡ್ ಮಾಡುತ್ತಾರೆಂದರೆ, ಅಂಥವರಿಗೆ ಏನನ್ನಬೇಕು? ಈ ಮಾತುಗಳನ್ನ ಯಾಕೆ ಹೇಳ್ತಿದ್ದೀವಿ ಅಂದ್ರೆ ಈ ವಾರವಷ್ಟೇ ತೆರೆಕಂಡಿದ್ದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಪೂರ್ತಿ ಸಿನಿಮಾವನ್ನು ಕಿಡಿಗೇಡಿಗಳ್ಯಾರೋ ರೆಕಾರ್ಡ್ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

 

 

ಪೈರಸಿ ತಡೆಯಲು ಕನ್ನಡ ಸಿನಿರಂಗ ಏನೆಲ್ಲಾ ಕ್ರಮ ಕೈಗೊಂಡರು ಕೆಲವು ಕಿಡಿಗೇಡಿಗಳು ಇದನ್ನು ವಿಫಲ ಮಾಡುತ್ತಾರೆ. ‘ಅಂಬಿ ನಿಂಗ್​ ವಯಸ್ಸಾಯ್ತೋ’ ಚಿತ್ರದ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಓಡುತ್ತಿರುವಾಗಲೇ ಕಿಡಿಗೇಡಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ..

ವಿಷಯ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್​ “ಚಿತ್ರದ ಬಗ್ಗೆ ಇರುವ ನಿಮ್ಮ ಕಾಳಜಿಗೆ ಧನ್ಯವಾದಗಳು. ನೀವು ಎಲ್ಲ ಸಮಯದಲ್ಲೂ ನಮ್ಮ ಜತೆ ನಿಂತಿದ್ದೀರ” ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಚಿತ್ರವನ್ನು ಯೂಟ್ಯೂಬ್​ ನಲ್ಲಿ ಅಪ್ಲೋಡ್ ಮಾಡಿರುವ ವ್ಯಕ್ತಿ ವಿರುದ್ಧ ಸ್ವೀಟ್ ವಾರ್ನಿಂಗ್ ಕೊಟ್ಟಿರುವ ಸುದೀಪ್ “ಗೆಳೆಯ ನೀನು ನಮ್ಮಿಂದ ಬಹಳ ದೂರವಿಲ್ಲ. ನಿನ್ನನ್ನು ಹೇಗೆ ಪತ್ತೆ ಹಚ್ಚುವುದು ಎಂಬುದು ನನಗೆ ಗೊತ್ತು,, ಇದು ಕೋಪದ ಸಾಲುಗಳಲ್ಲ, ಸರಿ ತಪ್ಪಿನ ಪ್ರಶ್ನೆ. ಆದಷ್ಟುಬೇಗ ಬೇಗ ಸಿಗೋಣ​…” ಎಂದು ಎಚ್ಚರಿಕೆ ನೀಡಿದ್ದಾರೆ.

ಆ ನಂತರ ಯೂಟ್ಯೂಬ್​ ಚಾನಲ್​ನಿಂದ ಚಿತ್ರವನ್ನು ಡಿಲೀಟ್​ ಮಾಡಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top