fbpx
ಮನೋರಂಜನೆ

ಹೆಬ್ಬಾವಿನ ಜೊತೆ ನಟಿ ಕಾಜಲ್ ಸರಸ- ವಿಡಿಯೋ ವೈರಲ್.

ಸಿನಿಮಾ ನಟಿಯರಿಗೆ ನಾನಾ ರೀತಿಯ ಹುಚ್ಚುಗಳಿರುತ್ತವೆ, ಅದರಲ್ಲೂ ಥ್ರಿಲ್ಲಿಂಗ್ ಆಗಿರುವಂತ ಸಾಹಸಮಯ ಕೆಲಸಗಳನ್ನ ಮಾಡಲು ಸದಾ ಮುಂದಿರುತ್ತಾರೆ.. ಅಂಥಾ ಬೋಲ್ಡ್ ನಟಿಯರ ಸ್ಸಲಿನಲ್ಲಿ ಗುರುತಿಸಿಕೊಂಡಿರುವ ಸೌತ್ ಸುಂದರಿ ಕಾಜಲ್ ಅಗರ್ವಾಲ್ ದೈತ್ಯ ಹೆಬ್ಬಾವನ್ನೇ ತನ್ನ ಕೆರಳಿಗೆ ಸುತ್ತಿಕೊಂಡು ಆಟವಾಡಿದ್ದಾಳೆ.. ಇದಕ್ಕೆ ಸಂಭಂದಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

View this post on Instagram

 

WHAT AN EXPERIENCE

A post shared by Kajal Aggarwal (@kajalaggarwalofficial) on

 

ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಸದ್ಯ ಥೈಲಾಂಡ್ ಪ್ರವಾಸದಲ್ಲಿರುವ ಕಾಜಲ್​, ಅಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿ ವೈವಿಧ್ಯಮಯ ಪ್ರಾಣಿಗಳನ್ನ ನೋಡಿಕೊಂಡು ಬಂದಿದ್ದಾಳೆ. ಈ ವೇಳೆ ಅಲ್ಲಿರುವ ಹೆಬ್ಬಾವನ್ನು ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಕೈಯಲ್ಲಿ ಹಿಡಿದು, ಕೊರಳಿನಲ್ಲಿ ಹಾಕಿಕೊಂಡಿದ್ದಾರೆ. , ಕತ್ತಿನಲ್ಲಿ ಹಾವಿನ ಮೂವಿಂಗ್‌ಅನ್ನು ಎಂಜಾಯ್‌ ಮಾಡಿದ್ದಾರೆ. ಅವರ ಈ ಸಾಹಸಕ್ಕೆ ಎಲ್ಲರೂ ದಂಗಾಗಿದ್ದಾರೆ.

ಈ ವಿಡಿಯೋವನ್ನು ಕಾಜಲ್ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದು “ಎಂಥಾ ಅನುಭವ” ಎಂದು ಬರೆದುಕೊಂಡಿದ್ದಾಳೆ. ಹಾವು ಅಂದ್ರೆ ಮೈಲಿ ದೂರ ಹೊಂದುವ ಹುಡುಗಿಯ ನಡುವೆ ದೈತ್ಯ ಅಪಾಯಕಾರಿ ಹೆಬ್ಬಾವನ್ನೇ ಕೊರಳಿಗೆ ಸುತ್ತಿಕೊಂಡ ಕಾಜಲ್ ಸಾಹಸಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಈ ರೀತಿ ಹುಚ್ಚಾಟದ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top