ಮನೋರಂಜನೆ

“ರಕ್ತಕಣ್ಣೀರು ಸಿನಿಮಾ ನೋಡಿ ಬುದ್ಧಿಬರುತ್ತೆ”ಅಂತ ಕರಿಚಿರತೆ ವಿಜಿಗೆ ಮಾತಿನ ಛಾಟಿ ಬೀಸಿದ ನಾಗರತ್ನ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಕಳೆದು ಒಂದು ವಾರದಿಂದ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದ ದುನಿಯಾ ವಿಜಯ್​ಗೆ ಜೈಲಿನಿಂದ ಜಾಮೀನಿನ ಮೇಲೆ ನೆನ್ನೆ ಸಂಜೆ ಹೊರಬಂದಿದ್ದಾರೆ.. ಅವರು ಹೊರಬರುತ್ತಿದ್ದಂತೆ ಮೊದಲ ಪತ್ನಿ ನಾಗರತ್ನ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಿ ಕೀರ್ತಿಗೌಡನೇ ನನ್ನ ಹೆಂಡತಿ ಮತ್ಯಾರು ಅಲ್ಲ ಎಂದು​ ತಿಳಿಸಿದ್ದರು. ಆದರೆ, ದುನಿಯಾ ವಿಜಿಗೆ ಐದು ಮದುವೆಯಾಗಿದೆ ಕೀರ್ತಿ ಗೌಡ ಐದನೆಯವಳು ಎಂಬ ಹೊಸ ಸತ್ಯವನ್ನು ನಾಗರತ್ನ ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದುನಿಯಾ ವಿಜಿ ಅವರ ಮೊದಲ ಪತ್ನಿ ನಾಗರತ್ನ ಅವರು” ವಿಜಿಗೆ ಉಪೇಂದ್ರ ಅವರ ರಕ್ತ ಕಣ್ಣೀರು ಸಿನಿಮಾ ನೋಡೋಕೆ ಹೇಳಿ. ಯಾರ ಜೀವನ ಹಾಳಾಗುತ್ತದೆ ಎಂದು ತಿಳಿಯುತ್ತದೆ ಎಂದಿದ್ದಾರೆ. ಅವರ ಬಳಿ ಸಿನಿಮಾ ಇಲ್ಲದಿದ್ದರೇ ಕೇಳಿ, ನಾನೇ ಸಿಡಿ ತಂದು ಕೊಡುತ್ತೇನೆ” ಎಂದು ಗರಂ ಆದ್ರೂ ನಾಗರತ್ನ.

 

 

 

“ಕೀರ್ತಿಗೆ ದುನಿಯಾ ವಿಜಯ್ ಅವರೇ ಮೊದಲ ಸಂಭಂದವಲ್ಲ, ಆಕೆ ಮೊದಲು ಸ್ಲಮ್ ನಲ್ಲಿದ್ದಳು. ಅಲ್ಲಿಯೇ ಅವಳಿಗೆ ಮೂರ್ನಾಲ್ಕು ಜನ ಬಾಯ್ ಫ್ರೆಂಡ್ಸ್ ಇದ್ದರು.ಇದನ್ನೆಲ್ಲಾ ಆಕೆಯ ತಾಯಿಯೇ ನನ್ನ ಬಳಿ ಹೇಳಿದ್ದಾರೆ. ವಿಜಯ್ ಅವರ ಹೆಸರು ಮತ್ತು ದುಡ್ಡು ನೋಡಿ ಬಂದಿದ್ದಾಳೆ. ಅವಳ ಜೊತೆ ವಿಜಯ್​ ಮದುವೆಯಾಗಿರುವುದು ನನಗೆ ಗೊತ್ತೇ ಇಲ್ಲ. ವಿಜಯ್​ ಕೀರ್ತಿ ಗೌಡಳನ್ನ ಮದುವೆಯೇ ಆಗಿಲ್ಲ.” ಎಂದು ಆರೋಪಮಾಡಿದ್ದಾರೆ.
,ಮುಂದೆ ಮಾತನಾಡುತ್ತಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ತಮಗೆ ಅನ್ಯಾಯವಾಗಿದೆ. ಈ ಬಗ್ಗೆ ನಾನೇ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ವಿಜಯ್​ ವರ್ಷಕೊಬ್ಬ ಹುಡುಗಿ ಕರೆದುಕೊಂಡು ಬರುತ್ತಿದ್ದರು. ಆದರೆ, ಆಗ ನಾನು ಸುಮ್ಮನಿದ್ದೆ. ಬರ್ತಾಯಿದ್ರು, ಹೋಗ್ತಾ ಇದ್ರು. ಇದರ ಬಗ್ಗೆ ಸಾಕಷ್ಟು ಬಾರಿ ನನ್ನ, ವಿಜಯ್​ ಮಧ್ಯೆ ಜಗಳ ಆಗಿದ್ದೂ ಉಂಟು. ಆದರೆ ಈ ಕೀರ್ತಿಗೌಡ ಬಂದು ನನ್ನ ಮತ್ತು ನನ್ನ ಮಕ್ಕಳನ್ನು ಬೀದಿ ಪಾಲು ಮಾಡಿದ್ದಾಳೆ.

