ಮನೋರಂಜನೆ

ಅಭಿಮಾನಿಗೆ ಕಾಲಿನಿಂದ ಒದ್ದು ತುಳಿದ ತೆಲುಗು ಸ್ಟಾರ್ ಬಾಲಕೃಷ್ಣ.

ಟಾಲಿವುಡ್​ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಹೊಡೆಯುವುದರ ಜತೆಗೆ ಕಾಲಲ್ಲಿ ಒದ್ದಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ಹಿಂದೆ ಅನೇಕ ಭಾರಿ ಸಾರ್ವಜನಿಕವಾಗಿಯೇ ಅಭಿಮಾನಿಗಳ ಮೇಲೆ ಬಾಲಕೃಷ್ಣ ಹಲ್ಲೆ ಮಾಡಿದ್ದರು.

ನಟ ಕಮ್ ರಾಜಕಾರಣಿ ಬಾಲಯ್ಯ ಇತ್ತೀಚಿಗೆ ತೆಲಂಗಾಣದ ಕಮ್ಮಮ್​ ಜಿಲ್ಲೆಯಲ್ಲಿ ರಾಜಕೀಯ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಹುಚ್ಚು ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕು ಎಂದು ಬಾಲಕೃಷ್ಣ ಪ್ರಯಾಣಿಸುತ್ತಿದ್ದ ಕಾರನ್ನ ನಿಲ್ಲಿಸಲು ಯತ್ನಿಸಿದ್ದನಂತೆ. ಇದರಿಂದ ಕೋಪಗೊಂಡ ಬಾಲಯ್ಯ, ಕಾರಿನಿಂದಿಳಿದು ಕೆಲ ಅಭಿಮಾನಿಗಳಿಗೆ ಮನಬಂದಂತೆ ಹೊಡೆದಿದ್ದಷ್ಟೆ ಅಲ್ಲದೇ, ಕಾಲಿನಿಂದ ಒದ್ದಿದ್ದಾರೆ ಎನ್ನಲಾಗುತ್ತಿದೆ.

 

 

ಹಾಗೆ ನೋಡಿದರೆ ಬಾಲಯ್ಯ ಅಭಿಮಾನಿಗಳ ಮೇಲೆ ಕೈ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವಷ್ಟೇ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಮೂಗಿನ ತುದಿಯಲ್ಲೇ ಕೋಪ. ಅದು ಪದೇಪದೆ ಸಾಬೀತಾಗಿದೆ ಕೂಡ. ಇಂತಹದೇ ಘಟನೆಗಳು ಅದೆಷ್ಟು ನಡೆದರೂ ಅಭಿಮಾನಿಗಳನ್ನು ಹುಚ್ಚರಂತೆ ಪ್ರೀತಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top