ಮನೋರಂಜನೆ

KGF ಸ್ಪೆಷಲ್ ಬೈಕ್ ಸೃಷ್ಟಿಯ ಹಿಂದಿರುವ ರೋಚಕ ಕಥೆ ಕೇಳಿ.

ಹೊಂಬಾಳೆ ಫಿಲಮ್ಸ್ ಲಾಂಛನದಲ್ಲಿ ವಿಜಯ್ ಕಿರಗಂಡೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಾಯಕನಾಗಿ ನಟಿಸುತ್ತಿರುವ ‘ಕೆಜಿಎಫ್’ ಚಿತ್ರ ಸಿನಿ ರಸಿಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ನೀಳ ಗಡ್ಡದ ಎಸಳುಗಳಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ.  ನವೆಂಬರ್ 16ರಂದು ಕೆಜಿಎಫ್ ಸಿನಿಮಾ ರಿಲೀಸ್ ಆಗಲಿದೆ.  ಕೆ ಜಿ ಎಫ್ ಸಿನಿಮಾದಲ್ಲಿರುವ ಸೂಪರ್ ಬೈಕ್ ಈಗ ಸೌಂಡ್ ಮಾಡುತ್ತಿದೆ..

 

 

ಚಿತ್ರದ ಪೋಸ್ಟರ್‍ನಲ್ಲಿ ಬಳಕೆಯಾಗಿದ್ದ ಬೈಕ್ ನೋಡೋದಕ್ಕೆ ಮಾಮೂಲಿ ಬೈಕ್’ಗಳ ರೀತಿ ಕಾಣಿಸುವುದಿಲ್ಲ..ಏಕೆಂದರೆ ವಾಸ್ತವದಲ್ಲಿ ಈ ಮಾಡಲ್ ನ ಬೈಕ್ ಇಲ್ಲ.. ಇದು ಚಿತ್ರಕ್ಕಾಗಿಯೇ ವಿನ್ಯಾಸ ಮಾಡಲಾದ ಬೈಕು. ಅಷ್ಟಕ್ಕೂ ಈ ಬೈಕ್ ಹೇಗೆ ತಯಾರಾಯ್ತು, ತಯಾರು ಮಾಡಿದ್ದು ಯಾರು? ಎಂಬೆಲ್ಲಾ ವಿಷಯಗಳು ಈಗ ಬಹಿರಂಗಗೊಂಡಿವೆ.

ಈ ಬೈಕಿಗೆ ವಿನ್ಯಾಸ ಮಾಡಿದ್ದು ಇದೇ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿರುವ ಭುವನ್ ಗೌಡ., ಚಿತ್ರದಲ್ಲಿ ಒಂದು ಡಿಫರೆಂಟಾದ ಬೈಕನ್ನು ಬಳಸಬೇಕು ಎನ್ನುವ ಇಚ್ಛೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಭುವನ್ ನೊಂದಿಗೆ ಹೇಳಿಕೊಂಡರು. ಆಗ ತಾವು ಬೈಕ್ ಡಿಸೈನ್ ಮಾಡುವುದಾಗಿ ಹೇಳಿಕೊಂಡ ಭುವನ್ ರಾಯಲ್ ಎನ್‍ಫೀಲ್ಡ್‍ನ ಟ್ರ್ಯಾಂಪ್ 500 ಸಿಸಿ ಬೈಕ್ ಖರೀದಿಸಿ ಬೈಕ್’ನ್ನ ಎಲ್ಲಾ ಪಾರ್ಟ್ಗಳನ್ನ ಕಿತ್ತು ಹಾಕಿ ಹೊಸ ರೂಪ ಕೊಟ್ಟಿದ್ದಾರೆ.

ವಿದ್ಯಾ ಪೀಠದಲ್ಲಿರುವ ಬೇಗ್ ಎನ್ನುವ ಗ್ಯಾರೇಜ್ ನಲ್ಲಿ ಒಂದು ವಾರಗಳ ಕಾಲ ಈ ಬೈಕಿನ ವಿನ್ಯಾಸ ಕಾರ್ಯ ನಡೆದಿದ್ದು ಕೇವಲ ಎಂಜಿನ್‍ನ್ನಷ್ಟೇ ಉಳಿಸಿಕೊಂಡು ಮಿಕ್ಕೆಲ್ಲಾ ಪಾರ್ಟ್ಸ್ ಗಳನ್ನೂ ಕಳಚಿ ಚಿತ್ರಕ್ಕೆ ಬೇಕಾಗುವಂತೆ ಹೊಸ ರೀತಿಯ ಡಿಸೈನ್ ಮಾಡಿಸಿದ್ದಾರೆ.. ಇನ್ನು ರೆಡಿಯಾದ ಬೈಕನ್ನು ನೋಡಿದ ನಿರ್ದೇಶಕ ಪ್ರಶಾಂತ್ ನೀಲ್ ಭುವನ್ ಗೌಡನ ಈ ಕೆಲಸವನ್ನು ಮೆಚ್ಚುಕೊಂಡಿದ್ದರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top