ಮನೋರಂಜನೆ

ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಅಭಿಮಾನಿಗಳಿಗೆ ಪೊಗರು ಟೀಂನಿಂದ ಗುಡ್ ನ್ಯೂಸ್.

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ..

ಚಿತ್ರರಂಗಕ್ಕೆ ಕಾಲಿಟ್ಟು ಆರು ವರ್ಷಗಳೇ ಕಳೆದಿದ್ದರೂ ಅವರು ಮಾಡಿರುವುದು ಮಾತ್ರ ಮೂರೇ ಸಿನಿಮಾ, ಅಭಿಮಾನಿಗಳನ್ನು ತುಂಬಾ ಕಾಯಿಸುತ್ತಾರೆ, ಬೇಗ ಬೇಗ ಸಿನಿಮಾ ಕಂಪ್ಲೀಟ್ ಮಾಡೋದಿಲ್ಲ ಎಂಬ ಕಂಪ್ಲೇಂಟುಗಳು ಧ್ರುವ ಮೇಲೆ ಸದಾ ಕೇಳಿಬರುತ್ತಿರುತ್ತವೆ.. ಸಿನಿಮಾ ಆರಂಭಿಸಿ ಒಂದೆರಡು ವರ್ಷಗಳ ಕಾಲ ಎಳೆದಾಡಿ ಅಭಿಮಾನಿಗಳನ್ನು ವರ್ಷಾನುಗಟ್ಟಲೆ ಕಾಯಿಸುತ್ತಾರೆ ಎಂಬುದು ದ್ರುವ ಮೇಲಿರುವ ಗಂಭೀರ ಆರೋಪ. ಅದು ಪೊಗರು ಚಿತ್ರದಲ್ಲೂ ಮುಂದುವರೆಯುತ್ತಿದೆ.. ಚಿತ್ರ ಸೆಟ್ಟೇರಿ ವರ್ಷವೇ ಕಳೆದಿದ್ದರೂ ಇನ್ನೂ ಕಾಲು ಭಾಗದ ಚಿತ್ರೀಕರಣ ಕೂಡ ಕಂಪ್ಲೀಟ್ ಆಗಿಲ್ಲ..

 

 

ದೃವ ಸರ್ಜಾ ಇದೀಗ ಎಚ್ಚೆತ್ತುಕೊಂಡಂತಿದ್ದು ಪೊಗರು ಚಿತ್ರವನ್ನು ಮುಗಿಸುವತ್ತ ಗಮನಹರಿಸಿದ್ದಾರೆ. ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡಿರುವ ಪೊಗರು ಚಿತ್ರತಂಡ ಅಕ್ಟೋಬರ್​​​ 15 ರಿಂದ ಮುಂದಿನ ಶೆಡ್ಯೂಲ್ ಸ್ಟಾರ್ಟ್ ಮಾಡಲಿದೆ. ಅದಕ್ಕಾಗಿ ದ್ರುವ ಸರ್ಜಾ ಮತ್ತೆ ತಮ್ಮ ದೇಹವನ್ನು ದಂಡಿಸಿ ಮೈಕಟ್ಟನ್ನು ವೃದ್ಧಿಸಿಕೊಳ್ಳಲಿದ್ದಾರೆ. ಒಂದು ಹಂತದ ಚಿತ್ರೀಕರಣ ಮುಗಿದಿದ್ದರೂ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿಲ್ಲ ಹಾಗಾಗಿ ಎರಡನೇ ಹಂತದ ಚಿತ್ರೀಕರಣವನ್ನು ಆರಂಭಿಸುವುದಕ್ಕೂ ಮುನ್ನವೇ ನಾಯಕಿಯನ್ನು ಅಂತಿಮಗೊಳಿಸಬೇಕಾಗಿದೆ. ಮೂಲಗಳ ಪ್ರಕಾರ ಚಿತ್ರದಲ್ಲಿ ದ್ರುವ ಸರ್ಜಾಗೆ ಇಬ್ಬರು ನಾಯಕಿಯರು ಇರಲಿದ್ದಾರಂತೆ.

ಯಾವಾಗಲೂ ಕುರುಚಲು ಗಡ್ಡದಲ್ಲೇ ಕಾಣಿಸುತ್ತಿದ್ದ ಧ್ರುವಾ ಇದೀಗ ಮಣಗಟ್ಟಲೆ ದಾಡಿ ಬಿಟ್ಟು ಫುಲ್ ರಗಡ್ ಲುಕ್‌ನಲ್ಲಿ ಕಾಣಸಿಕೊಂಡಿದ್ದಾರೆ. ಫೋಟೋದಲ್ಲಿ ಸರ್ಜಾರ ಮುಖವನ್ನ ಜೇಡರ ಬಲೆ ಅಡ್ಡಗಟ್ಟಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಪೊಗರು ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ತಿರೋ ಧ್ರುವ ಸರ್ಜಾ ಸ್ಕೂಲ್‌ ಹುಡ್ಗನ ಪಾತ್ರ ಹಾಗೂ ರಗಡ್ ಶೇಡ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಪೊಗರು ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಮತ್ತು ಕಿಸ್ ಖ್ಯಾತಿಯ ಶ್ರೀ ಲೀಲಾ ನಾಯಕಿಯರಾಗಿ ಆಯ್ಕೆಯಾಗುವ ಸಾಧ್ಯತೆಗಳಿದ್ದು ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. ಚಿತ್ರಕ್ಕೆ ಬಿ.ಕೆ.ಗಂಗಾಧರ್ ಎಂಬುವವರು ಬಂಡವಾಳ ಹೊಂದುತ್ತಿದ್ದು ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿದ್ಯಾ.S ಅವರು ಛಾಯಾಗ್ರಹಣವನ್ನು ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top