ಮನೋರಂಜನೆ

ರಾಧಿಕಾ ಪಂಡಿತ್ ಹೊಸ ಆಸೆ ಏನ್ ಅಂತೇ ಗೊತ್ತಾ , ಕನ್ನಡದ ರಾಜಾಹುಲಿ ಆ ಆಸೆಯನ್ನು ಹೊರಹಾಕಿದ್ದು ಹೀಗೆ

ತೆರೆ ಮೇಲಿರಲಿ ಅಥವಾ ತೆರೆ ಹಿಂದಿರಲಿ ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ ಮೀಸಲಿದೆ.. ಸರಿಸುಮಾರು ಎರಡು ವರ್ಷದ ಹಿಂದೆ ಇಬ್ಬರೂ ಸಾಂಸಾರಿಕ ಜೀವನಕ್ಕೆ ಧುಮುಕಿದ್ದಾರಲ್ಲಾ, ಆಗಿನಿಂದಲೂ ಇವರಿಬ್ಬರಿಗೂ ಅಭಿಮಾನಿಗಳಿಂದ ಹಿಡಿದು ಆಪ್ತರು ಕೇಳುತ್ತಿದ್ದುದು ಒಂದೇ ಪ್ರಶ್ನೆ ”ಮಗು ಯಾವಾಗ?”.ಪ್ರತಿ ಸಲ ಈ ಪ್ರಶ್ನೆಗೆ ಕೆಳಿದಾಗಲೆಲ್ಲ ನಗುತ್ತಲೇ ‘ಸದ್ಯದಲ್ಲೇ’ ಎಂದು ಉತ್ತರಿಸುತ್ತಿದ್ದ ಯಶ್ ಜೋಡಿ ಕೊನೆಗೂ ಸಿಹಿ ಸುದ್ದಿ ನೀಡಿ ತಿಂಗಳುಗಳೇ ಕಳೆದಿದೆ.

ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಟ್ಟಿಕೊಂಡ ನಂತರ ಚಿತ್ರರಂಗದಿಂದ ಆದಷ್ಟು ದೂರವೇ ಉಳಿದುಕೊಂಡು, ಬಹುತೇಕ ತೆರೆಮರೆಗೆ ಸರಿದಿರುವ ಪ್ರತಿಭಾನ್ವಿತೆ ರಾಧಿಕಾ ಪಂಡಿತ್. ಮದುವೆಯಾದ ನಂತರ ಸಂಸಾರದ ತಾಪತ್ರಗಳಲ್ಲಿ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ನಟನೆಗೆ ಗುಡ್‌ಬೈ ಹೇಳುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿತ್ತು ಆದರೆ ಯಾವಾಗ ಅವರು ನಿರೂಪ್ ಭಂಡಾರಿ ಚಿತ್ರದಲ್ಲಿ ಭಾಗಿಯಾದರೋ ಆಗ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.. ಸದ್ಯ ಗರ್ಭಿಣಿಯಾಗಿರುವ ರಾಧಿಕಾ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರಂತೆ ಬರೀ ಡಬ್ಬಿಂಗ್ ಮಾತ್ರ ಬಾಕಿ ಇತ್ತು ,ಮೊನ್ನೆ ಎಷ್ಟೇ ತಾನು ಗರ್ಭಿಣಿಯಾದರು ಅವರ ಭಾಗದ ಡಬ್ಬಿಂಗ್ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ ರಾಧಿಕಾ.

 

ಗರ್ಭಿಣಿ ಯಾಗಿರುವ ರಾಧಿಕಾ ಪಂಡಿತ್ ಈಗ ಹ್ಯಾಪಿಯಾಗಿದ್ದಾರೆ ಈಗ ಅವರು ಒಬ್ಬರಲ್ಲ, ಬದಲಿಗೆ ಇಬ್ಬರಾಗಿದ್ದಾರೆ. ಫಿಟ್​ ಅಂಡ್​ ಹೆಲ್ದಿಯಾಗಿರುವ ರಾಧಿಕಾ ಸಿಕ್ಕಾಪಟ್ಟೆ ಖುಷಿಯಲ್ಲಿ ಮುಳುಗಿ ತೇಲುತ್ತಿದ್ದಾರೆ,ಚಿತ್ರರಂಗದಿಂದ ಮದುವೆಯಾದ ಮೇಲೆ ದೂರ ಉಳಿದರು ಸಾಮಾಜಿಕ ಜಾಲತಾಣ ದಲ್ಲಿ ಪೋಸ್ಟ್ ಹಾಕುವುದರ ಮೂಲಕ ಅವರ ಅಭಿಮಾನಿಗಳಿಗೆ ಹತ್ತಿರ ಇದ್ದಾರೆ ,ಅವರು ಮಾಡುವ ಒಂದೊಂದು ಪೋಸ್ಟ್ ಫುಲ್ ವೈರಲ್ ಆಗುತ್ತೆ .ಈಗ ತಮ್ಮ ಹೊಸ ಆಸೆಯನ್ನು ಹೊರಹಾಕಿದ್ದಾರೆ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ,ರಾಧಿಕಾ ಈಗ ಗರ್ಭಿಣಿ ಅಂತ ಎಲ್ಲರಿಗೂ ಗೊತ್ತಿರುವ ವಿಷಯ ಇಂತಹ ಟೈಮ್ ನಲ್ಲಿ ಹಲವಾರು ಆಸೆಗಳಿರುತ್ತದೆ ,ಆದ್ರೆ ರಾಧಿಕಾ ಹೊಸ ಆಸೆ ಏನ್ ಅಂತೇ ಗೊತ್ತಾ ರಾಂಕಿಂಗ್ ಸ್ಟಾರ್ ಯಶ್‍ನೊಂದಿಗೆ ಒಂದು ಸಿನಿಮಾವನ್ನು ಮಾಡಬೇಕು ಎಂಬುದು ಅವರ ಹೊಸ ಆಸೆ ,ರಾಧಿಕಾ ಪತಿ ಯಶ್ ಜೊತೆಗೆ ಪುರಾಣ ಆಧಾರಿತ ಸಿನಿಮಾವನ್ನು ಮಾಡಬೇಕು ಎಂಬ ಕನಸು ಇದೆ ಎಂದು ಹೇಳಿಕೊಂಡಿದ್ದಾರೆ.

