fbpx
ಮನೋರಂಜನೆ

ಕಣ್ಣೀರಿಟ್ಟ ಮುದ್ದು ಸೇವಂತಿ,”ಕೋಟಿ ಕೊಟ್ರೂ ಹೋಗಲ್ಲ ನನಗೆ ಬಿಗ್​ಬಾಸ್​ ಇಷ್ಟವಿಲ್ಲ,ನನ್ನನ್ನು ಬದುಕಲು ಬಿಡಿ” ನಟಿ ವಿಜಯಲಕ್ಷ್ಮಿ

ವಿಜಯಲಕ್ಷ್ಮಿ ಬೆಳೆದು ಬಂದ ದಾರಿ:

ಕಾಲೇಜ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯಲಕ್ಷ್ಮಿಯವರ ಮೊದಲ ಚಲನಚಿತ್ರ ನಾಗಾಭರಣ ನಿರ್ದೇಶನದ ನಾಗಮಂಡಲ. ಅರುಣೋದಯ, ಜೋಗುಳ, ಹಬ್ಬ, ಜೋಡಿಹಕ್ಕಿ ಮುಂತಾದ ಮೂವತ್ತು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಉದಯ ಟಿವಿ ಕಿರುತೆರೆ ವಾಹಿನಿಯಲ್ಲಿನ ಬಂಗಾರದ ಬೇಟೆ ಧಾರಾವಾಹಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.
ವಿಜಯಲಕ್ಷ್ಮಿ ಅವರ ವಯಸ್ಸು ಈಗ 35 ವರ್ಷ ಅಷ್ಟೇ ಅಂದ್ರೆ ನಟಿ ಅನುಷ್ಕಾ ಶೆಟ್ಟಿ ಅವರಿಗಿಂತ ಒಂದು ವರ್ಷ ಚಿಕ್ಕವರು. ಅವರು 14 ವಯಸ್ಸಿನವರಿದ್ದಾಗಲೇ ಸಿನಿಮಾ ರಂಗಕ್ಕೆ ಪ್ರವೇಶ ವಿಶೇಷ.ಅಂದಿನ ಕಾಲಕ್ಕೆ ಕ್ಲಾಸಿ ಹಿಟ್ ನಾಗಮಂಡಲದಲ್ಲಿ ನಟಿಸಿದ ವಿಜಯಲಕ್ಷ್ಮಿಗೆ ಬಹಳ ಖ್ಯಾತಿಯ ಜೊತೆಗೆ ಅನೇಕ ಚಿತ್ರಗಳಿಂದ ಆಫರ್ ಗಳು ಸಹ ಬರಲು ಶುರುವಾಗಿತ್ತು, ದಿಗ್ಗಜರಾದ ವಿಷ್ಣುವರ್ಧನ್ ಅವರೊಂದಿಗೆ ಸಹ ಹೆಜ್ಜೆ ಹಾಕಿದರು ನಟಿ ವಿಜಯಲಕ್ಷ್ಮಿ ಹೀಗಿರುವಾಗ ಅನೇಕ ಕ್ಲಾಸಿ ಹಾಗೂ ಮಾಡರ್ನ್ ಲುಕ್ ನಿಂದ ಪ್ರೇಕ್ಷಕರನ್ನು ಸೂರೆಗೊಂಡ ವಿಜಯಲಕ್ಷ್ಮಿ ಅವರಿಗೆ ವಿವಾದವೊಂದು ಬೆಂಬಿಡದಂತೆ ಕಾಡಿತ್ತು.

