ಮನೋರಂಜನೆ

ಈ ಚಿತ್ರ ನೋಡಿ ಫಿದಾ ಆದ ರಶ್ಮಿಕಾ ,ಈ ಚಿತ್ರ ಬಿಡಿಸೋಕೆ ಕಲಾವಿದೆ ತೆಗೆದುಕೊಂಡ ಟೈಮ್ ಎಷ್ಟು ಗೊತ್ತಾ,ಚಿತ್ರ ಒಳಗಿದೆ

ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಸಿನಿಮಾ ಮೂಲಕವೇ ನೇಮು ಫೇಮು ಗಳಿಸಿಕೊಂಡು ಆನಂತರ ‘ಅಪ್ಪಟ ತೆಲುಗು’ ಹುಡುಗಿಯಂತೆ ಮಿಂಚುತ್ತಿರುವಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಕಿರಿಕ್ ಹುಡುಗಿ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾಳೆ.ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ,ಗೀತಾ ಗೋವಿಂದಂ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಜೊತೆಗಿನ ಕಾಂಬಿನೇಷನ್’ಗೆ ತೆಲುಗು ಮಂದಿ ಫಿದಾ ಆಗಿದ್ದಾರೆ

ಈಗ ಸ್ಯಾಂಡಲ್‍ವುಡ್ ಮತ್ತು ಟಾಲಿವುಡ್ ನ ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಫ್ಯಾನ್ ಫಾಲೋಯಿಂಗ್ ದಿನೇ ದಿನೇ ಗಗನ ಮುಟ್ಟುತ್ತಿದೆ,ಸಾಕಷ್ಟು ಅಭಿಮಾನಿಗಳ ಬಳಗವನ್ನೇ ಹೊಂದಿರುವ ರಶ್ಮಿಕಾಗೆ ಹುಡುಗರು ಮಾತ್ರವಲ್ಲಾ ಹುಡುಗಿಯರು ಕೂಡ ರಶ್ಮಿಕಾಗೆ ಫುಲ್ ಫಿದಾ ಆಗಿದ್ದಾರೆ ,ಈ ನಡುವೆಯ ರಶ್ಮಿಕಾಳ ಫ್ಯಾಷನೆಬಲ್ ಲುಕ್​, ಸ್ಟೈಲ್​ಗೆ, ಸ್ಮೈಲ್​ಗೆ ಬಿದ್ದವರ ಸಂಖ್ಯೆ ಏನು ಕಮ್ಮಿ ಇಲ್ಲ.

ಈಗ ಸುದ್ದಿಯಲ್ಲಿ ಇರುವ ವಿಷಯ ಏನು ಅಂದ್ರೆ ರಶ್ಮಿಕಾ ರವರ ಹುಡುಗಿ ಫ್ಯಾನ್ ಒಬ್ಬರು ರಶ್ಮಿಕಾರ ಚಿತ್ರವನ್ನು ಸ್ಕೆಚ್​ ಮಾಡಿ ಟ್ವೀಟ್​ ಮಾಡಿದ್ದಾರೆ,ಈ ಚಿತ್ರ ಬಿಡಿಸಲು ಆ ಹುಡುಗಿ ತೆಗೆದುಕೊಂಡಿರುವ ಸಮಯ ಬರೋಬ್ಬರಿ 15 ಗಂಟೆ ಸ್ವಾತಿ ಮೋಹನ್​ ಎಂಬ ಕಲಾವಿದೆ ಈ ಚಿತ್ರವನ್ನು ಬಿಡಿಸಿದ್ದು, ರಶ್ಮಿಕಾ ಮೇಲಿನ ಪ್ರೀತಿ, ಅಭಿಮಾನಕ್ಕೆ ನಾನು ಈ ಡ್ರಾಯಿಂಗ್ ಮಾಡಿದ್ದೇನೆ ಎಂದಿದ್ದಾರೆ.ಆದ್ರೂ ಆ ಹುಡುಗಿನ ಈ ಅಭಿಮಾನವನ್ನು ಎಂತವರೇ ಆದರೂ ಮೆಚ್ಚಲೇ ಬೇಕು , ಇನ್ನು ರಶ್ಮಿಕಾ ಆಕೆಯ ಅಭಿಮಾನಿ ಬಿಡಿಸಿದ ತನ್ನ ಸ್ಕೆಚ್​ ನೋಡಿ ಫಿದಾ ಆಗಿದ್ದಾರೆ. ಕ್ಯೂಟ್​ ಎಂದು ರಿಪ್ಲೇ ಮಾಡಿದ್ದಷ್ಟೇ ಅಲ್ಲಾ, ಹಾರ್ಟ್​ ಸಿಂಬಲ್​ ಕೂಡ ಹಾಕಿದ್ದಾರೆ.

 

 

 

ಸದ್ಯಕ್ಕೆ ಕನ್ನಡದ ದರ್ಶನ್ ಅಭಿನಯದ `ಯಜಮಾನ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಇನ್ನೂ ಸಾಕಷ್ಟು ಸಿನಿಮಾಗಳಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top