 

 

 

ಖಾಸಗಿ ವಾಹಿನಿಗೆ ಕೊಟ್ಟ ಒಂದು ಸಂದರ್ಶನದಲ್ಲಿ ಯಶ್ ಪತ್ನಿಯ ಆಸೆಯ ಬಗ್ಗೆ ಹೇಳಿದ್ದಾರೆ ,”ಮದುವೆಗೂ ಮೊದಲು ನಾವು ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಈ ವೇಳೆ ನಾವು ಇಂತಹದೊಂದು ಸಿನಿಮಾ ಮಾಡಬೇಕು ಅಂತ ಅಂದುಕೊಂಡು ಯಾವುದು ಮಾಡಿರಲಿಲ್ಲ. 10 ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದೇವೆ. ಅದರಲ್ಲಿ ನನಗೆ ಇಷ್ಟವಾದ ಕಥೆಗಳು ರಾಧಿಕಾಗೆ ಇಷ್ಟವಾಗುತ್ತಿರಲಿಲ್ಲ. ರಾಧಿಕಾಗೆ ಇಷ್ಟವಾದರೇ ನನಗೆ ಇಷ್ಟವಾಗುತ್ತಿರಲಿಲ್ಲ. ಮದುವೆಯಾದ ನಂತರ ಒಂದು ಸಿನಿಮಾಗಳನ್ನು ಮಾಡಿಲ್ಲ. ಹೀಗಾಗಿ ಇಬ್ಬರೂ ಸೇರಿ ಒಂದು ಪುರಾಣ ಆಧಾರಿತ ಸಿನಿಮಾವನ್ನು ಮಾಡಬೇಕು ರಾಧಿಕಾ ಹೇಳಿದ್ದಾಳೆ ಎಂದು ತಿಳಿಸಿದರು”ನಂತರ “ಈ ರೀತಿಯ ಸಿನಿಮಾವನ್ನು ನಾವಿಬ್ಬರೂ ಎಂದಿಗೂ ಮಾಡಿಲ್ಲ. ಅಷ್ಟೇ ಅಲ್ಲದೇ ಅಭಿಮಾನಿಗಳು ಮದುವೆಯ ನಂತರ ನಮ್ಮಿಬ್ಬರ ಜೋಡಿಯ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಯಾರಾದರೂ ನಿರ್ದೇಶಕರು ಕಥೆಯೊಂದಿಗೆ ಬಂದರೆ ಖಂಡಿತ ಸಿನಿಮಾವನ್ನು ಮಾಡುತ್ತೇವೆ ಎಂದು ಯಶ್ ಹೇಳಿದ್ದಾರೆ.ರಾಧಿಕಾ ಪಂಡಿತ್ ಈ ಹಿಂದೆ ಹಲವಾರು ಸಂದರ್ಶನದಲ್ಲಿ ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು”ಮತ್ತೆ ಈ ರಾಮಾಚಾರಿ ಜೋಡಿ ಒಟ್ಟಿಗೆ ನಟಿಸುವುದನ್ನೇ ಕಾಯುತ್ತಿರುವ ಎಷ್ಟೋ ಅಭಿಮಾನಿಗಳಗೆ ಇಂದು ಒಂದು ಸಿಹಿ ಸುದ್ದಿ.ಆದಷ್ಟು ಬೇಗ ಅವರ ಆಸೆಯಂತೆ ಈ ಜೋಡಿಗಳು ಮತ್ತೆ ತೆರೆ ಮೇಲೆ ಬಂದು ಅಭಿಮಾನಿಗಳನ್ನು ಮನರಂಜಿಸಲಿ ಎಂದು ನಾವು ಆಶಿಸೋಣ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top