 

 

 

ಇತ್ತೀಚಿಗೆ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ತಮ್ಮ ನೋವನ್ನು ತಮ್ಮ ವೃತ್ತಿ ಜೀವನ ಹಾಗೂ ಖಾಸಗಿ ಜೀವನದ ಅನೇಕ ತೊಂದರೆಗಳನ್ನು ಪರಿಪರಿಯಾಗಿ ಹೇಳಿಕೊಂಡಿದ್ದಾರೆ , ನಟಿ ವಿಜಯಲಕ್ಷ್ಮಿ ,’ನಾಗಮಂಡಲ’ ಚಿತ್ರದಲ್ಲಿ ಅಭಿನಯಿಸಲು ಶುರು ಮಾಡಿದಾಗ ವಿಜಯಲಕ್ಷ್ಮಿ ಅವರಿಗೆ ಕೇವಲ ಹದಿನೈದು ವರ್ಷ ಆಗಾಗಲೇ ಆಫರ್ ಗಳು ಆಕೆಯನ್ನು ಹುಡುಕಿಕೊಂಡು ಬಂದಿದ್ದವು.

 

ವಿಜಯಲಕ್ಷ್ಮಿ ಕುರಿತ ಕಾಂಟ್ರವರ್ಸಿಗಳು:
ಅಷ್ಟು ದಿನ ಗೌರವದಿಂದ ವಿಜಯಲಕ್ಷ್ಮಿ ಹಾಗೂ ವಿಜಿ ಎಂದು ಕರೆಯುತ್ತಿದ್ದ ಅನೇಕರು ಆಕೆಯನ್ನು ಚಪ್ಪಲಿ ವಿಜಯಲಕ್ಷ್ಮಿ ಎಂದು ಕರೆಯಲು ಶುರು ಮಾಡಿದರು ,ವಿಜಯಲಕ್ಷ್ಮಿ ಖ್ಯಾತ ನಟರೊಬ್ಬರಿಗೆ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದ್ದಾರೆ ಎಂದು ಆ ಕಾಲದ ಪತ್ರಿಕೆಗಳು ಹೆಡ್ ಲೈನ್ ಮಾಡಿ ನ್ಯೂಸ್ ಅನ್ನು ಹರಿಯಬಿಟ್ಟಿದ್ದು ಈ ವಾರ್ತೆಯನ್ನು ಕೇಳಿದ ವಿಜಯಲಕ್ಷ್ಮಿ ಕಂಗಾಲಾಗಿ ಹೋಗಿದ್ದರು ಅದೊಂದು ಸುಳ್ಳು ಸುದ್ದಿಯಾಗಿತ್ತು ಆದರೆ ಈ ವಿವಾದ ಚಿತ್ರರಂಗದ ತುಂಬೆಲ್ಲ ತುಂಬಿ ವಿಜಯಲಕ್ಷ್ಮಿ ಅವರ ಹೆಸರನ್ನು ಹಾಳು ಮಾಡಿತ್ತು .

 

 

 

