ಮನೋರಂಜನೆ

ದಸರಾ ಕಾರ್ ರೇಸ್​ನಲ್ಲಿ ಭಾಗವಹಿಸುತ್ತಾರಾ ದರ್ಶನ್​? ಕುತೂಹಲ ಕೆರಳಿಸಿದ ದಾಸ.

ಇತ್ತೀಚಿಗಷ್ಟೇ ನಟ ದರ್ಶನ್ ಅವರು ಚಲಿಸುತ್ತಿದ್ದ ಆಡಿ ಕಾರು ಮೈಸೂರಿನ ಹಿನಕಲ್ ಬಳಿ ಅಪಘಾತವಾಗಿದ್ದ ವಿಚಾರ ಪ್ರತಿಯೊಬ್ಬರಿಗೂ ಗೊತ್ತು. ಈ ಅಪಘಾತದಲ್ಲಿ ದರ್ಶನ್ ಬಲಗೈಗೆ ಪೆಟ್ಟುಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಗಾಯವಾಗಿರೋ ಕೈಗೆ ಪ್ಲೇಟ್ ಹಾಕಲಾಗಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ.

 

 

ಈ ನಡುವೆ ಗ್ರಾವೆಲ್ ಫೆಸ್ಟ್ 2018 ಕಾರ್ ರೇಸ್ ನಲ್ಲಿ ಭಾಗವಹಿಸಲು ದರ್ಶನ್ ಲೈಸನ್ಸ್ ಪಡೆದುಕೊಂಡಿರುವುದು ಕುತೂಹಲ ಮೂಡಿಸಿದೆ. ಹೌದು ಮೈಸೂರು ದಸರಾ ಮಹೋತ್ಸವ ಅಂಗವಾಗಿ ಲಲಿತ್​ ಮಹಲ್ ​ನ​ ಹೆಲಿಪ್ಯಾಡ್ ಮೈದಾನದಲ್ಲಿ ಅಕ್ಟೋಬರ್ 6 ಮತ್ತು 7ರಂದು ಕಾರ್​ ರೇಸ್ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುಲು ಬೇಕಾಗಿರುವ ಲೈಸೆನ್ಸ್ ಅನ್ನು ದರ್ಶನ್ ಅವರು ಪಡೆದುಕೊಂಡಿದ್ದಾರೆ.. ಕೈ ಪೆಟ್ಟಾಗಿದ್ದರೂ ಈ ಲೈಸೆನ್ಸ್ ಪಡೆದುಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕಾರ್ ರೇಸ್ ನಲ್ಲಿ ನಟ ದರ್ಶನ್ ಭಾಗವಹಿಸುವ ವಿಚಾರದ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಪ್ರತಿಕ್ರಿಯೆ ನೀಡಿದ್ದು ಇದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. “ನಗರದಲ್ಲಿ ಮಾತನಾಡಿದ ಅವರು, ಅಪಘಾತದಿಂದಾಗಿ ನಟ ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಮಧ್ಯೆ ಕಾರ್ ರೇಸ್ ಲೈಸೆನ್ಸ್ ಕೂಡ ಪಡೆದಿದ್ದಾರೆ.. ಸ್ಪರ್ಧೆಯಲ್ಲಿ ಭಾಗವಹಿಸಲು ಅವರು ಫಿಟ್ ಆಗಿದ್ದರೆ ಅವರು ಭಾಗವಹಿಸಬಹುದು.. ಕಾರ್ ರೇಸ್ ನಲ್ಲಿ ಭಾಗವಹಿಸಲು ವೈದ್ಯಕೀಯ ಫಿಟ್ನೆಸ್ ಪ್ರಮಾಣ ಪಾತ್ರವನ್ನ ನೀಡಬೇಕು., ಸದ್ಯ ಅವರ ಆರೋಗ್ಯ ಸ್ಥಿತಿಯ ಬಗ್ಗೆ ನನಗೇನು ಗೊತ್ತಿಲ್ಲ ಭಾಗವಹಿಸುತ್ತಾರಾ ಇಲ್ವಾ ಎಂದು ಕಾದು ನೋಡೋಣ” ಎಂದು ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top