” ದುನಿಯಾ ವಿಜಯ್​ಗೆ ಈ ರೀತಿಯ ಸಂಬಂಧಗಳು ಹೊಸದಲ್ಲ. ನನ್ನ ಮದುವೆಗೆ ಮುಂಚೆಯೇ ಅವರಿಗೆ ಇನ್ನೊಂದು ಮದುವೆಯಾಗಿತ್ತು, ಆ ವಿಷ್ಯ ನನಗೆ ಗೊತ್ತಿರಲಿಲ್ಲ.. ಮನೆಗೆ ಯಾವ ಹುಡುಗಿಯನ್ನೇ ಕರೆದುಕೊಂಡು ಬಂದರೂ ನನ್ನ ಅತ್ತೆ-ಮಾವ ಮಗನಿಗೆ ಬುದ್ಧಿ ಹೇಳದೆ ಅವರ ಪರವೇ ವಹಿಸಿಕೊಂಡು ಮಾತನಾಡುತ್ತಿದ್ದರು. ‘ಜಯಮ್ಮನ ಮಗ’ ಚಿತ್ರದ ನಟಿ ಭಾರತಿ ಕಾರಣದಿಂದಲೇ ನಾನು ದೂರವಾಗಿದ್ದು. ಶುಭ ಪೂಂಜಾ ಕೂಡ ಸ್ವಲ್ಪ ದಿನ ವಿಜಯ್ ಜೊತೆ ಓಡಾಡಿದ್ದರು. ಹಾಗೆಯೆ ಕೀರ್ತಿ ಕೂಡ ಸ್ವಲ್ಪ ದಿನ ಇದ್ದು ಹೋಗ್ತಾಳೆ”

 

“ಫೈಟ್​ ಮಾಡುವುದಾದರೆ ಹೆಂಡತಿ ಜತೆ ಮಾಡಲಿ, ಅದನ್ನು ಬಿಟ್ಟು ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎಂದು ಹೇಳಿ ಅನುಕಂಪ ಗಿಟ್ಟಿಸುವುದು ಸರಿಯಲ್ಲ. ನಾನು ಯಾವುದೇ ಕಾರಣಕ್ಕೂ ಅವರಿಗೆ ವಿಚ್ಛೇದನ ನೀಡುವುದಿಲ್ಲ. ನಾನು ಅವರೊಂದಿಗೆ ಜೀವನ ಮಾಡಲು ಬಂದವಳು. ಕೀರ್ತಿ ದುಡ್ಡಿಗೆ ಬಂದು ಸಂಸಾರ ಮಾಡುತ್ತಿದ್ದಾಳೆ ಎಂಬುದು ಪ್ರಪಂಚಕ್ಕೆ ಗೊತ್ತಿದೆ. ಈ ಬಗ್ಗೆ ವಿಜಯ್​ಗೆ ತಿಳಿಯಬೇಕಿದೆ ಅಷ್ಟೇ.ನನ್ನ ಮಕ್ಕಳು, ಕುಟುಂಬವನ್ನು ಬೀದಿಪಾಲು ಮಾಡಲೆಂದೇ ಕೀರ್ತಿ ಆಗಮಿಸಿದ್ದು, ವಿಜಯ್ ವರ್ಷಕ್ಕೆ ಒಬ್ಬರಂತೆ ಕರೆದುಕೊಂಡು ಬರುತ್ತಿದ್ದರು. ಈಕೆಯೂ ಹಾಗೇ ಎಂದುಕೊಂಡಿದ್ದೆ. ಆದರೆ ಮಾಧ್ಯಮಗಳಲ್ಲಿ 2ನೇ ಹೆಂಡತಿ ಎಂದು ಹೇಳುತ್ತಿದ್ದರೆ ಸುಮ್ಮನೆ ಇರುವುದು ಹೇಗೆ? ವಿಜಯ್ ಅವರಿಗೆ ಈ ಕುರಿತು ಸಾಕಷ್ಟು ಬಾರಿ ಹೇಳಿದರೂ ಅವರು ಮಾತು ಕೇಳಲಿಲ್ಲ. ಕೀರ್ತಿ ಕುರಿತು ಎಲ್ಲಾ ದಾಖಲೆ ಇದ್ದು, ಅವುಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ನನ್ನ ಮಕ್ಕಳಿಗೆ ಅಪ್ಪ-ಅಮ್ಮ ಇಬ್ಬರು ಬೇಕು. ನಾನು ನನ್ನ ಮಕ್ಕಳು ಬೀದಿಗೆ ಬರೋ ಪರಿಸ್ಥಿತಿಯಲ್ಲಿದ್ದೇವೆ. ನಾನು ಆಸ್ತಿಗೆ ಬಂದವಳಲ್ಲ, ನನಗೆ ವಿಜಯ್ ಬೇಕಷ್ಟೇ ಎಂದರು”.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top