fbpx
ಸಮಾಚಾರ

ದುನಿಯಾ ವಿಜಯ್‌ಗೆ ಬುದ್ದಿವಾದ ಹೇಳಿದ ಪ್ರಕಾಶ್ ರೈ- ನಟನಾದವರು ಹೀಗಿರಬೇಕು ಅಂದ್ರು

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಒಂದು ವಾರ ಜೈಲಿನಲ್ಲಿಯೇ ಕಾಲ ಕಳೆದು ಜಾಮೀನಿನ ಮೇಲೆ ಹೊರಬಂದಿರುವ ದುನಿಯಾ ವಿಜಯ್​ ಅವರಿಗೆ ಬಹುಭಾಷಾ ನಟ ಪ್ರಕಾಶ್ ರೈ ಉಪದೇಶ ಮಾಡಿದ್ದಾರೆ.. ಜೈಲಿನಿಂದ ಆಚೆ ಬಂದ ನಂತರವೂ ಅವರ ಕುಟುಂಬದ ವಿಚಾರಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇವೆ, ಅಲ್ಲದೇ ಪ್ರಶ್ನೆ ಕೇಳಿದ್ದ ಸುದ್ದಿಗಾರನೊಬ್ಬರ ಮೇಲೂ ದುನಿಯಾ ವಿಜಯ್ ಏಕವಚನದಲ್ಲಿಯೇ ಗದರಿದ್ದರು ಈ ಎಲ್ಲಾ ಘಟನೆಗಳ ಬಗ್ಗೆ ಪ್ರಕಾಶ್ ರೈ ವಿಜಿಗೆ ಪಾಠ ಹೇಳಿದ್ದಾರೆ.

ತಾವು ಬರೆದಿರುವ ‘ಅವರವರ ಭಾವಕ್ಕೆ’ ಎಂಬ ಪುಸ್ತಕ ಬಿಡುಗಡೆಗೆ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರೈ “ಸಿನಿಮಾ ನಟರನ್ನ ಜನರು ಅನುಸರಿಸುತ್ತಾರೆ. ಹಾಗಾಗಿ ನಾವುಗಳು ತುಂಬಾ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು., ಯಾವುದೇ ವಿಚಾರಕ್ಕೆ ಸಂಭಂದಿಸಿದಂತೆ ನಟರಾದವರು ‘ಇದು ನನ್ನ ವೈಯಕ್ತಿಕ ವಿಚಾರ’ ಅಂತ ಹೇಳುವುದು ತಪ್ಪು. ಹಾಗೆ ಹೇಳುವವರು ಸಮಾಜವನ್ನು ಪ್ರಶ್ನಿಸುವ ಹಕ್ಕು ಕಳೆದುಕೊಳ್ತಾರೆ.”

 

ತಮ್ಮ ಹಿಂದೆ ಅಭಿಮಾನಿಗಳ ಗುಂಪು ಇದೆ ಅಂದ ಮಾತ್ರಕ್ಕೆ ಈ ರೀತಿ ವರ್ತಿಸೋದು ಸರಿಯಲ್ಲ..  ಗಲಾಟೆ ಗದ್ದಲಗಳಲ್ಲಿ ತೊಡಗಬಾರದು,, ಸಿನಿಮಾ ಕಲಾವಿದರನ್ನ ಪ್ರಶ್ನೆ ಮಾಡೋದು ಮಾಧ್ಯಮಗಳ ಕರ್ತವ್ಯ ಅದಕ್ಕೆ ಸಿಟ್ಟಾಗಬಾರದು” ಎಂದು ಪ್ರಕಾಶ್​ ರೈ ಹೇಳಿದರು.

ಮಾತು ಮುಂದುವರೆಸಿದ ರೈ “ಕಲಾವಿದರಾದವರು ತುಂಬಾ ಸೆನ್ಸಿಬಲ್ ಆಗಿರಬೇಕು. ಒಬ್ಬ ನಟನಿಗೆ ತಾನು ಹೇಗೆ ನಡೆದುಕೊಳ್ಳಬೇಕು ಎಂಬ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಡಾ.ರಾಜ್ ಕುಮಾರ್ ಬಹಳ ದೊಡ್ಡ ನಟ. ಆದರೂ ಅವರು ಯಾವತ್ತು ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಹಾಗೇ ರಾಜ್ ಕುಮಾರ್ ರೀತಿ ಜೀವನದಲ್ಲಿ ಇರಬೇಕು..” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top