fbpx
ಮನೋರಂಜನೆ

ಹೆತ್ತವರಿಂದ ಬೀದಿಗೆ ಬಿದ್ದು ಮತ್ತೆ ಬದುಕು ಕಟ್ಟಿಕೊಂಡ ದಿಟ್ಟ ಹೆಣ್ಣು ಹಿರಿಯ ನಟಿ ಕಾಂಚನರವರ ಜೀವನ ಕಥೆ

ತನ್ನ ಹೆತ್ತವರಿಂದ ಮೋಸ ಹೋಗಿ ,ಬೀದಿಗೆ ಬಿದ್ದು ಮತ್ತೆ ಬದುಕು ಕಟ್ಟಿಕೊಂಡ ಕನ್ನಡದ ಹಿರಿಯ ನಟಿ ಕಾಂಚನರವರದ್ದು ಕಥೆಯಲ್ಲ ವ್ಯಥೆ :

ಹಿರಿಯ ನಟಿ ಕಾಂಚನರವರು ಹುಟ್ಟಿದು 16 ಆಗಸ್ಟ್ 1939 ,ಮದ್ರಾಸ್ ನಲ್ಲಿ .ಇವರ ನಿಜವಾದ ಹೆಸರು ವಸುಂಧರಾ ದೇವಿ,ಸಿನಿಮಾಗಾಗಿ ಇವರ ಹೆಸರನ್ನು ಕಾಂಚನ ಎಂದು ಬದಲಿಸಲಾಗಿತ್ತು .ಇವರು ಕನ್ನಡ ಸೇರಿದಂತೆ ತೆಲುಗು ,ತಮಿಳು ,ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಚಪಾಳೆ ಗಿಟ್ಟಿಸಿಕೊಂಡವರು .ಇವರು ಎಲ್ಲ ಭಾಷೆಯ ದೊಡ್ಡ ದೊಡ್ಡ ಹೀರೋಗಳ ಜೊತೆ ನಟಿಸಿ ಸೈ ಅನಿಸಿಕೊಂಡವರು .

 

 

 

ಹುಟ್ಟುತ್ತಾ ಒಂದು ತುಂಬಾ ಶ್ರೀಮಂತ ಕುಟುಂಬದಲ್ಲಿ ಜನಿಸಿದರು ಕಾಂಚನ. ,ಇವರ ತಂದೆ ಒಬ್ಬ ಸಿವಿಲ್ ಇಂಜಿನಿಯರ್ ಹುದ್ದೆಯಲ್ಲಿ ಇದ್ದವರು .ಸ್ವಲ್ಪ ವರ್ಷಗಳ ನಂತರ ಕಾಂಚನರವರ ತಂದೆ ಸಿವಿಲ್ ಇಂಜಿನಿಯರ್ ಹುದ್ದೆ ಬಿಟ್ಟು ವ್ಯಪಾರ ಮಾಡುತ್ತಾರೆ ಅದರಲ್ಲಿ ಅತಿಯಾದ ನಷ್ಟ ಹೊಂದಿ ಅವರ ಇಡೀ ಸಂಸಾರ ಬಿದ್ದಿಗೆ ಬೀಳುತ್ತದೆ .ವಿಧಿಇಲ್ಲದೆ ಕಾಂಚನರವರು ಅವರ ಸಂಸಾರದ ಹೊಣೆಯನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡು ಏರ್ ಹೋಸ್ಟೆಸ್ ಕೆಲಸಕ್ಕೆ ಸೇರುತ್ತಾರೆ ,ಹೀಗೆ ಜೀವನ ನಡೆಯುತ್ತಾ ಇರುವಾಗ ಒಂದು ದಿನ ಕಾಂಚನಾರವರು ಇದ್ದ ವಿಮಾನದಲ್ಲಿ ಪ್ರಯಾಣಿಕರಾಗಿ ಪ್ರಯಾಣ ಮಾಡುತ್ತಿದ್ದ ನಿರ್ದೇಶಕ ಶ್ರೀಧರ್ ಇವರನ್ನು ನೋಡಿ ಅವರ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಳ್ಳುತ್ತಾರೆ .ಮೊದಲು ಹಿಂಜರಿದ ಕಾಂಚನ ನಂತರ ಒಪ್ಪಿಕೊಳ್ಳುತ್ತಾರೆ .

ಕಾಂಚನ ರವರು ಮೊದಲು ನಟಿಸಿದ ಸಿನಿಮಾ ಕಾಧಲಿಕ್ಕ ನೇರಾಮಿಲ್ಲಯ್ಯ ,ನಂತರ ಸಿನಿಮಾ ಆಫರ್ ಗಳು ಒಂದರ ಮೇಲೆ ಒಂದು ಸಿಗಲು ಆರಂಭವಾಯಿತ್ತು .ತಮ್ಮ ನಟನೆ ಯಿಂದ ಪ್ರೇಕ್ಷಕರ ಮನ ಗೆಲುವುದರ ಜೊತೆ ತಮ್ಮ ಬಡತನದಿಂದ ಹೊರಬರುತ್ತಾರೆ ಕಾಂಚನ .ಕಾಂಚನ ರವರು 150 ಅಧಿಕ ಚಿತ್ರಗಲ್ಲಿ ನಟಿಸಿದ್ದಾರೆ ,ಇವರು ನಟಿಸಿರುವ ಕನ್ನಡದ ಪ್ರಮುಖ ಚಿತ್ರಗಳು ಮೇಯರ್ ಮುತಾನ್ನ ,ದೇವತಾ ಮನುಷ್ಯ , ನಾನೊಬ್ಬ ಕಳ್ಳ ,ವೀರಾಧಿ ವೀರ ,ರಥ ಸಪ್ತಮಿ ಇನ್ನು ಹಲವು .

