ಮನೋರಂಜನೆ

“ಕಾಂಗ್ರೆಸ್​ಗೆ ಕುಮಾರಸ್ವಾಮಿ ಅನಿವಾರ್ಯ, ಆದರೆ ಕುಮಾರಸ್ವಾಮಿಗೆ ಕಾಂಗ್ರೆಸ್​ ಅನಿವಾರ್ಯವಲ್ಲ” ಸಿಎಂ ಪರ ಅಂಬಿ ಬ್ಯಾಟಿಂಗ್.

ಚುನಾವಣಾ ರಾಜಕಾರಣದಿಂದ ದೂರ ಉಳಿದಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಅಂಬರೀಶ್ ಈಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆಯೇ ಹೊರತು, ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ ಎಂದು ಮಾಜಿ ಸಚಿವ ಅಂಬರೀಶ್‌ ಹೇಳಿದ್ದಾರೆ.

ಇಂದು ಮಂಡ್ಯದಲ್ಲಿ ಮಾತನಾಡಿದ ಅವರು, ಜೆಡಿಎಸ್​ಗೆ ಬೇರೆ ಆಯ್ಕೆ ಇದೆ. ಆದರೆ ಕಾಂಗ್ರೆಸ್​ಗೆ ಕುಮಾರಸ್ವಾಮಿಯವರೇ ಅನಿವಾರ್ಯ ಎಂದು ಹೇಳಿ ಸ್ವಪಕ್ಷೀಯರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದರು. ಸರಕಾರ ಬೀಳಿಸಿದರೆ, ಮುಂದೇನಾಗುತ್ತದೆ ಎಂಬುದನ್ನು ಕಾಂಗ್ರೆಸ್‌ ಅರಿತು ಕೆಲಸ ಮಾಡಬೇಕು. ಕುಮಾರಸ್ವಾಮಿಗೆ ಕಾಂಗ್ರೆಸ್​ ಅನಿವಾರ್ಯವಲ್ಲ ಎಂದು ಎಚ್​ಡಿಕೆ ಪರ ಬ್ಯಾಟಿಂಗ್ ಮಾಡಿದರು.

 

 

ಮಂಡ್ಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕುಟುಂಬದವನ್ನು ಭೇಟಿ ಮಾಡಿ ಸಾಂತ್ವಾನ ಹೇಳಲು ಅಂಬರೀಶ್ ಅವರು ಆಗಮಿಸಿದ್ದು, ತಮ್ಮ ಅಭಿಮಾನಿಯನ್ನು ನೆನೆದು ಭಾವುಕರಾಗಿದ್ದರು. ಇದೇ ವೇಳೆ ಅಂಬರೀಶ್ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಚುನಾವಣೆಯ ನಂತರ ರಾಜಕೀಯವಾಗಿ ಮೌನ ವಹಿಸಿದ್ದ ಅಂಬರೀಶ್​​, ಇಂದು ಜೆಡಿಎಸ್​ ಪರ ಮಾತನಾಡಿ ಕಾಂಗ್ರೆಸ್​ ನಾಯಕರಿಗೆ ಎಚ್ಚರಿಕೆ ನೀಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಂಬರೀಶ್ ನಿವೃತ್ತಿ ಬಳಿಕ ಮಂಡ್ಯ ಕಾಂಗ್ರೆಸ್ ನಾವಿಕ‌ನಿಲ್ಲದ ದೋಣಿಯಂತಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಜವಾಹರ್ ಲಾಲ್ ನೆಹರು ಸತ್ತಮೇಲೆ ಯಾರು ನಾಯಕರು ಹುಟ್ಟಿಕೊಳ್ಳಲಿಲ್ವಾ? ಹಾಗೆಯೇ ಮಂಡ್ಯಕ್ಕೂ ನಾಯಕರು ಬರುತ್ತಾರೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top