ಮನೋರಂಜನೆ

ಗೆಳತಿಯರಿಂದ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾಗೆ ಸಿಕ್ತು ಬಿಗ್ ಸರ್ಪ್ರೈಸ್,ಫೋಟೋ ಒಳಗಿದೆ

ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಟ್ಟಿಕೊಂಡ ನಂತರ ಚಿತ್ರರಂಗದಿಂದ ಆದಷ್ಟು ದೂರವೇ ಉಳಿದುಕೊಂಡು, ಬಹುತೇಕ ತೆರೆಮರೆಗೆ ಸರಿದಿರುವ ಪ್ರತಿಭಾನ್ವಿತೆ ರಾಧಿಕಾ ಪಂಡಿತ್. ಮದುವೆಯಾದ ನಂತರ ಸಂಸಾರದ ತಾಪತ್ರಗಳಲ್ಲಿ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ನಟನೆಗೆ ಗುಡ್‌ಬೈ ಹೇಳುತ್ತಾರಾ ಅಂತೊಂದು ಆತಂಕ ಅಭಿಮಾನಿಗಳಲ್ಲಿತ್ತು ಆದರೆ ಯಾವಾಗ ಅವರು ನಿರೂಪ್ ಭಂಡಾರಿ ಚಿತ್ರದಲ್ಲಿ ಭಾಗಿಯಾದರೋ ಆಗ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.. ಸದ್ಯ ಗರ್ಭಿಣಿಯಾಗಿರುವ ರಾಧಿಕಾ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರಂತೆ ಬರೀ ಡಬ್ಬಿಂಗ್ ಮಾತ್ರ ಬಾಕಿ ಇತ್ತು ,ಮೊನ್ನೆ ಎಷ್ಟೇ ತಾನು ಗರ್ಭಿಣಿಯಾದರು ಅವರ ಭಾಗದ ಡಬ್ಬಿಂಗ್ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ ರಾಧಿಕಾ.

 

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ರಾಧಿಕಾ ಅನೇಕ ಕುತೂಹಲಕಾರಿ ವಿಷಯಗಳನ್ನು ಹೆಕ್ಕಿತಂದು ಅಭಿಮಾನಿಗಳ ಮುಂದೆ ದಾಖಲಿಸುತ್ತಾ ಬಂದಿದ್ದಾರೆ ಈ ಸಲ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಸುದ್ದಿಯಲ್ಲಿ ಇರುವುದು ಈ ಕಾರಣಕ್ಕೆ ,ಅವರ ಫೋಟೋ ಹಾಗೂ ಪೋಸ್ಟ್ ಗಳಿಗೆ ಎಷ್ಟೋ ಜನ ಅಭಿಮಾನಿಗಳು ಕಾದು ಕುಳಿತಿರುತ್ತಾರೆ,ಈ ವಿಷ್ಯಕ್ಕೆ ಫುಲ್ ಸುದ್ದಿಯಲ್ಲಿ ಇದ್ದಾರೆ ರಾಧಿಕಾ ,ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಈಗ ಗರ್ಭಿಣಿ ,ಗರ್ಭಿಣಿ ಅಂದ್ಮೇಲೆ ಬಯಕೆಗಳು ಕಾಮನ್ ,ರಾಧಿಕಾ ಗೆಳತಿಯರಾದ ಪ್ರತಿಭಾ ಸುರೇಶ್, ಸಾನಿಯಾ ಸರ್ದರಿಯಾ ಮತ್ತು ವನಿತಾ ಉಮೇಶ್ ಮೂವರು ರಾಧಿಕಾಗೆ ಸರ್ಪ್ರೈಸ್ ನೀಡಿದ್ದಾರೆ.ಅದು ಏನು ಅಂತೀರಾ?

ಗರ್ಭಿಣಿ ರಾಧಿಕೆಯ ಬಯಕೆಯನ್ನ ಅರಿತ ಗೆಳತಿಯರು ವಿವಿಧ ಭಕ್ಷ್ಯ, ಭೋಜನ ಸಿದ್ಧಪಡಿಸಿ ರಾಧಿಕಾ ಮುಂದೆ ಇಟ್ಟಿದ್ದಾರೆ ,ಇದನ್ನು ಕಂಡು ಫುಲ್ ಸರ್ಪ್ರೈಸ್ ಆದ ರಾಧಿಕಾ ಆ ವಿವಿಧ ಭಕ್ಷ್ಯ ಹಾಗೂ ಆಕೆಯ ಫ್ರೆಂಡ್ಸ್ ಜೊತೆ ಫೋಟೋ ತೆಗೆಸಿಕೊಂಡು ಅವರ ಇನ್ಸ್ಟ್ಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ .ಆ ಫೋಟೋದಲ್ಲಿ ಮೂವರು ಗೆಳತಿಯರೊಂದಿಗೆ ರಾಧಿಕಾರ ತಾಯಿ ಮತ್ತು ಬಗೆಗೆ ತಿಂಡಿ, ಸಿಹಿ ಪದಾರ್ಥಗಳನ್ನು ಕಾಣಬಹುದಾಗಿದೆ. ನನ್ನ ಆಪ್ತ ಗೆಳತಿಯರು ನನಗಾಗಿ ಪ್ರೀತಿಯಿಂದ ಮಾಡಿಕೊಂಡ ಬಂದ ಅಡುಗೆ ಎಂಬ ಸಾಲುಗಳನ್ನು ಬರೆದು, ಮೂವರಿಗೂ ಟ್ಯಾಗ್ ಮಾಡಿದ್ದಾರೆ.

 

 

 

ರಾಧಿಕಾ ಈ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಲೈಕ್ ಹಾಗೂ ಕಾಮೆಂಟ್ ಗಳ ಸುರಿಮಳೆಯೇ ಸುರಿಯಿತು ಹೀಗೆ ಖುಷಿ ಖುಷಿಯಾಗಿ ಒಂದು ಮುದ್ದು ಮಗುವನ್ನು ಕರ್ನಾಟಕ್ಕೆ ನೀಡಲ್ಲಿ ಎಂದು ನಾವು ಆಶಿಸೋಣ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top