ದೇವರು

ಈ ಸಮಯದಲ್ಲಿ ಶಿವನ ಬಳಿ ನಿಮ್ಮ ಇಷ್ಟಾರ್ಥಗಳನ್ನೂ ಹೇಳಿಕೊಂಡರೆ ಖಂಡಿತಾ ನೆರವೇರುತ್ತಂತೆ

ಶಿವನು ಈ ಜಗತ್ತಿಗೆ ತಂದೆ.ನಮ್ಮೆಲ್ಲರ ರಕ್ಷಕ.ಸೃಷ್ಟಿ, ಸ್ಥಿತಿ,ಲಯ ಕಾರಕನಾದ ಶಿವನು ಅಭಿಷೇಕ ಪ್ರಿಯ.ಶಿವನಿಗೆ ಪೂಜೆ ಮಾಡಲು ಸೋಮವಾರ ಶ್ರೇಷ್ಠ ದಿನ ಮತ್ತು ಪ್ರಿಯನಿಗೆ ಇಷ್ಟವಾದ ದಿನವಿದು.ಈ ದಿನ ಅಷ್ಟೇ ಅಲ್ಲದೆ ಪ್ರತಿನಿತ್ಯ ಶಿವನಿಗೆ ಮುಖ್ಯವಾಗಿ ಈ ಮೂರು ವೇಳೆಯಲ್ಲಿ ಪೂಜೆ ಮಾಡುವುದರಿಂದ ನಿಮ್ಮ ಮನೋ ಕಾಮನೆಗಳನ್ನು,ಇಷ್ಟಾರ್ಥಗಳನ್ನು ಬೇಗನೆ ಈಡೇರಿಸುತ್ತಾನೆ.ನಾವು ಏನನ್ನಾದರೂ ಕೇಳಿಕೊಂಡರೆ, ಇದನ್ನು ಪೂರೈಸುವವನು ಆ ಪರಮಾತ್ಮ. ಶಿವ ಕೋರಿಕೆಗಳನ್ನು ತಕ್ಷಣವೇ ಈಡೇರಿಸುವವನು. ದಿನದಲ್ಲಿ ಮೂರು ಸಮಯದಲ್ಲಿ ಏನನ್ನಾದರು ಕೇಳಿಕೊಂಡರೆ, ಅತಿ ಶೀಘ್ರವಾಗಿ ಪೂರೈಸುತ್ತಾನೆ ಎಂದು ಪಂಡಿತರು ಹೇಳುತ್ತಾರೆ. ಈಗ ಆ ಸಮಯದ ಬಗ್ಗೆ ನಾವು ತಿಳಿದುಕೊಳ್ಳೋಣ.

 

 

 

ಮೊದಲನೆಯದಾಗಿ ಸೂರ್ಯೋದಯದ ಸಮಯ:ಅಂದರೆ ಸೂರ್ಯನು ಉದಯಿಸುವಾಗ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುತ್ತವೆ. ಆಗ ಶಿವನನ್ನು ಪೂಜಿಸುವುದರಿಂದ ಯಾವ ಕೋರಿಕೆಗಳು ಆದರೂ ಸಹ ಬೇಗನೆ ಈಡೇರುತ್ತವೆ. ಏಕೆಂದರೆ ಇದು ಶಿವನಿಗೆ ಪ್ರಿಯವಾದ ಸಮಯವಾಗಿದೆ.
ಎರಡನೆಯದ್ದು : ಮಧ್ಯಾಹ್ನದ ಸಮಯ ಸೂರ್ಯನು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಸಂಚಾರ ಮಾಡುವ ಸಮಯವಾಗಿದೆ. ಅಂದರೆ ಮಧ್ಯಾಹ್ನ 12 ಗಂಟೆಯ ಸಮಯ.
ಮೂರನೆಯದಾಗಿ: ಇದು ತುಂಬಾ ಮುಖ್ಯವಾದದ್ದು ಈ ಸಮಯ ಎಂದರೆ ಶಿವನಿಗೆ ತುಂಬಾ ವಿಶೇಷ. ಇದು ಶಿವನಿಗೆ ತುಂಬಾ ಪ್ರಿಯವಾದ ಸಮಯ.ಸೂರ್ಯನ ಕಿರಣಗಳು ಯಾವ ಸಮಯದಲ್ಲಾದರೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಬದಲಾಗುತ್ತದೆ. ಆ ಸಮಯದಲ್ಲಿ ಶಿವನು ನಂದಿಯ ಜೊತೆಗೆ ಕೈಲಾಸವನ್ನು ಬಿಟ್ಟು ಭೂಲೋಕದಲ್ಲಿ ಸಂಚಾರ ಮಾಡುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.ಅಂದರೆ ಬೆಳಗ್ಗೆ ಸೂರ್ಯೋದಯದ ಸಮಯ ,ಮಧ್ಯಾಹ್ನದ ಸಮಯ, ಸಾಯಂಕಾಲದ ಸೂರ್ಯಾಸ್ತದ ಸಮಯ ಈ ಮೂರು ಸಮಯಗಳಲ್ಲಿ ಶಿವನನ್ನು ಪೂಜಿಸಿ ನಿಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top