ಈ ಒಂದು ವಿವಾದ ಸಾಕಾಗಿತ್ತು ಆಕೆ ಕನ್ನಡ ಇಂಡಸ್ಟ್ರಿಯನ್ನು ಬಿಟ್ಟು ತಮಿಳು ಇಂಡಸ್ಟ್ರಿಯನ್ನು ಸೇರಿಬಿಟ್ಟಿದ್ದರು ಆಕೆಯ ಕೆರಿಯರ್ ಸಂಪೂರ್ಣವಾಗಿ ನಾಶವಾಗಿತ್ತು ಕನ್ನಡದಲ್ಲಿ ಆಕೆಗೆ ಅವಕಾಶಗಳು ಸಿಗಲಿಲ್ಲ, ಈ ಒಂದು ವಿವಾದ ಆಕೆಯನ್ನು ಕನ್ನಡ ಚಿತ್ರರಂಗದಿಂದ ದೂರ ಮಾಡಿಬಿಟ್ಟಿತು .ಆಕೆಯ ನೋವಿಗೆ ಕರಗಿದ ತುಂಬಾ ಜನ ನಿರ್ಮಾಪಕರು ಅನೇಕ ಸಿನಿಮಾಗಳ ಆಫರ್ ಗಳನ್ನೂ ವಿಜಯ ಲಕ್ಷ್ಮಿಯವರಿಗೆ ನೀಡಿದ್ದಾರೆ ,ಈಗ ಆ ಸಿನಿಮಾಗಲ್ಲಿ ಬ್ಯುಸಿ ಇರುವ ವಿಜಯಲಕ್ಷ್ಮಿಯ ಬಗ್ಗೆ ಹೊಸ ಹೊಸ ಸುದ್ದಿಗಳು ಹರಿದಾಡುತ್ತಿದೆ ,ಈ ಸುದ್ದಿ ಏನು ಅಂದ್ರೆ ವಿಜಯ ಲಕ್ಷ್ಮಿ ಕನ್ನಡದ ಬಿಗ್​ಬಾಸ್​ ಸೀಸನ್ 6​ ಗೆ ಹೋಗುವುದಾಗಿ ಅನೇಕ ಸುದ್ದಿ ಪ್ರಚಾರಗಳು ನಡೆಯುತ್ತಿದೆ ಇದರ ಬಗ್ಗೆ ಮಾತನಾಡಿದ ವಿಜಯ ಲಕ್ಷ್ಮಿ ಕೆಂಡಾಮಂಡಲರಾಗಿದ್ದಾರೆ.

ಬಿಗ್ ಬಾಸ್ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ ಮಾತುಗಳು:
“ಯಾವ ಆಧಾರದ ಮೇಲೆ ನಾನು ಬಿಗ್​ಬಾಸ್​ ಸ್ಪರ್ಧಿಯಾಗುತ್ತಾರೆ ಅಂತಾ, ಇವರು ಹೇಳ್ತಿದ್ದಾರೋ ಗೊತ್ತಿಲ್ಲ, ಆದರೆ ಇದು ನನ್ನ ಕೆರಿಯರ್ ಪ್ರಶ್ನೆ​. ಪ್ಲೀಸ್​ ನನ್ನನ್ನು ಬದ್ಕೋಕೆ ಬಿಡಿ. ನಾನು ಕೂಡ ಹೆಣ್ಣು. ನನಗೆ ಈಗ ಕಷ್ಟಗಳನ್ನು ದಾಟಿ ಸಿನಿಮಾ ಮಾಡೋ ಅವಕಾಶ ಸಿಗುತ್ತಿದೆ. ನನ್ನ ಜೀವನ ಸರಿ ಹೋಗ್ತಾ ಇದೆ ಎನ್ನೋವಾಗ ಈ ಬಿಗ್​ಬಾಸ್​ ಹೆಸರನ್ನ ತಗೊಂಡು ನನ್ನನ್ನು ಹರ್ಟ್​ ಮಾಡ್ತಿದ್ದಾರೆ” ಅಂತಾ ವಿಜಯ್​ಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.
ನನಗೆ ಬಿಗ್​ಬಾಸ್​ ಮನೆಗೆ ಹೋಗಲು ಇಷ್ಟವಿಲ್ಲ. ಬಹಳ ಹಿಂದಿನ ಸೀಸನ್​ ಟೈಮ್ ನಿಂದ ನನ್ನನ್ನ ಟಾರ್ಗೆಟ್​ ಮಾಡುತ್ತಲೇ ಬಂದಿದ್ದಾರೆ. ನಾನು ಬಿಗ್​ಬಾಸ್​ಗೆ ಹೋಗಲ್ಲ, ನನಗೆ ಇಷ್ಟವಿಲ್ಲ ಅಂದ್ರೂ ನಾನು ಬರುತ್ತೇನೆ ಎಂದು ಸುದ್ದಿ ಮಾಡುತ್ತಾರೆ. ಅದ್ಯಾಕೆ ಅದನ್ನ ಮಾಡುತ್ತಾರೋ ಗೊತ್ತಿಲ್ಲ. ನನ್ನ ಮೇಲೆ ನಿರ್ಮಾಪಕರು, ನಿರ್ದೇಶಕರು ಬಂಡವಾಳ ಹಾಕಿದ್ದಾರೆ. ಹೀಗೆಲ್ಲಾ ನ್ಯೂ ಸೆನ್ಸ್​ ಕ್ರಿಯೇಟ್​ ಮಾಡ್ತಾ ಇರೋದು ನನ್ನ ಲೈಫ್​ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

