ಮನೋರಂಜನೆ

ಮಾತು ಆರಂಭಿಸಿದ ನಟಸಾರ್ವಭೌಮ- ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮುಂದಿನ ಚಿತ್ರ ನಟಸಾರ್ವಭೌಮ ಸಿನಿಮಾದ ಮೇಲೆ ನಾನಾ ರೀತಿಯ ನಿರೀಕ್ಷೆಗಳು ಈಗಾಗಲೇ ಬೆಟ್ಟಮಾಡಿಕೊಂಡಿವೆ. ಚಿತ್ರದ ಚಿತ್ರೀಕರಣ ಭಿರುಸಿನಿಂದ ಸಾಗುತ್ತಿದ್ದು ಚಿತ್ರ ತುಂಬಾ ಅದ್ದೊರಿಯಾಗಿ ತೆರೆ ಮೇಲೆ ತರಲು ಚಿತ್ರತಂಡ ಶ್ರಮಿಸುತ್ತಿದೆ.. ಈಗಾಗಲೇ ಬಹುತೇಕ ರಷ್ಟು ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ತಿಂಗಳಿನ ಅಂತ್ಯದೊತ್ತಿಗೆಲ್ಲಾ ಪ್ಯಾಚ್ ವರ್ಕ್ ಕಂಪ್ಲೀಟ್ ಮಾಡಿಕೊಳ್ಳಲಿದೆ. ಹೀಗಿರುವಾಗಲೇ ನಟ ಪುನೀತ್ ರಾಜಕುಮಾರ್ ತಮ್ಮ ಪಾತ್ರದ ಡಬ್ಬಿಂಗ್’ನಲ್ಲಿ ತೊಡಗಿದ್ದಾರೆ.

ಮಾತು ಆರಂಭಿಸಿದ ನಟಸಾರ್ವಭೌಮ:
ನಟ ಪುನೀತ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಆರಂಭಿಸಿಕೊಂಡಿದ್ದಾರೆ. ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಪುನೀತ್ ಡಬ್ಬಿಂಗ್ ಮಾಡ್ತಿದ್ದಾರೆ, ಈ ಸಿನಿಮಾದಲ್ಲಿ ನಟ ಪುನೀತ್ ಮೊದಲ ಬಾರಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರವನ್ನು ಕ್ರಿಸ್ ಮಸ್ ಸೀಸನ್‍ನಲ್ಲಿ ಡಿಸೆಂಬರ್ ಕೊನೆ ವಾರಕ್ಕೆ ಬಿಡುಗಡೆ ಮಾಡಲು ಸಿನಿಮಾ ತಂಡ ತೀರ್ಮಾನಿಸಿದೆ ಎನ್ನಲಾಗಿದೆ.. ಈ ನಿಟ್ಟಿನಲ್ಲಿ ಶೂಟಿಂಗ್ ಒಳಗೊಂಡಂತೆ ತಾಂತ್ರಿಕ ಕಾರ್ಯಗಳೂ ಬಿರುಸಿನಿಂದ ನಡೆಯುತ್ತಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಡಿಸೆಂಬರ್ ವೇಳೆಗೆ ತೆರೆಗೆ ಬರುವುದು ಗ್ಯಾರಂಟೀ.

 

 

ಅಂದಹಾಗೆ ಈ ಚಿತ್ರವನ್ನು ಶಾಸಕ ಮುನಿರತ್ನ ಅರ್ಪಿಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಪ್ಪುಗೆ ನಾಯಕಿಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಮಲೆಯಾಳಂ ನಟಿ ಅನುಪಮಾ ಜೋಡಿಯಾಗಿದ್ದು ಹಿರಿಯ ನಟಿ ಬಿ. ಸರೋಜಾದೇವಿ ಕೂಡ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top