ಮನೋರಂಜನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೊಂದು ಬೇಸರದ ಸುದ್ದಿ.

ಇತ್ತೀಚಿಗಷ್ಟೇ ನಟ ದರ್ಶನ್ ಅವರು ಚಲಿಸುತ್ತಿದ್ದ ಆಡಿ ಕಾರು ಮೈಸೂರಿನ ಹಿನಕಲ್ ಬಳಿ ಅಪಘಾತವಾಗಿದ್ದ ವಿಚಾರ ಪ್ರತಿಯೊಬ್ಬರಿಗೂ ಗೊತ್ತು. ಈ ಅಪಘಾತದಲ್ಲಿ ದರ್ಶನ್ ಬಲಗೈಗೆ ಪೆಟ್ಟುಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಗಾಯವಾಗಿರೋ ಕೈಗೆ ಪ್ಲೇಟ್ ಹಾಕಲಾಗಿದ್ದು, ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದಾರೆ…

ಈ ನಡುವೆ ದರ್ಶನ್ ಅಭಿಮಾನಿಗಳಿಗೊಂದು ಬೇಸರದ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಸ್ಪರ್ಧೆಯಲ್ಲಿ ದರ್ಶನ್ ಭಾಗವಹಿಸುತ್ತಿಲ್ಲ. ದರ್ಶನ್​​ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಭಾಗವಹಿಸುತ್ತಿಲ್ಲ ಎಂದು ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಪ್ ಮೈಸೂರು ಸ್ಪಷ್ಟ ಪಡಿಸಿದೆ.

 

 

ರೇಸ್ ಗಾಗಿ ದರ್ಶನ್ 10 ದಿನಗಳ ಕಾಲ ಪ್ರಾಕ್ಟಿಸ್ ಮಾಡಿದರು. ಅದಕ್ಕಾಗಿಯೇ ವಿಶೇಷ ಡ್ರೈವಿಂಗ್ ಲೈಸನ್ಸ್ ಅನ್ನು ಕೂಡ ಪಡೆದುಕೊಂಡಿದ್ದರು. ದರ್ಶನ್ ಕಾರ್ ಅನ್ನು ಇಂಟರ್‍ನ್ಯಾಷನಲ್ ಓಪನ್ ವಿಭಾಗದಲ್ಲಿ ಓಡಿಸಬೇಕಿತ್ತು. ರೇಸ್‍ನಲ್ಲಿ ಭಾಗಿಯಾಗಲು ದರ್ಶನ್ ಸಾಕಷ್ಟು ಉತ್ಸಹಿಯಾಗಿದ್ದರು. ಅಪಘಾತದ ಕಾರಣದಿಂದ ಅವರು ರೇಸ್‍ನಲ್ಲಿ ಭಾಗಿಯಾಗುತ್ತಿಲ್ಲ. ಆದರೆ ಭಾನುವಾರ ರೇಸ್ ವೀಕ್ಷಿಸಲು ದರ್ಶನ್ ಬರುತ್ತಾರೆ ಎಂದು ಗ್ರಾವೆಲ್ ಫೆಸ್ಟ್ ಆಯೋಜಕರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top