ಮನೋರಂಜನೆ

“ರಶ್ಮಿಕಾಗೆ ಕಿಸ್​ ಕೊಟ್ಟಿದ್ದೇ ತಪ್ಪಾಯ್ತು” ಕಿರಿಕ್ ಜೋಡಿಯ ಬ್ರೇಕ್​ಅಪ್​ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ.

ಸ್ಯಾಂಡಲ್ ವುಡ್’ನಲ್ಲಿ ಹಾಟೆಸ್ಟ್ ಜೋಡಿ ಎಂತಲೇ ಹೆಸರು ಪಡೆದಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಜೋಡಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು ಇಬ್ಬರನ್ನೂ ಹೈರಾಣಾಗಿಸಿದೆ..

ರಶ್ಮಿಕಾ ರಕ್ಷಿತ್ ಶೆಟ್ಟಿಯಿಂದ ದೂರಾಗೋದಕ್ಕೆ ಗೀತಗೋವಿಂದಂ ಚಿತ್ರವೇ ಕಾರಣ ಎಂದೂ ಪುಂಖಾನುಪುಂಖವಾಗಿ ಸುದ್ದಿಗಳಾಗಿದ್ದವು,, ರಶ್ಮಿಕಾ ಮತ್ತು ವಿಜಯ್ ನಡುವೆ ಲವ್ವಾಗಿದೆ ಎಂಬಂತ ಸುದ್ದಿಗಳೇ ವಿಜಯ್ ದೇವರಕೊಂಡನಿಗೆ ವಿಲನ್ ಗೆಟಪ್ಪು ಹಾಕಿ ಕೂರಿಸಿವೆ.. ವಿಜಯ್ ನಿಂದಲೇ ರಕ್ಷಿತ್ ಜೊತೆ ರಶ್ಮಿಕಾ ಬ್ರೇಕಪ್ ಮಾಡಿಕೊಂಡಿದ್ದಾಳೆ ಅಂತೆಲ್ಲ ಸುದ್ದಿ ಹಬ್ಬಿದೆ.. ಈ ಬಗ್ಗೆ ಇದೀಗ ಸ್ವತಃ ವಿಜಯ್ ದೇವರಕೊಂಡ ಅವರೇ ಪ್ರತಿಕ್ರಿಯಿಸಿದ್ದಾರೆ.

 

 

ನಿನ್ನೆ ಬೆಂಗಳೂರಿನಲ್ಲಿ ಅವರ ಹೊಸ ಸಿನಿಮಾ ನೋಟಾ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯ್ ದೇವರಕೊಂಡ “ರಕ್ಷಿತ್​ ಹಾಗೂ ರಶ್ಮಿಕಾ ಬಗ್ಗೆ ತಮಗೆ ಗೌರವವಿದೆ. ನನ್ನ ಹಾಗೂ ರಶ್ಮಿಕಾ ನಡುವೆ ಯಾವುದೆ ಸಂಬಂಧವಿಲ್ಲ, ಕಿಸ್ಸಿಂಗ್​ ಸೀನ್​ನಿಂದ ಇಷ್ಟೆಲ್ಲಾ ಗಾಸಿಪ್​ ಹರಿದಾಡ್ತಾ ಇದೆ,, ರಕ್ಷಿತ್ ಶೆಟ್ಟಿ ಹಾಗೂ ರಷ್ಮಿಕಾ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಯ ತೆಗೆದುಕೊಳ್ಳಬೇಕು. ಹಾಗೇ ಅವರ ನೋವುಗಳಲ್ಲಿ ಬೇರೆಯವರು ಮನರಂಜನೆ ತೆಗೆದುಕೊಳ್ಳಬಾರದು ಅವರಿಬ್ಬರು ಈ ಹಂತಕ್ಕೆ ಬರಲು ಬಹಳ ಕಷ್ಟಪಟ್ಟಿದ್ದಾರೆ.. ರಕ್ಷಿತ್ ಶೆಟ್ಟಿ ಅವರ ಶ್ರೀ ಮನ್ನರಾಮಾಯಣ ಸಿನಿಮಾಗಾಗಿ ನಾನು ಕಾದಿದ್ದೇನೆ. ಅವರ ಹೊಸ ಸಿನಿಮಾ ಮೇಲೆ ಸಾಕಷ್ಡು ಕುತೂಹಲ ಇದೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top