fbpx
ಧರ್ಮ

ಮದುವೆಯ ಸಮಯದಲ್ಲಿ ಗಂಡು ಹೆಣ್ಣಿನ ಕೊರಳಿಗೆ ಕಟ್ಟುವ ತಾಳಿಯ ಮಹತ್ವ ಹಾಗೂ ಅದರ ಬಗ್ಗೆ ನಿಮಗೆ ಗೊತ್ತಿರದ ಈ ಮುಖ್ಯವಾದ ವಿಷಯಗಳನ್ನು ತಿಳ್ಕೊಳ್ಳಿ

ಸರ್ವ ಪ್ರಪಂಚವನ್ನು ಸೃಷ್ಟಿಸಿರುವುದು ಪರಮಾತ್ಮ ಆದರೂ ಪರಮಾತ್ಮ ಕಣ್ಣಿಗೆ ಕಾಣಿಸುವವನಲ್ಲ. ಸೃಷ್ಟಿಸಲ್ಪಟ್ಟ ಪ್ರಕೃತಿ ಮಾತ್ರ ಕಾಣಿಸುತ್ತದೆ. ಪ್ರಕೃತಿ ಸ್ವತಂತ್ರವಾಗಿ ಕಾಣಿಸುತ್ತಿದ್ದರೂ ಕಾಣಿಸದಂತೆ ಪರಮಾತ್ಮನ ಅಧೀನದಲ್ಲಿಯೇ ಇದೆ.ಪ್ರಕೃತಿಯಲ್ಲಿನ ಅಣುವಿನಿಂದ ಭೂಗೋಳದವರೆಗೂ, ಸೂರ್ಯ ಗೋಳದಿಂದ ಪ್ರಾರಂಭವಾಗಿ ಎಷ್ಟೋ ದೊಡ್ಡವುಗಳಾದ ನಕ್ಷತ್ರ ಸಮುದಾಯಗಳವರೆಗೂ ತನ್ನ ಅಧೀನದಲ್ಲಿಟ್ಟುಕೊಂಡು ನಡೆಸುವುದು ಪರಮಾತ್ಮ .
ಪ್ರಕೃತಿಯು ಸ್ತ್ರೀ ತತ್ವವಾದರೆ ಪರಮಾತ್ಮ ಪುರುಷ ತತ್ವವಾಗಿದೆ. ಈ ಎರಡು ಇವೆ ಎಂದು ತಿಳಿಯುವಂತೆಯೇ ಜಗತ್ತಿನಲ್ಲಿ ಸ್ತ್ರೀ ಪುರುಷ ಶರೀರಗಳು ತಯಾರಾಗಿವೆ. ಪ್ರಕೃತಿ ಪುರುಷರಿಂದಲೇ ಜಗತ್ತು ತಯಾರಾಗುತ್ತಿದೆ ಎಂಬ ಸಿದ್ಧಾಂತದ ಪ್ರಕಾರವೇ ಸ್ತ್ರೀ ಪುರುಷರಿಗೆ ಸಂತಾನ ಉಂಟಾಗುತ್ತಿದೆ.

ಯಾವಾಗಲೂ ಪ್ರಕೃತಿ ಪರಮಾತ್ಮನ ಅಧೀನದಲ್ಲಿ ಇರುತ್ತದೆಂದು ತಿಳಿಸುವ ಕಾರಣವೇ ಮದುವೆಯ ದಿನ ಪುರುಷನೂ ಸ್ತ್ರೀ ಕೊರಳಿನಲ್ಲಿ ಒಂದು ದಾರವನ್ನು ಮೂಡಿ ಹಾಕುತ್ತಿದ್ದಾನೆ. ನೀನು ಪ್ರಕೃತಿಯು ನಾನು ಪುರುಷನೆಂದು ಅರ್ಥ ಕೊಡುವಂತೆ ಪ್ರಕೃತಿ ಎಂಬ ಮೂರು ಅಕ್ಷರಗಳಿಗೆ ತಕ್ಕಂತೆ ದಾರದಿಂದ ಮೂರು ಮುಡಿಗಳನ್ನು ಹಾಕುತ್ತಿದ್ದಾರೆ. ಗುರುತನ್ನು ಬೊಟ್ಟು ಅನ್ನುವುದು ಸಹ ಇದೆ. ಅಂದಿನಿಂದ ಸ್ತ್ರೀ-ಪುರುಷನ ಅಧೀನದಲ್ಲಿ ಇರಬೇಕೆಂಬ ಭಾವ ಉಂಟು ಮಾಡುವಂತೆ ಅಧೀನಕ್ಕೆ ಗುರುತಾಗಿ ಬಂಗಾರದ ಬೊಟ್ಟನ್ನು ಕಟ್ಟುವುದು ನಡೆಯುತ್ತಿದೆ. ಅಧಿನಕ್ಕೆ ಸೂಚನೆಯಾಗಿರುವುದರಿಂದ ಅದನ್ನು “ಅಲಿಬೊಟ್ಟು” ಅನ್ನುತ್ತಿದ್ದರು. ಕಾಲಕ್ರಮದಲ್ಲಿ ಅಲಿಬೊಟ್ಟು ಎಂಬುದು ತಾಳಿಬೊಟ್ಟಾಗಿ ಬದಲಾಗಿದೆ ಎಂದು ಗ್ರಹಿಸಬೇಕು. ಪ್ರಕೃತಿಯ ಮೇಲೆ (ದೇವರ ಅಧಿಕ್ಯತೆಯನ್ನು) ಪುರುಷನಾದಿಕ್ಯತೆಯನ್ನು ತಿಳಿಸುವ ಗುರುತೇ ತಾಳಿ ಕಟ್ಟುವುದು ಎಂದು ಗ್ರಹಿಸಬೇಕು.

