ಸಮಾಚಾರ

ಇಡೀ ಊರನ್ನು ಜೇಡ ತನ್ನ ಬಲೆಯಿಂದ ಬಂಧಿಗೊಳಿಸಿದೆ,ಇದ್ರಿಂದ ಬೇಸತ್ತಾ ಜನ ಮಾಡಿದಾದ್ರು ಏನ್ ಗೊತ್ತಾ

ಸಂಪೂರ್ಣ ಊರನ್ನು ಈ ಜೇಡ ತನ್ನ ಬಲೆಯಿಂದ ಬಂದಿ ಗೊಳಿಸಿದೆ. ಇದರಿಂದ ಊರಿನ ಜನ ಮಾಡಿದ್ದು ಏನು ?
ಈಗ ಊರಿಗೆ ಊರೇ ಜೇಡರ ಬಲೆಯೊಳಗೆ ಬಂಧಿಯಾಗಿದೆ. ಮರದ ಕೆಲವು ಟೊಂಗೆಗಳು ಜೇಡರ ಬಲೆಯಿಂದ ಆವೃತ ವಾಗುವುದು ಗೊತ್ತಿದೆ. ಬಹಳ ಸಮಯದಿಂದ ಪಾಳುಬಿದ್ದ ಕಟ್ಟಡಗಳಿಗೂ ಕೂಡ ಇದರ ಪ್ರಭಾವ ತಿಳಿದಿದೆ.
ಆದರೆ ಇಂಥದ್ದೊಂದು ಬೆಳವಣಿಗೆ ಆಗತ್ಯಕ್ಕಿಂತ ಹೆಚ್ಚಾಗಿ ಕಂಡುಬಂದಲ್ಲಿ ಕಿರಿಕಿರಿಯೂ ಸಹ ಆಗುತ್ತದೆ. ಅಂತದ್ದರಲ್ಲಿ ಗ್ರೀಕ್ ನ ಐತೋಲಿಕ್ ಎಂಬ ನಗರ ಇತ್ತೀಚೆಗೆ ಹೆಚ್ಚು ಕಮ್ಮಿ ಸಂಪೂರ್ಣವಾಗಿ ಜೇಡರ ಬಲೆಯಿಂದಲೇ ಆವರಿಸಲ್ಪಟ್ಟಿತ್ತು. ಗ್ರೀಕ್ ದೇಶದ ವೆನಿಸ್ ಎಂದು ಕರೆಯಲ್ಪಡುವ ಈ ನಗರದ ನಿವಾಸಿಗಳ ಅಕ್ಷರಶಃ ಹಾರರ್ ಮೂವಿಯ ದೃಶ್ಯಗಳನ್ನು ನೋಡಿದ ಅನುಭವವಾಗಿದೆಯಂತೆ.

 

 

 

ಎಲ್ಲಿಂದಲ್ಲೋ ಏಕಾಏಕಿ ಸಾವಿರಾರು ಜೇಡಗಳು ರಾತ್ರೋರಾತ್ರಿ ಬಲೆಯನ್ನು ಹಣೆದಿದ್ದವು. ಎಲ್ಲಿ ನೋಡಿದರೂ ಅಲ್ಲಿ ಮರಗಿಡಗಳು, ಕಲ್ಲು, ಬಂಡೆಗಳು, ರಸ್ತೆ ಬೀದಿಗಳಲೆಲ್ಲಾ ಜೇಡರ ಬಲೆಗಳದ್ದೇ ಸಾಮ್ರಾಜ್ಯವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲ ಇಬ್ಬನಿ ಯೊಂದಿಗೆ ಜುಗಲ್ಬಂದಿಯಾಗಿದೆ ಜೇಡರ ಬಲೆಗಳು. ಬೆಳ್ಳಂಬೆಳಗ್ಗೆ ನಿಸರ್ಗ ಸೃಷ್ಟಿಸಿದ ಇಷ್ಟೊಂದು ಜೇಡಗಳು ಎಡವಟ್ಟಾದರೆ ಎಂದು ಕೆಲವರು ಭಯಪಟ್ಟಿದ್ದು ಇದೆ. ಆದರೆ ಈ ಬಗ್ಗೆ ವೆಬ್ಸೈಟ್ ಒಂದಕ್ಕೆ ಸಂದರ್ಶನ ನೀಡಿದ ಸ್ಥಳೀಯ ಜೀವಶಾಸ್ತ್ರಜ್ಞ ಮಾರಿಯಾ ಹೇಳಿರುವ ಪ್ರಕಾರ, ಇದೊಂದು ನಿರುಪದ್ರವಿ ಜೇಡವಾಗಿದ್ದು, ಮಾನವರಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಅದ್ಭುತ ದೃಶ್ಯಗಳ ಫೋಟೋ, ವಿಡಿಯೋ ಸೆರೆಹಿಡಿದಿದ್ದ ಸ್ಥಳೀಯ ಫುಟ್ಬಾಲರ್ ಕಮ್ ಫೋಟೋಗ್ರಾಫರ್, ಲಿಯಾನ್ ನಾಸ್ ಯೂಟ್ಯೂಬ್ ನಲ್ಲಿ ಇದನ್ನು ಹರಿಬಿಟ್ಟಿದ್ದಾರೆ. ನೇರವಾಗಿ ಅದೃಷ್ಟವಂತರು ಇದನ್ನು ಕಣ್ತುಂಬಿಕೊಂಡರು.ನೇರವಾಗಿ ನೋಡಲು ಆಗದೆ ಇರುವವರು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ನೋಡಿ ಅಚ್ಚರಿಗೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top