ಮನೋರಂಜನೆ

“ವಿಜಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ, ಯಾರ ಜೀವನ ಹಾಳಾಗುತ್ತಿದೆ ಅಂತ ಗೊತ್ತಾಗುತ್ತೆ” ನಾಗರತ್ನ.

ದುನಿಯಾ ವಿಜಯ್​ಗೆ ಜೈಲಿನಿಂದ  ಹೊರಬರುತ್ತಿದ್ದಂತೆ ಮೊದಲ ಪತ್ನಿ ನಾಗರತ್ನ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಿ ಕೀರ್ತಿಗೌಡನೇ ನನ್ನ ಹೆಂಡತಿ ಮತ್ಯಾರು ಅಲ್ಲ ಎಂದು​ ತಿಳಿಸಿದ್ದರು. ಆದರೆ, ದುನಿಯಾ ವಿಜಿಗೆ ಐದು ಮದುವೆಯಾಗಿದೆ ಕೀರ್ತಿ ಗೌಡ ಐದನೆಯವಳು ಎಂಬ ಹೊಸ ಸತ್ಯವನ್ನು ನಾಗರತ್ನ ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗರತ್ನ ಅವರು “ವಿಜಯ್ ರಕ್ತ ಕಣ್ಣೀರು ಸಿನಿಮಾ ನೋಡಿಲ್ಲ ಅನ್ಸುತ್ತೆ. ಅವರಿಗೆ ರಕ್ತಕಣ್ಣೀರು ಸಿನಿಮಾ ನೋಡೋಕೆ ಹೇಳಿ. ಯಾರ ಜೀವನ ಹಾಳಾಗುತ್ತದೆ ಎನ್ನುವುದು ತಿಳಿಯುತ್ತದೆ. ಅವರ ಬಳಿ ಸಿನಿಮಾ ಇಲ್ಲದಿದ್ದರೆ ಬೇಕಾದರೆ ನಾನೇ ಸಿಡಿ ತರಿಸಿ ಕೊಡುತ್ತೇನೆ,, ನಾನು ಅವರೊಂದಿಗೆ ಜೀವನ ಮಾಡಲು ಬಂದವಳು. ಕೀರ್ತಿ ದುಡ್ಡಿಗೆ ಬಂದು ಸಂಸಾರ ಮಾಡುತ್ತಿದ್ದಾಳೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಈ ಬಗ್ಗೆ ವಿಜಯ್​ಗೆ ತಿಳಿಯಬೇಕಿದೆ ಅಷ್ಟೇ.

ಕೀರ್ತಿಗೆ ದುನಿಯಾ ವಿಜಯ್ ಅವರೇ ಮೊದಲ ಸಂಭಂದವಲ್ಲ, ಆಕೆ ಮೊದಲು ಸ್ಲಮ್ ನಲ್ಲಿದ್ದಳು. ಅಲ್ಲಿಯೇ ಅವಳಿಗೆ ಮೂರ್ನಾಲ್ಕು ಜನ ಬಾಯ್ ಫ್ರೆಂಡ್ಸ್ ಇದ್ದರು.. ಅವಳು ಯಾವ ನಿರ್ಮಾಪಕರ ಜೊತೆ ಮಲಗಿದ್ದಾಳೆ ಎಂಬುದರ ಕುರಿತು ನನ್ನ ಬಳಿ ದಾಖಲೆಗಳಿವೆ. ಇದನ್ನೆಲ್ಲಾ ಆಕೆಯ ತಾಯಿಯೇ ನನ್ನ ಬಳಿ ಹೇಳಿದ್ದಾರೆ. ವಿಜಯ್ ಅವರ ಹೆಸರು ಮತ್ತು ದುಡ್ಡು ನೋಡಿ ಬಂದಿದ್ದಾಳೆ. ಅವಳ ಜೊತೆ ವಿಜಯ್​ ಮದುವೆಯಾಗಿರುವುದು ನನಗೆ ಗೊತ್ತೇ ಇಲ್ಲ. ವಿಜಯ್​ ಕೀರ್ತಿ ಗೌಡಳನ್ನ ಮದುವೆಯೇ ಆಗಿಲ್ಲ.” ಎಂದು ಆರೋಪಮಾಡಿದ್ದಾರೆ.

ನನ್ನ ಮಕ್ಕಳಿಗೊಸ್ಕರ ನಾನು ಎಲ್ಲವನ್ನು ಸಹಿಸಿಕೊಂಡು ಇಷ್ಟು ದಿನ ನಾನು ಮೌನವಾಗಿದ್ದೆ. ನನ್ನ ಮಕ್ಕಳ ಭವಿಷ್ಯ ನನಗೆ ಮುಖ್ಯ. ನಮ್ಮ ಸಂಸಾರದ ವಿಷಯ ಬೀದಿಗೆ ಬರಲು ಕೀರ್ತಿಗೌಡ ಕಾರಣ. ನಾನು ವಿಜಿಗೆ ವಿಚ್ಛೇದನ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ವಿಚ್ಛೇದನ ನೀಡಿರುವ ಕುರಿತು ಅವಳು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಬಾಡಿಗೆ ಮಗು, ನಕಲಿ ತಾಳಿ ಹಾಕಿಕೊಂಡು ಬಂದ ಮಾತ್ರಕ್ಕೆ ಹೆಂಡತಿಯಾಗುವುದಿಲ್ಲ. ಕೀರ್ತಿ ಸಂಸಾರಸ್ಥ ಮನೆಯಿಂದ ಬಂದವಳಾದರೆ ನನ್ನೆದುರು ಬಂದು ನಿಲ್ಲಲಿ.” ಎಂದು ಕೀರ್ತಿ ಗೌಡ ವಿರುದ್ಧ ನಾಗರತ್ನ ಕಿಡಿಕಾರಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top