fbpx
ಮನೋರಂಜನೆ

‘ಚುಟು ಚುಟು’ ಆಯ್ತು ಈಗ ‘ಕುಟ್ಟು ಕುಟ್ಟು’ ಅಂತಿದ್ದಾರೆ ಶರಣ್- ವೈರಲ್ ಆಯ್ತು ಮತ್ತೊಂದು ಜವಾರಿ ಸ್ಟೈಲ್ ಹಾಡು.

Rambo-2 ನಲ್ಲಿ ಉತ್ತರ ಕನ್ನಡ ಭಾಷೆಯ ‘ಚುಟು ಚುಟು’ ಅಂತೈತಿ ಹಾಡಿನ ಮೂಲಕ ಪಡ್ಡೆಗಳ ಮೈ ಬಿಸಿಯೇರಿಸಿತ್ತು ಶರಣ್-ಅಶಿಕಾ ರಂಗನಾಥ್ ಜೋಡಿ.. ಈಗ ಶರಣ್ ಕುಟು ಕುಟು ಎನ್ನುತ್ತಾ ಬಂದಿದ್ದಾರೆ. ಆದರೆ ಇಲ್ಲಿ ಅಶಿಕಾ ಬದಲಿಗೆ, ಶರಣ್’ಗೆ ಅಪೂರ್ವ ಜೊತೆಯಾಗಿದ್ದಾರೆ. ಹೌದು ವಿಕ್ಟರಿ 2 ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲು ಆಗಮಿಸುತ್ತಿರುವ ನಟ ಶರಣ್‍ರ ಸಿನಿಮಾದ ಕುಟ್ಟು ಕುಟ್ಟು ಹಾಡು ಬಿಡುಗಡೆಯಾಗಿದೆ.

 

 

ವಿಕ್ಟರಿ-2 ಸಿನಿಮಾದ ಕುಟ್ಟು ಕುಟ್ಟು ಸಾಂಗ್ ಕ್ಯಾಚಿ ಸಾಲುಗಳ ಮೂಲಕ ಕೇಳುಗರನ್ನು ಕುಣಿಯುವಂತೆ ಮಾಡುತ್ತಿರುವ ಹಾಡು ಎಲ್ಲರಿಗೂ ಇಷ್ಟವಾಗುತ್ತಿದೆ. ಉತ್ತರ ಕನ್ನಡ ಭಾಷೆಯ ಸಾಂಗ್​​ನ ಸೇರಿಸಿ, ಮತ್ತೊಮ್ಮ ಭರ್ಜರಿ ಎಂಟರ್​ಟೈನ್​ಮೆಂಟ್​ ನೀಡಿದ್ದಾರೆ. ಕೇಳಿದರೆ ಡ್ಯಾನ್ಸ್ ಮಾಡ್ಬೇಕು ಅಂತ ಅನಿಸುವ ಈ ಹಾಡನ್ನ ಶಮಿತಾ ಮಲ್ನಾಡ್​ ಹಾಗೂ ಶಬ್ಬಿರ್​ ಧಂಗೆ ಹಾಡಿದ್ದಾರೆ.

2013ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ವಿಕ್ಟರ್ ಚಿತ್ರದ ಸೀಕ್ವೆಲ್ ಇದಾಗಿದೆ. ಸಿನಿಮಾವನ್ನು ಅಲೆಮಾರಿ ಸಂತು ನಿರ್ದೇಶಿಸುತ್ತಿದ್ದು ಚಿತ್ರದಲ್ಲಿ ಶರಣ್ ಅವರಿಗೆ ಅಪೂರ್ವ ಜೋಡಿಯಾಗಿದ್ದಾರೆ. ಅಲ್ಲದೇ ಈ ಹಿಂದೆ ವಿಕ್ಟರಿ ಸಿನಿಮಾದಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ.. ಅದಾಗಲೇ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ಟೀಸರ್ ನಲ್ಲಿರುವ ಡಬ್ಬಲ್​ ಮೀನಿಂಗ್​ ಡೈಲಾಗ್’ಗಳು ಪಡ್ಡೆ ಹುಡುಗರಿಗೆ ಕಚಗುಳಿ ಇಡುತ್ತಿವೆ.

ತರುಣ್​ ಶಿವಪ್ಪ ನಿರ್ಮಾಣದ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ., ತಬಲಾ ನಾಣಿ, ನಾಸೀನ್​, ಅವಿನಾಸ್​, ಮಿತ್ರ. ಕಲ್ಯಾಣಿ, ಅರಸು ಹಾಗೂ ಸಿದ್ದಿ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top