ಆರೋಗ್ಯ

ಚಳಿಗಾಲದಲ್ಲಿ ಆಗುವ ಒಣಗಿದ ಚರ್ಮದ ಸಮಸ್ಯೆ ವಾಸಿ ಆಗೋಕೆ ಇಷ್ಟು ಮಾಡಿದ್ರೆ ಸಾಕು .

ಒಣ ಚರ್ಮಕ್ಕೆ ಮನೆಮದ್ದುಗಳು

ಕೆಲವರಿಗೆ ಒಣಚರ್ಮದ ಸಮಸ್ಯೆ ಇನ್ನಿಲ್ಲದಂತೆ ಸದಾಕಾಲ ಕಾಡುತ್ತದೆ. ಚರ್ಮ ಒಣಗಿದರೆ ತುರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರ ನಿವಾರಣೆಗೆ ನೀವು ಹಲವಾರು ವಿಧಾನಗಳನ್ನು ಮನೆಯಲ್ಲಿಯೇ ಮಾಡಬಹುದಾದ ಸರಳ ವಿಧಾನಗಳು ಇಲ್ಲಿದೆ ನೋಡಿ

ಆಲಿವ್ ಎಣ್ಣೆಯ ಮಸಾಜ್:

 

 

 

ಆಲಿವ್ ಎಣ್ಣೆಯಿಂದ ಒಣ ಚರ್ಮದ ಮೇಲ್ಭಾಗಕ್ಕೆ ಮಸಾಜ್ ಮಾಡುವುದರಿಂದ ಚರ್ಮವು ಒಣಗುವುದಿಲ್ಲ.

ಹಾಲಿನ ಕೆನೆ:ಒಣಗಿರುವ ಚರ್ಮದ ಮೇಲ್ಭಾಗಕ್ಕೆ ಹಾಲಿನ ಕೆನೆಯನ್ನು ಹಚ್ಚುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಲೋಳೆಸರ:ಎಳೆಯ ಚಿಗುರಿನ ಲೋಳೆಸರದ ಅಂಟನ್ನು ಚರ್ಮಕ್ಕೆ ಹಚ್ಚಿ ಅರ್ಧಗಂಟೆ ಒಣಗಿಸಿ ತೊಳೆಯುದರಿಂದ ಒಣ ಚರ್ಮ ಸಮಸ್ಯೆಗೆ ವಿರಾಮ ಹಾಕಬಹುದು.

ಜೇನುತುಪ್ಪ:ರೋಸ್ ವಾಟರ್ ನಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಹಚ್ಚಿದರೆ ಚರ್ಮವು ಒಣಗುವುದಿಲ್ಲ.

ಟೊಮ್ಯಾಟೋ:ಟೊಮ್ಯಾಟೋ ಪೇಸ್ಟ್ ಅನ್ನು ರೋಸ್ ವಾಟರ್ ನೊಂದಿಗೆ ಬೆರೆಸಿ ಕೈ,ಕಾಲು,ಕುತ್ತಿಗೆ,ಮುಖಕ್ಕೆ ಹಚ್ಚುವುದರಿಂದ ಚರ್ಮ ಒಡೆಯುದನ್ನು ತಡೆಯಬಹುದು .

ಎಳ್ಳೆಣ್ಣೆ:ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆಯನ್ನು ಹಚ್ಚುವುದರಿಂದ ಚರ್ಮಕ್ಕೆ ಸಂಭಂದಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳಬಹುದು.

ಕಿತ್ತಳೆ ಹಣ್ಣಿನ ಸಿಪ್ಪೆ:ಒಣಗಿದ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಪುಡಿಮಾಡಿ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಹೆಚ್ಚುತ್ತದೆ.

ತೆಂಗಿನ ಎಣ್ಣೆ:

 

 

 

ದೇಹದ ಭಾಗಕ್ಕೆ ಆಗಾಗ ತೆಂಗಿನ ಎಣ್ಣೆಯನ್ನು ಹಚ್ಚುತ್ತಿದ್ದರೆ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಮೊಸರು:ರಾತ್ರಿ ಮಲಗುವ ಮುನ್ನ ದೇಹದ ಭಾಗಗಳಿಗೆ ಮೊಸರು ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವುದರ ಮೂಲಕ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕ್ಯಾರೆಟ್ ಮತ್ತು ಬೀಟ್ ರೂಟ್:ಕ್ಯಾರೆಟ್ ಮತ್ತು ಬೀಟ್ ರೂಟ್ ರಸವನ್ನು ಜೇನುತುಪ್ಪದೊಂದಿಗೆ ದೇಹದ ಭಾಗಗಳಿಗೆ ಹಚ್ಚುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top