fbpx
ಮನೋರಂಜನೆ

ಪುಟ್ಟ ಬಾಲಕನ ಆರೋಗ್ಯಕ್ಕಾಗಿ ಬೀದಿಯಲ್ಲಿ ಪೆನ್ನು, ಪೆನ್ಸಿಲ್ ಮಾರಿದ ನಟ ಶರಣ್

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ, ಬಂದ ದುಡ್ಡಿನ ಲೆಕ್ಕ ಬರೆಯುತ್ತಾ , ಮೋಜು ಮಸ್ತಿ ಅಂತ ಮಜಾಮಾಡುವ ಈ ಕಾಲದ ಸಿನಿಮಾ ನಟರ ಮದ್ಯೆ ಕೆಲವೇ ಕೆಲವು ಮಂದಿ ಮಾತ್ರ ಮಾತ್ರ ನಾವು ಸಿನಿಮಾದಲ್ಲಿ ಮಾತ್ರ ಹೀರೋಗಳಲ್ಲ ನಿಜಜೀವನದಲ್ಲೂ ಹೀರೊ ಎಂದು ಸಾಬೀತು ಪಡಿಸುತ್ತಿರುತ್ತಾರೆ. ತಮ್ಮನ್ನು ಬೆಳೆಸಿದ ಈ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ನಿರ್ಮಲ ಆಶಯವನ್ನಿಟ್ಟುಕೊಂಡು ಸಮಾಜಸೇವೆಗಿಳಿಯುವ ಕೆಲವೇ ಕೆಲವು ನಟರ ಪೈಕಿ ನಟ ಶರಣ್ ಕೂಡ ಒಬ್ಬರು.. ಈಗ ಇದೆಲ್ಲಾ ಯಾಕೆ ಹೇಳುತ್ತಿದ್ದೀವಿ ಅಂತೀರಾ ?ಮುಂದೆ ಓದಿ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಸದಾ ನಿಮ್ಮೊಂದಿಗೆ’ ಎಂಬ ಕಾರ್ಯಕ್ರಮದ ಮೂಲಕ ಸಿನಿಮಾ ತಾರೆಯರು ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದಕ್ಕಾಗಿ ಜನಸಾಮಾನ್ಯರಂತೆ ಹಾದಿ ಬೀದಿಯಲ್ಲಿ ಚಿಲ್ಲರೆ ವ್ಯಾಪಾರ ಮಾಡಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಉಪೇಂದ್ರ, ಶ್ರೀಮುರಳಿ, ವಿಜಯ್ ರಾಘವೇಂದ್ರ, ಪ್ರೇಮ್, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ , ಪ್ರಿಯಾಮಣಿ, ಪ್ರಿಯಾಂಕ ಉಪೇಂದ್ರ, ಮಾನ್ವಿತಾ ಹರೀಶ್ ಸೇರಿದಂತೆ ಹಲವರು ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದ್ದಾರೆ.. ಇದೀಗ ನಟ ಶರಣ್ ಸರದಿ.

 

 

9 ವರ್ಷಗಳ ಲವಣ್ ಎಂಬ ಪ್ರತಿಭಾನ್ವಿತ ಬಾಲಕ ‘ಕ್ರೋನ್ಸ್’ಎಂಬ ಖಾಯಿಲೆಗೆ ತುತ್ತಾಗಿದ್ದಾನೆ. ದಿನಕ್ಕೆ 18 ರಿಂದ 20 ಬಾರಿ ಈ ಹುಡುಗ ಬಹಿರ್ದೆಷೆಗೆ ಹೋಗುವಂತೆ ಈ ಖಾಯಿಲೆ ಆವರಿಸಿಕೊಂಡಿದೆ. ಇವರ ತಂದೆ ಈಗಾಗಲೇ 80 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.. ಹಾಗಿದ್ದರೂ ಕಾಯಿಲೆ ಗುಣವಾಗಿಲ್ಲ. ಈ ಹುಡುಗನ ಕಾಯಿಲೆಯನ್ನು ವಾಸಿ ಮಾಡಲು ನಟ ಶರಣ್ ಬೀದಿಯಲ್ಲಿ ಪೆನ್ನು, ಪೆನ್ಸಿಲ್ ಮಾರಾಟ ಮಾಡಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದ ಸಿಗ್ನಲ್ ನಲ್ಲಿ ನಿಂತು ಪೆನ್ನು, ನೋಟ್ ಬುಕ್‍, ಕೀ ಬಂಚ್, ಗಾಗಲ್ಸ್ ಗಳನ್ನು ನಟ ಶರಣ್ ಮಾರಾಟ ಮಾಡಿದ್ದಾರೆ. ಅದರಿಂದ ಬಂದ ಹಣವನ್ನು ಲವಣ್ ಚಿಕಿತ್ಸೆಗೆ ಕೊಡಲಾಗುತ್ತದೆ.. ಪುಟ್ಟ ಬಾಲಕನಿಗಾಗಿ ಶರಣ್ ಸಂಪಾದಿಸಿದ ಹಣವೆಷ್ಟು? ಇದರ ಜೊತೆಗೆ ತಮ್ಮ ವೈಯಕ್ತಿಕವಾಗಿ ಈ ಕುಟುಂಬಕ್ಕೆ ನೀಡಿದ ಸಹಾಯವೇನು? ಎಂಬುದು ಈ ವಾರದ ಸಂಚಿಕೆಯಲ್ಲಿ ತಿಳಿಯುತ್ತದೆ. ಸದಾ ನಿಮ್ಮೊಂದಿಗೆ ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top