 

 

 

ಪ್ರಕೃತಿ ಪುರುಷರ ವಿವರವನ್ನು ತಿಳಿಸುವುದು ತಾಳಿಬೊಟ್ಟು. ಪರಮಾತ್ಮ ಜ್ಞಾನ ಒಳಗೊಂಡಿರುವುದರಿಂದ ತಾಳಿ ಬೊಟ್ಟನ್ನು ಲೋಹಗಳಲ್ಲಿ ಬೆಲೆಯುಳ್ಳ ಪವಿತ್ರವಾದ ಬಂಗಾರದಿಂದಲೇ ತಯಾರು ಮಾಡಿಸುತ್ತಾರೆ.ತಾಳಿ ಬೊಟ್ಟನ್ನು ದುಂಡಾದ ಬಂಗಾರದ ಬಿಲ್ಲೆಯಿಂದ ತಯಾರು ಮಾಡಿ ಅದಕ್ಕೆ ಮಧ್ಯ ಭಾಗದಲ್ಲಿ ಚಿಕ್ಕ ತಗ್ಗು ಮಾಡುತ್ತಿದ್ದರು. ಒಂದು ಕಡೆ ತಗ್ಗನ್ನು ಮಾಡಿದರೆ ಎರಡನೆಯ ಕಡೆ ಉಬ್ಬಾಗಿ ಕಾಣಿಸುತ್ತದೆ. ಸಂಪ್ರದಾಯ ಪದ್ಧತಿಯಲ್ಲಿ ತಯಾರು ಮಾಡುವ ತಾಳಿ ಬೊಟ್ಟು ಒಂದು ಕಡೆ ತಗ್ಗಿನಂತಿದ್ದು ಒಂದು ಕಡೆ ಉಬ್ಬಾಗಿರುತ್ತದೆ. ಎತ್ತರವಾಗಿರುವ ಭಾಗ ಪುರುಷನ ಗುರುತಾದ ಪರಮಾತ್ಮ ಗುರುತೆಂದು, ಕುಣಿಯಾಗಿರುವ ತಗ್ಗು ಭಾಗ ಸ್ತ್ರೀ ಗುರುತಾದ ಪ್ರಕೃತಿಗೆ ಗುರುತಾದ ಪ್ರಕೃತಿಗೆ ಗುರುತೆಂದು ಪೂರ್ವಕಾಲದಲ್ಲಿ ದೊಡ್ಡವರು ತಿಳಿಸುತ್ತಿದ್ದರು.ಮದುಮಗ ಮದುಮಗಳಿಗೆ ತಾಳಿ ಕಟ್ಟಿದಾಗ ತಗ್ಗಾದ ಭಾಗ ಹೊರಗೆ ಕಾಣಿಸುವಂತೆ,ಉಬ್ಬಾದ ಭಾಗ ಕಾಣಿಸದಂತೆ ಒಳಗೇ ಇರುವಂತೆ ಕಟ್ಟುತ್ತಿದ್ದರು.
ಸ್ತ್ರೀ ತಾಳಿ ಧರಿಸಿದಾಗ ಯಾರಾದರೂ ತಾಳಿಬೊಟ್ಟನ್ನು ನೋಡಿದರೆ ತಗ್ಗು ಭಾಗ ಕಾಣಿಸುತ್ತದೆ. ಹಾಗೆ ಕಾಣಿಸುವುದರಿಂದ ಕಾಣಿಸುವುದಿಲ್ಲವೋ ಪ್ರಕೃತಿಯೇ ಎಂದು , ನಿನಗೆ ಎದುರಿಗೆ ತಿಳಿಯುವುದೆಲ್ಲ ಪ್ರಕೃತಿ ಸ್ವರೂಪವೇ ಎಂದು ತಿಳಿಸುವ ಅರ್ಥದಿಂದ ಇದೆ.ತಾಳಿ ಬೊಟ್ಟು ಹಿಂಭಾಗದಲ್ಲಿ ಕಾಣಿಸದ ಉಬ್ಬು ಭಾಗವಿದೆ. ಹಾಗೆಯೇ ಉಬ್ಬು ಭಾಗ ಕಾಣಿಸದಿರುವುದರಿಂದ ಕಾಣಿಸದ ದೇವರು ಪ್ರಕೃತಿಯ ಹಿಂದೆ ಇದ್ದಾನೆಂದು, ಪ್ರಕೃತಿಯನ್ನು ದಾಟಿದರೆ ದೇವರು ತಿಳಿಯುತ್ತದೆ ಎಂಬ ಅರ್ಥದಿಂದ ಇದೆ.

