ಸಮಾಚಾರ

2019ರ ಚುನಾವಣಾ ಸಮೀಕ್ಷೆ- ಮತ್ತೊಮ್ಮೆ ಮೋದಿ ಗೆಲುವು ನಿಶ್ಚಿತ, ಆದರೆ NDA ಎಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಗೊತ್ತೇ?

2019 ರ ಲೋಕಸಭೆ ಚುನಾವಣೆಗೆ ಇನ್ನು 6-7 ತಿಂಗಳುಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದೆ. ಈ ವೇಳೆ ರಾಷ್ಟ್ರೀಯ ಸುದ್ದಿ ವಾಹಿನಿ ಎಬಿಪಿ ಸಿ ವೋಟರ್ ಸರ್ವೆ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದ್ದು ಸದ್ಯ ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲಿದೆ ಎಂದು ತಿಳಿಸಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಗೆ 300 ಕ್ಕೂ ಹೆಚ್ಚು ಸ್ಥಾನಗಳು ಬಂದಿದ್ದವು ಆದರೆ ಈ ಬಾರಿಯ ಚುನಾವಣೆಯಲ್ಲಿ ಎನ್ ಡಿಎ 58 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು 276 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಯುಪಿಎ ಹಿಂದಿನ ಚುನಾವಣೆಗಿಂತ ಸುಧಾರಣೆ ಕಾಣಲಿದ್ದು 115 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ.

ಸಿ-ವೋಟರ್, ರಿಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆಯಂತೆ 543 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 276 ಸ್ಥಾನಗಳು ಸಿಕ್ಕರೆ, ಯುಪಿಎಗೆ 112, ಇತರೆ 155 ಸ್ಥಾನಗಳು ಸಿಗಲಿವೆ.

ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ?
ದೆಹಲಿ ಒಟ್ಟು ಸ್ಥಾನ 07:  NDA-07 UPA- 00 ಎಎಪಿ: 00
ಹರ್ಯಾಣ ಒಟ್ಟು 10 :  NDA- 06 UPA-:03 ಇತರೆ : 01
ಪಂಜಾಬ್ ಒಟ್ಟು13 :  NDA- 01 UPA-:12
ಒಡಿಶಾ: ಒಟ್ಟು 21:  NDA- 13 ಬಿಜು ಜನತಾ ದಳ: 6 UPA- 2

ಮಹಾರಾಷ್ಟ್ರ ಒಟ್ಟು48 : NDA- 22 ಶಿವಸೇನಾ :07 ಕಾಂಗ್ರೆಸ್ : 11 ಎನ್ ಸಿಪಿ: 08
ಛತ್ತೀಸ್ ಗಢ ಒಟ್ಟು 11: NDA-: 09 UPA-02
ರಾಜಸ್ಥಾನ ಒಟ್ಟು 25: NDA- 18 UPA-07
ಮಧ್ಯಪ್ರದೇಶ ಒಟ್ಟು29 : NDA- 23 UPA- 06

ಬಿಹಾರ ಒಟ್ಟು40 : NDA- 31 UPA-: 09
ಉತ್ತರಪ್ರದೇಶ ಒಟ್ಟು80 : NDA- 36 UPA- 02 ಮಹಾಘಟಬಂದನ್ : 42
ಉತ್ತರಖಂಡ್ ಒಟ್ಟು 05:NDA- 05 UPA-00
ತೆಲಂಗಾಣ ಒಟ್ಟು 17: NDA- 01 UPA- 06 ಟಿಆರ್ ಎಸ್:09 ಎಐಎಮ್ ಐಎಮ್:01
ತ್ರಿಪುರ ಒಟ್ಟು 02: NDA- 02 UPA- 00

ನಾಗಾಲ್ಯಾಡ್ ಒಟ್ಟು 01: NDA- 01 UPA- 00
ತಮಿಳುನಾಡು ಒಟ್ಟು 39: NDA- 02 UPA-00 ಡಿಎಂಕೆ:28 ಎಐಎಡಿಎಂಕೆ: 09
ಮೆಘಾಲಯ ಒಟ್ಟು 02: NDA- 01 UPA- 01
ಲಕ್ಷದ್ವೀಪ ಒಟ್ಟು 01: NDA- 00 UPA- 01

ಕೇರಳ ಒಟ್ಟು 20: NDA-00 UPA-16 ಎಲ್ ಡಿಎಫ್ 04
ಕರ್ನಾಟಕ ಒಟ್ಟು 28: NDA- 18 UPA-07 ಜೆಡಿಎಸ್ 03
ಜಾರ್ಖಂಡ್ ಒಟ್ಟು14: NDA- 08 UPA- 05 ಜೆವಿಎಮ್ 01
ಜಮ್ಮು ಮತ್ತು ಕಾಶ್ಮೀರ ಒಟ್ಟು 06: NDA- 02 UPA-: 04

ಹಿಮಾಚಲಪ್ರದೇಶ ಒಟ್ಟು 04: NDA- 04 UPA-: 00
ಗೋವಾ ಒಟ್ಟು 02: NDA-01 UPA- 01
ಗುಜರಾತ್ ಒಟ್ಟು 26: NDA- 24 UPA- 02
ಪುದುಚೆರಿ ಒಟ್ಟು o1: NDA- 00 UPA- 01
ಪಶ್ಚಿಮಬಂಗಾಳ ಒಟ್ಟು 42: NDA- 16 UPA-01 ಟಿಎಂಸಿ 25

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top