 

 

 

ಬಿಗ್​ಬಾಸ್ನಲ್ಲಿ ಫ್ರೆಂಡ್ಸ್​​ ಎಮೋಷನಲ್ಸ್​ ಜೊತೆ ಫೈಟ್ ಮಾಡಬೇಕು. ನನ್ನ ಭಾವನೆಗಳಿಗೆ ನಾನು ಹಾಗೆ ಇರೋದಿಕ್ಕೆ ಆಗಲ್ಲ. ಹೀಗಾಗಿಯೇ ನಾನು ಬಿಗ್​ಬಾಸ್​ನ್ನ ಆಯ್ಕೆ ಮಾಡಲ್ಲ. ನಾನು ಕಷ್ಟ ಪಟ್ಟು ಜೀವನದಲ್ಲಿ ಮುಂದೆ ಬರೋಕೆ ಪ್ರಯತ್ನ ಮಾಡ್ತಾ ಇದ್ದೀನಿ. ದಯಮಾಡಿ ನಾನು ಬಿಗ್​ಬಾಸ್​ನ್ನು ನೋಡೋ ದೃಷ್ಟಿಯೇ ಬೇರೆ. ನೀವೆಲ್ಲರೂ ಬಿಗ್​ಬಾಸ್​ ಇಷ್ಟ ಪಡುತ್ತಿರಿ, ನಾನು ಆ ಶೋ ನೊಡೋದೇ ಬೇರೆ. ಕೆಲ ಮಾಧ್ಯಮಗಳು ನನ್ನನ್ನು ಬಿಗ್​ಬಾಸ್​ಗೆ ಬರುತ್ತಾರೆ ಅಂತಾ ಸುದ್ದಿ ಮಾಡುತ್ತಾರೆ, ಯಾಕೆ ನನ್ನ ಕರಿಯೆರ್​ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದಾರೋ ಗೊತ್ತಿಲ್ಲ.ಈ ಸುದ್ದಿ ಕೇಳಿ ನನಗೆ ಸಿನಿಮಾ ಚಾನ್ಸ್​ ಕೊಟ್ಟವರೂ ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. ಸಿನಿಮಾ ಮಾಡ್ತೀನಿ ಅಂತಾ ಹೇಳಿ ಇವರು ಬಿಗ್​ಬಾಸ್​ಗೆ ಹೊರಟೋದ್ರೆ ನಮ್ಮ ಸಿನಿಮಾ ಗತಿ ಏನು ಅಂತಾ ಯೋಚಿಸ್ತಾ ಇದ್ದಾರೆ.
ನನಗೆ ಇನ್ನು ಹತ್ತು ಸೀಸನ್​ನಲ್ಲೂ ಕರೆದರೆ, ಅಥವಾ ನಾನು ಯಾವ ಕಷ್ಟದಲ್ಲಿದ್ದರೂ ನಾನು ಬಿಗ್​ಬಾಸ್​ ಶೋಗೆ ಬರಲ್ಲ.ನನ್ನನ್ನು ವಿವಾದಾತ್ಮಕ ನಟಿ ಅಂತಾ ಹೇಳಿ ಹೇಳಿ ಸಿಕ್ಕಾಪಟ್ಟೆ ನನ್ನನ್ನು ಅಂಡರ್​ ಎಸ್ಟಿಮೆಟ್​ ಮಾಡಲಾಗುತ್ತಿದೆ.ನನಗೆ ಬಿಗ್​ಬಾಸ್​ ನಲ್ಲಿ ಟಾಸ್ಕ್​ ಮಾಡೋದು ಬಹಳ ಕಷ್ಟ