 

ಈ ವಿಧವಾಗಿ ಹಿರಿಯರು ಪ್ರಕೃತಿ ಪರಮಾತ್ಮರ ವಿವರವನ್ನು ತಾಳಿ ಬೊಟ್ಟಿನಲ್ಲಿ ಅಳವಡಿಸಿ ಇಟ್ಟಿದ್ದಾರೆ. ಇಂದೂ ಧರ್ಮಯುಕ್ತವಾಗಿ ದೈವ ಜ್ಞಾನದ ಪ್ರಕಾರ ಸುಮಾರು ಒಂದು ಇಂಚು ಅಗಲ ಇರುವ ಬಂಗಾರದ ಬಿಲ್ಲೆಯ ಮೇಲೆ ಮಧ್ಯದಲ್ಲಿ ಸ್ವಲ್ಪ ಉಬ್ಬು ಒಂದು ಕಡೆ ಸ್ವಲ್ಪ ಉಬ್ಬು ಒಂದು ಕಡೆ ಇಟ್ಟು ಮಾಡುತ್ತಿದ್ದರು.ಈಗಿನ ಕಾಲದಲ್ಲಿ ಕೆಲವು ಪ್ರಾಂತ್ಯಗಳಲ್ಲಿ ಒಂದು ಬಿಲ್ಲೆ ಸ್ಥಾನದಲ್ಲಿ ಎರಡು ಬಿಲ್ಲೆಗಳು ಸಹ ಬಂದಿವೆ. ಈ ವಿಧವಾಗಿ 2 ಬಿಲ್ಲೆಗಳು ಧರಿಸುವುದು ಸಂಪ್ರದಾಯ ವಿರುದ್ಧ, ಧರ್ಮ ರಹಿತವಾಗುತ್ತದೆ. ಕೆಲವರೇನೋ ಸ್ವಲ್ಪ ಅಗಲವಾದ ಬಿಲ್ಲೆಯ ಮೇಲೆ ಮಧ್ಯದಲ್ಲಿ ಕುಣಿ ಇಡದೆ ಒಟ್ಟಾಗಿ ಬಿಲ್ಲೆ ಎಲ್ಲವೂ ಕುಣಿ ಇಡುತ್ತಿದ್ದಾರೆ.
ಮತ್ತೆ ಕೆಲವರು ಮಧ್ಯದಲ್ಲಿ ಕುಣಿ ಇರುವ ಬಿಲ್ಲೆಯನ್ನೆ ಧರಿಸಿದರೂ ಕುಣಿ ಇರುವ ಭಾಗ ಒಳಗಡೆ ಇರುವಂತೆ ಧರಿಸುತ್ತಿದ್ದಾರೆ . ಈ ವಿಧವಾಗಿ ಧರಿಸುವುದು ಸಹ ಜ್ಞಾನ ವಿರುದ್ಧವಾಗುತ್ತದೆ. ಹೆಚ್ಚಾಗಿ ಬಿಲ್ಲೆಗಳನ್ನು ಧರಿಸುವುದನ್ನು,ಉಬ್ಬು ಭಾಗ ಮೇಲಕ್ಕೆ ಕಾಣಿಸುವಂತೆ ಧರಿಸುವುದು ಅರ್ಥವಿಲ್ಲದ ಕೆಲಸ ಆಗುತ್ತದೆ.ಆದ್ದರಿಂದ ಇಂದೂ ಸಂಪ್ರದಾಯಗಳು ಮರೆಯಾಗಿ ಅಜ್ಞಾನ ಬೆಳೆದು ಹೋಗುತ್ತದೆ. ಆಲಿಬೊಟ್ಟಿಗೆ ಅರ್ಥ ತಿಳಿದು ಧರಿಸುವುದರಿಂದ ಅವರಲ್ಲಿ ಇಂದೂತ್ವ ಕಾಣಿಸುತ್ತದೆ. ಹಾಗೆ ಅಲ್ಲದೆ ಹೋದರು ಹೆಸರು ಇಂದೂವಾದರೂ ನಿಜವಾಗಲೂ ಇಂದೂ ಅಲ್ಲ ಎನ್ನಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top