ಮನೋರಂಜನೆ

40 ಲಕ್ಷ ರೂ ವ್ಯವಹಾರದ ಬಗೆಗಿನ ಅಸಲಿ ಸತ್ಯ ಬಿಚ್ಚಿಟ್ಟ ಪಾನಿಪುರಿ ಕಿಟ್ಟಿ.

ನಟ ದುನಿಯಾ ವಿಜಯ್ ಜೊತೆಗಿನ ವೈಮನಸ್ಸಿಗೆ ಹಣದ ವಿಚಾವೇ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜಿಮ್​ ಟ್ರೈನರ್​ ಪಾನಿಪುರಿ ಕಿಟ್ಟಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಾಸ್ತಿಗುಡಿ ದುರಂತದಲ್ಲಿ ಮೃತಪಟ್ಟ ಅನಿಲ್ ಮೂಲಕ ನಲವತ್ತು ಲಕ್ಷ ನೀಡಿದ್ದರು ಎಂಬ ಸುದ್ದಿ ಹರಿದಾಡುತ್ತಿರೋದ್ರಿಂದ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

 

 

ಮಾಸ್ತಿಗುಡಿ ಚಿತ್ರಕ್ಕೆ ಅನಿಲ್ ಬಂಡವಾಳ ಹೂಡಿರುವ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನು ಯಾವುದೇ ಫೈನಾನ್ಸ್ ಮಾಡಿಲ್ಲ. ಮಾಸ್ತಿಗುಡಿಗೆ 40 ಲಕ್ಷ ಕೊಟ್ಟಿದ್ದೆ ಎನ್ನುವುದು ಸುಳ್ಳು. ಸಿನಿಮಾಗೆ ಫೈನಾನ್ಸ್ ಮಾಡುವಷ್ಟು ಶಕ್ತಿ ನನ್ನ ಬಳಿ ಇಲ್ಲ. ಇವೆಲ್ಲಾ ವದಂತಿಗಳು ಅಷ್ಟೇ,, ನಾನು ದುಡು ಕೊಟ್ಟಿಲ್ಲ, ಹಾಗೇನಾದರೂ ಒಂದು ವೇಳೆ ದುಡ್ಡು ಕೊಟ್ಟಿದ್ದರೂ ನನಗೆ ಕೇಳೋಕೆ ಅಧಿಕಾರ ಇಲ್ಲ, ವಿಜಯ್ ಜೊತೆ ನನಗೆ ದುಡ್ಡಿನ ವ್ಯವಹಾರ ಇಲ್ಲ” ಎಂದು ಪಾನಿಪುರಿ ಕಿಟ್ಟಿ ಸ್ಪಷ್ಟ ಪಡಿಸಿದ್ದಾರೆ.

ಮಾಸ್ತಿಗುಡಿ ಚಿತ್ರದ ವೇಳೆ ಪಾನಿಪುರಿ ಕಿಟ್ಟಿ 40 ಲಕ್ಷ ರೂಪಾಯಿ ಫೈನಾನ್ಸ್ ಕೊಡಿಸಿದ್ದರು. ಆದರೆ ಈಗ ಹಣ ಅವರಿಗೆ ವಾಪಸ್ ಸಿಕ್ಕಿಲ್ಲ. ಹಾಗಾಗಿ ಅಲ್ಲಿಂದ ನಟ ದುನಿಯಾ ವಿಜಯ್ ಹಾಗೂ ಕಿಟ್ಟಿ ನಡುವೆ ಮನಸ್ಥಾಪ ಉಂಟಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಬಗ್ಗೆ ಸ್ವತಃ ಪಾನಿಪುರಿ ಕಿಟ್ಟಿಯವರೇ ಸ್ಪಷ್ಟನೆ ನೀಡಿ ಇದು ಸುಳ್ಳು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top