ದಯಮಾಡಿ ನಿಲ್ಸಿ. ನನ್ನ ಮೇಲೆ ಸಿನಿಮಾ ಮಾಡೋ ಜವಬ್ದಾರಿ ಇದೆ. ನಾನು ಜೀವನದಲ್ಲಿ ಕಷ್ಟ ಪಡ್ತೀದ್ದೀನಿ ಅಂತಾ ಗೊತ್ತು.ಇದನ್ನು ಉಪಯೋಗಿಸಿಕೊಂಡು ನನ್ನ ಮೇಲೆ ಪರಿಣಾಮ ಬೀರುತ್ತೆ. ನನಗೆ ಸೃಜನ್,​ ಶೋ ಹೋದಾಗಲೇ ನನ್ನನ್ನು ಕರೆದಿದ್ರು. ನನಗೆ ಅವಾಗ್ಲೇ ನನಗೆ ಬಿಗ್​ಬಾಸ್​ ಶೋ ಇಷ್ಟ ಆಗಿಲ್ಲ. ಯಾವ ಭಾಷೆನಲ್ಲೂ ಬಿಗ್​ಬಾಸ್​ ಬಂದ್ರೂ ನನಗೆ ಇಷ್ಟನೇ ಇಲ್ಲ.ಈ ಹಿಂದೆ ತಮಿಳಿನಲ್ಲೂ ಆಫರ್​ ಬಂದಿತ್ತು, ನಾನೇ ರಿಜೆಕ್ಟ್​ ಮಾಡ್ದೆ ಎಂದ್ರು.
ನನಗೆ ಕರೆ ಬಂತು. ನಟಿ ವಿಜಯಲಕ್ಷ್ಮಿ ಬರುತ್ತಾರೆಂದು ಮತ್ತೆ ಮತ್ತೆ ನ್ಯೂಸ್​ ಕ್ರಿಯೇಟ್​ ಮಾಡ್ತಾ ಇದ್ದಾರೆ. ನಾನು ಮತ್ತೆ ಮತ್ತೆ ಬರಲ್ಲ ಅಂತಾ ಹೇಳ್ತಾ ಇದ್ರೂ ನನ್ನನ್ನು ಯಾಕೆ ಟಾರ್ಗೆಟ್​ ಮಾಡ್ತಾ ಇದ್ದಾರೆ ಗೊತ್ತಾಗ್ತಿಲ್ಲ. ಶೋ ಗೆ ಸಂಬಂಧಿಸಿದ್ದವರ ಜೊತೆ ಮಾತನಾಡಿದ್ದೇನೆ ಆದ್ರೂ, ನಾನು ಕಷ್ಟದಲ್ಲಿದ್ದೇನೆ ಎಂದು ಇಷ್ಟು ಸಾಯಿಸಬಾರದು ಅಲ್ಲವೇ ಎಂದು ಅಸಮಧಾನ ವ್ಯಕ್ತಪಡಿಸಿದ್ರು.ನನಗೆ ಎಷ್ಟು ಕೋಟಿ ಕೊಟ್ರೂ ನಾನು ಬಿಗ್​ಬಾಸ್​ಗೆ ಬರಲ್ಲ. ದಯಮಾಡಿ ಈ ಕಾಂಟ್ರೋವರ್ಸಿ ಸುದ್ದಿನಾ ನಿಲ್ಲಿಸಿ,ನನಗೆ ಬದುಕೋಕೆ ಬಿಡಿ ಎಂದು ಕಣ್ಣೀರು ಹಾಕುತ್ತಾ ಅವರ ದುಃಖ ತೋಡಿಕೊಂಡಿದ್ದಾರೆ ವಿಜಯ ಲಕ್ಷ್ಮಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top