ಎಲ್ಲವೂ ಚೆನ್ನಾಗಿಯೇ ನಡೆಯುತಿತ್ತು ,ಆ ಸಮಯದಲ್ಲಿ ಕಾಂಚನರವರ ಬದುಕಿನಲ್ಲಿ ಬಿರುಗಾಳಿ ಬಂದು ಬಿಸಿತ್ತು ,ಇವರು ತುಂಬಾ ಪ್ರೀತಿ ಮಾಡುತ್ತಿದ್ದ ಹಾಗೂ ತುಂಬಾ ನಂಬಿದ ಅವರ ತಂದೆ-ತಾಯಿಯ ಕಡೆಯಿಂದ ಇವರಿಗೆ ನಡೆಯಬಾರದ ಮೋಸ ನಡೆದಿತ್ತು .ಅವರು ಪ್ರೀತಿ ಮಾಡುತ್ತಿದ್ದ ಅವರ ತಂದೆ ಒಂದು ದಿನ ಖಾಲಿ ಪತ್ರದಲ್ಲಿ ಕಾಂಚನರವರ ಸಹಿ ತೆಗೆದುಕೊಳ್ಳುತ್ತಾರೆ ,ಅವರ ತಂದೆಯನ್ನು ಅವರ ಪ್ರಾಣಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಕಾರಣ ನಂಬಿಕೆಯ ಮೇಲೆ ಆ ಪತ್ರಕ್ಕೆ ಸಹಿ ಮಾಡುತ್ತಾರೆ ಕಾಂಚನ .ಕಲವು ದಿನಗಳ ನಂತರ ಕಾಂಚನ ರವರಿಗೆ ಗೊತ್ತಾಗುತ್ತದೆ ಇವರ ತಂದೆ-ತಾಯಿಯ ಮೋಸದ ಆಟ ,ಮೋಸ ಮಾಡಿ ಕಾಂಚನ ರವರನ್ನು ಮನೆಯಿಂದ ಹೊರಹಾಕುತ್ತಾರೆ ಕಾಂಚನಾರವರ ತಂದೆ -ತಾಯಿ .ನಂತರ ಕಾಂಚನರವರಿಗೆ ತಿಳಿದು ಬರುವ ವಿಷಯ ವೆಂದರೆ ಆಸ್ತಿಯ ಕಾರಣಕ್ಕಾಗಿಯೇ ಅವರಿಗೆ ಮದುವೆ ಮಾಡಿಲ್ಲ ಎಂದು ,ಮದುವೆ ಮಾಡಿದ್ದಾರೆ ಆಸ್ತಿ ಬೇರೆಯವರ ಪಾಲಾಗುತ್ತದೆ ಎಂದು .
ತನ್ನ ಎಲ್ಲ ಆಸ್ತಿ ,ಮನೆಯವರನ್ನು ಕಳೆದುಕೊಂಡು ದಿಕ್ಕು ತೊಚ್ಚದಂತೆ ಆಗಿ ಕೊನೆಗೆ ಒಂದು ದಿನ ಕಾಂಚನ ಅವರ ತಂದೆ ತಾಯಿಯ ವಿರುದ್ಧ ಕೇಸ್ ಹಾಕುತ್ತಾರೆ ,25 ಅಕ್ಟೋಬರ್ 2010 ಆ ಕೇಸ್ನಲ್ಲಿ ಗೆದ್ದು ಆ ಹಣ 150 ಮಿಲಿಯನ್
ತಿರುಮಲ ತಿರುಪತಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡುತ್ತಾರೆ .

 

 

 

ಈಗ ಕಾಂಚನ ರವರಿಗೆ 78 ವರ್ಷ ,ಬೆಂಗಳೂರಿನಲ್ಲಿ ವಾಸವಿದ್ದು ಒಂಟಿ ಜೀವನ ನಡೆಸುತ್ತಿದ್ದಾರೆ ,30 ವರ್ಷಗಳ ಕಾಲ ಸಿನಿಮಾ ರಂಗದಿಂದ ಹೊರ ಉಳಿದು ಈಗ ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ .
ದೇವರು ಈ ನಿಸ್ವಾರ್ಥ ಜೀವಕ್ಕೆ ಒಳ್ಳೆ ಆರೋಗ್ಯ,ಆಯಸ್ಸು ಕೊಡಲಿ ಎಂದು ನಾವು ಕೇಳಿಕೊಳ್ಳೋಣ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top