ಸಮಾಚಾರ

“ಕಾಲೆಳೆಯುವುದೇ ರಮ್ಯಾ ಕೆಲಸ” ರೆಬೆಲ್ ಸ್ಟಾರ್ ಅಂಬರೀಷ್.

ಚುನಾವಣಾ ರಾಜಕಾರಣದಿಂದ ದೂರ ಉಳಿದಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಅಂಬರೀಶ್ ದೀರ್ಘ ಸಮಯದ ನಂತರ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.. ಕುಮಾರಸ್ವಾಮಿ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆಯೇ ಹೊರತು, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ ಅಂಬರೀಷ್ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಬಗ್ಗೆ ಕೂಡ ಮಾತನಾಡಿದ್ದಾರೆ.

ಕಾಂಗ್ರೆಸ್’ಗೆ ಕುಮಾರಸ್ವಾಮಿ ಅನಿವಾರ್ಯ:
ಇಂದು ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್​ಗೆ ಬೇರೆ ಆಯ್ಕೆ ಇದೆ. ಆದರೆ ಕಾಂಗ್ರೆಸ್​ಗೆ ಕುಮಾರಸ್ವಾಮಿಯವರೇ ಅನಿವಾರ್ಯ ಎಂದು ಹೇಳಿ ಸ್ವಪಕ್ಷೀಯರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದರು. ಸರಕಾರ ಬೀಳಿಸಿದರೆ, ಮುಂದೇನಾಗುತ್ತದೆ ಎಂಬುದನ್ನು ಕಾಂಗ್ರೆಸ್‌ ಅರಿತು ಕೆಲಸ ಮಾಡಬೇಕು. ಕುಮಾರಸ್ವಾಮಿಗೆ ಕಾಂಗ್ರೆಸ್​ ಅನಿವಾರ್ಯವಲ್ಲ ಎಂದು ಎಚ್​ಡಿಕೆ ಪರ ಬ್ಯಾಟಿಂಗ್ ಮಾಡಿದರು.

ಕಾಲೆಳೆಯುವುದೇ ರಮ್ಯಾ ಕೆಲಸ:
ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಗೆ ರಮ್ಯ ರಾಜಿನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು “ರಮ್ಯಾ ಕಾಂಗ್ರೆಸ್ ಪಕ್ಷದ ಸೊಸಿಯಲ್ ಮಿಡಿಯಾದ ಮುಖ್ಯಸ್ಥೆಯಾಗಿದ್ದಾರೆ. ಅವರ ಕೆಲಸವೇ ಎದುರಾಳಿಗಳ‌‌ ಕಾಲೆಳೆದು ನಮ್ಮ ಪಕ್ಷವನ್ನ ಮೇಲೆತ್ತೆವುದು.. ಆದರೆ ಯಾವುದೇ ಹೇಳಿಕೆ ಕೊಡೋವಾಗ ಸ್ವಲ್ಪ ಎಚ್ಚರಿಕೆ ವಹಿಸಿ ನೀಡಬೇಕು” ಎಂದು ಸಲಹೆ ನೀಡಿದರು.

ಮಂಡ್ಯ ಕಾಂಗ್ರೆಸ್ ನಾಯಕ ಯಾರು?
ಅಂಬರೀಶ್ ನಿವೃತ್ತಿ ಬಳಿಕ ಮಂಡ್ಯ ಕಾಂಗ್ರೆಸ್ ನಾವಿಕ‌ನಿಲ್ಲದ ದೋಣಿಯಂತಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, “ಜವಾಹರ್ ಲಾಲ್ ನೆಹರು ಸತ್ತಮೇಲೆ ಯಾರು ನಾಯಕರು ಹುಟ್ಟಿಕೊಳ್ಳಲಿಲ್ವಾ? ಹಾಗೆಯೇ ಮಂಡ್ಯಕ್ಕೂ ನಾಯಕರು ಬರುತ್ತಾರೆ, ನಾನಿರುವವರೆಗೆ ನನ್ನ ಮಗ ಅಂತೂ ರಾಜಕಾರಣಕ್ಕೆ ಬರುವುದಿಲ್ಲ” ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top